Friday, 13th December 2024

ನಮ್ಮ ನಾಯಕ ಸುಧಾಕರ್ ವಿರುದ್ಧ ಆರೋಪ ತರವಲ್ಲ: ಕೂಡಾ ಅಧ್ಯಕ್ಷ ಕೃಷ್ಣಮೂರ್ತಿ

ಚಿಕ್ಕಬಳ್ಳಾಪುರ : ಸಚಿವ ಸುಧಾಕರ್ ಸರ್ವಜಾತಿಗಳನ್ನು ಸಮಾನವಾಗಿ ಕಾಣುತ್ತಿರುವ ಜನಪರ ನಾಯಕ. ಅವರ ಜತೆಗೆ ಇದ್ದು ಎಲ್ಲವನ್ನೂ ಪಡೆದುಕೊಂಡು ಈಗ ಅವರ ವಿರುದ್ದವೇ ಹಗುರವಾಗಿ ಮಾತನಾಡುತ್ತಿರುವ ಕಾಂಗ್ರೆಸ್ ಮುಖಂಡ ಮಿಲ್ಟನ್ ವೆಂಕಟೇಶ್ ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ ಅವರಿಗೆ ಶೋಭೆ ತರುವುದಿಲ್ಲ ಎಂದು ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ ಆಕ್ರೋಶ ವ್ಯಕ್ತ ಪಡಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತ ನಾಡಿದರು.

ಸಚಿವ ಸುಧಾಕರ್ ನಮ್ಮ ನಾಯಕರು ಅವರನ್ನು ಟೀಕಿಸುವ ನೈತಿಕ ಹಕ್ಕು ಸುದ್ದಿಗೋಷ್ಟಿ ಯಲ್ಲಿ ಮಾತನಾಡಿರುವ ಯಾವ ಮುಖಂಡರಿಗೂ ಇಲ್ಲ. ವಿಶೇಷವಾಗಿ ಮಿಲ್ಟನ್ ವೆಂಕಟೇಶ್ ಕಾಲದಿಂದ ಕಾಲಕ್ಕೂ ದಿನದಲಿತರನ್ನು ತುಳಿದುಕೊಂಡೇ ಮೇಲೆ ಬಂದಿರುವ ವ್ಯಕ್ತಿ. ಸುಧಾಕರ್ ಅವರಿಂದ ನಿನ್ನೆ ಮೊನ್ನೆಯವರೆಗೆ ಎಲ್ಲಾ ಲಾಭ ಪಡೆದುಕೊಂಡಿದ್ದೀರಿ. ಈಗ ಅವರಿಂದ ದೂರ ವಾಗಿ ದಲಿತ ವಿರೋಧಿ ಎಂದು ಕರೆಯುವುದು ಸುಳ್ಳು. ನಾನು ಅವರನ್ನು ಕೇಳದೆಯೇ ನಗರಾಭಿವೃದ್ಧಿ ಪ್ರಾಧಿಕಾರದ ಅವಕಾಶ ನೀಡಿದ್ದಾರೆ. ನಿಮಗೂ ಕೂಡ ಜಿಲ್ಲಾ ಪಂಚಾಯಿತಿ ಸೀಟು ನೀಡಿರಲಿಲ್ಲವೆ? ಎಪಿಎಂಸಿ ನಿರ್ದೇಶಕರನ್ನಾಗಿ ಮಾಡಿರ ಲಿಲ್ಲವೆ? ಅಧಿಕಾರವನ್ನು ಅನುಭವಿಸಿ ಉಂಡು ಹೋದ ಕೊಂಡು ಹೋದ ಎನ್ನುವ ಹಾಗೆ ಮಾತನಾಡುವುದು ತಪ್ಪು. ನಗರಸಭೆ ಯಲ್ಲಿ ನೀವು ಅಧಿಕಾರಕ್ಕಾಗಿ ಮಾಡಿರುವ ಕೆಲಸ ಎಲ್ಲರಿಗೂ ಗೊತ್ತಿದೆ.ಇನ್ನು ಮುಂದೆ ಮಾತನಾಡಬೇಕಾದರೆ ಎಚ್ಚರಿಕೆಯಿಂದ ನಾಲಿಗೆ ಹತೋಟಿಯಲ್ಲಿ ಇಟ್ಟುಕೊಂಡು ಮಾತನಾಡುವುದು ನಿಮಗೇ ಒಳ್ಳೆಯದು ಎಂದು ಕಿಡಿ ಕಾರಿದರು.

ಮಾಜಿ ಶಾಸಕ ಎಸ್‌ಎಂ ಮುನಿಯಪ್ಪ ಅವರು ಕೂಡ ಸುಧಾಕರ್ ಶಾಸಕರಾಗಿ ಆಯ್ಕೆಯಾಗಿದ್ದ ಕಾಲದಲ್ಲಿ ಅವರನ್ನು ಹೊಗಳಿ ಕೊಂಡು ಇದ್ದವರು. ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರವನ್ನು ಸವಿದಿರುವಂತಹವರು.ಈಗ ಬಾಯಿಗೆ ಬಂದ0ತೆ ಮಾತನಾ ಡುತ್ತಿದ್ದಾರೆ. ರಾಜಕೀಯವಾಗಿ ಏನು ಬೇಕಾದರೂ ಮಾತನಾಡಿ, ವೈಯಕ್ತಿಕವಾಗಿ ಮಾತನಾಡುವುದು ಸರಿಯಲ್ಲ. ನಮ್ಮ ನಾಯಕರ ಬಗ್ಗೆ ಹೀಗೆ ಮಾತನಾಡಿದರೆ ಕೇಳಿಕೊಂಡು ಸುಮ್ಮನೆ ಕೂರುತ್ತಾರೆ ಎಂದುಕೊ0ಡಿದ್ದರೆ ಇಂದಿಗೇ ಅದನ್ನು ಬಿಟ್ಟುಬಿಡಿ ಎಂದು ತಾಕೀತು ಮಾಡಿದರು.

ಬಾಲಕುಂಟಹಳ್ಳಿ ಗಂಗಾಧರ್ ಮಾತನಾಡಿ ಸಮುದಾಯದ ಅಭಿವೃದ್ಧಿಯ ದೃಷ್ಟಿಯಿಂದ ನಾವು ಸಚಿವ ಸುಧಾಕರ್ ಅವರಿಗೆ ಬೆಂಬಲ ನೀಡಿದ್ದೇವೆ.ಮಿಲ್ಟ್ನ್ ವೆಂಕಟೇಶ್ ಅವರೇ ಸುಧಾಕರ್ ಅವರು ದಲಿತ ವಿರೋಧಿಯಾಗಿದ್ದರೆ ನೀವು ಅವರ ಜತೆಗೆ ಇದ್ದಾಗ ಯಾಕೆ ಪ್ರಶ್ನೆ ಮಾಡಲಿಲ್ಲ.ಇನ್ನು ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ ಅವರು ಕೂಡ ದಲಿತರು ಭೀತಿಯಲ್ಲಿ ಇದ್ದಾರೆ.

ಸುಧಾಕರ್ ದಲಿತರ ಅಭಿವೃದ್ಧಿಗೆ ಮಾರಕವಾಗಿದ್ದಾರೆ. ಎಂದೆಲ್ಲಾ ಆರೋಪ ಮಾಡುತ್ತಿದ್ದಾರೆ. ಇವರಿಗೆ ನಾನು ಕೇಳುತ್ತೇನೆ ನೀವು ಸಚಿವ ಸುಧಾಕರ್ ಅವರಿಂದ ಲಾಭ ಮಾಡಿಕೊಳ್ಳುವಾಗ ಇವೆಲ್ಲಾ ಏಕೆ ನೆನಪು ಆಗಲಿಲ್ಲ.ನೀವು ಶಾಸಕರಾಗಿದ್ದಾಗ ಎಸ್.ಸಿ. ಗಳನ್ನು ಬೆಳೆಯಲೇ ಬಿಟ್ಟಿಲ್ಲ.ಯಾರೋ ಬೆಳೆಸುತ್ತಿದ್ದಾರೆ ಎಂದಾಗ ಅಡ್ಡಗಾಲು ಹಾಕಲು ಏಕೆ ಮುಂದೆ ಬರುತ್ತೀರಿ. ನಗರಾಭಿ ವೃದ್ಧಿ ಪ್ರಾಧಿಕಾರದ ಅವದಿ ೩ ತಿಂಗಳು ಇರುವಾಗ ಚುನಾವಣೆ ದೃಷ್ಟಿಯಿಂದ ಅಧ್ಯಕ್ಷ ಪದವಿ ನೀಡಲಾಗಿದೆ ಎನ್ನುತ್ತೀರಿ, ಕಾಂಗ್ರೆಸ್ ಪಕ್ಷ ಅದನ್ನೂ ಕೂಡ ಮಾಡಲಿಲ್ಲ ಏಕೆ ಎಂದು ಪ್ರಶ್ನಿಸಿದರು.

ವೇದಿಕೆಯಲ್ಲಿ ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ತಿರುಮಳಪ್ಪ, ನಗರಸಭೆ ಮಾಜಿ ಅಧ್ಯಕ್ಷ ಮುನಿಕೃಷ್ಣ, ನಂದಿ ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಪ್ಪ, ಮತ್ತಿತರರು ಇದ್ದರು.