Saturday, 14th December 2024

ಸುಧಾಕರ್ ೧ಲಕ್ಷ ಲೀಡ್‌ನಿಂದ ಗೆಲ್ಲಿಸಬೇಕು: ಎಂಎಫ್‌ಸಿ ನಾರಾಯಣಸ್ವಾಮಿ ಮನವಿ

ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಸುಧಾಕರ್ ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರವನ್ನು  ಅಭಿವೃದ್ದಿತ್ತ ಕೊಂಡೊಯ್ದ ದೃವತಾರೆಯಾಗಿದ್ದಾರೆ. ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವ ಆಸೆಯಿದ್ದರೆ ಈ ಬಾರಿ ನಡೆಯುವ ಚುನಾವಣೆಯಲ್ಲಿ ೧ ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿAದ ಜಯಶೀಲರನ್ನಾಗಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ದೊಡ್ಡಮರಳಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಂಎಫ್‌ಸಿ ನಾರಾಯಣಸ್ವಾಮಿ ತಿಳಿಸಿದರು.

ತಾಲೂಕಿನ ದೊಡ್ಡಮರಳಿ ಗ್ರಾಮದಲ್ಲಿ ನಡೆದ ಗ್ರಾಮಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಚಿಕ್ಕಬಳ್ಳಾಪುರ ತಾಲೂಕಿನ ೪೫ ವರ್ಷಗಳ ರಾಜಕೀಯ ಇತಿಹಾಸದಲ್ಲಿ ಹೊಸ ಅಭಿವೃದ್ಧಿಯ ಶಕೆ ಪ್ರಾರಂಭವಾಗಿದೆ.

ಮನರoಜನಾ ಕಾರ್ಯಕ್ರಗಳಾದ ಸಂಕ್ರಾAತಿ ಸುಗ್ಗಿ, ಚಿಕ್ಕಬಳ್ಳಾಪುರ ಉತ್ಸವ, ಧಾರ್ಮಿಕವಾಗಿ ಶಿವೋತ್ಸವ,ಈಶಾ ಫೌಂಡೇಷನ್ ಸ್ಥಾಪನೆ, ಸ್ವಸಹಾಯ ಸಂಘಗಳು, ಮಹಿಳಾ ಸಂಘಗಳಿಗೆ ಶೂನ್ಯಬಡ್ಡಿ ದರದಲ್ಲಿ ಸಾಲವಿತರಣೆ,ಮೆಡಿಕಲ್ ಕಾಲೇಜು ಸ್ಥಾಪನೆ, ಕೆರೆಗಳಿಗೆ ನೀರು ತುಂಬಿಸುವ ಕೆಲಸ,ನೀರು, ನೆರಳು, ವಸತಿ ಸೌಕರ್ಯ, ರಸ್ತೆಗಳ ಅಭಿವೃದ್ದಿ, ದೀನದಲಿತರಿಗೆ ಗಂಗಾಕಲ್ಯಾಣ ನೆರವು ಹೀಗೇ ಸಾಲು ಸಾಲು ಅಭಿವೃದ್ದಿ  ಕಾರ್ಯಗಳನ್ನುಮಾಡಿದ್ದಾರೆ.ಇವರ ಏಳಿಗೆಯನ್ನು ಸಹಿಸದ ಕೈಲಾಗದ ಜನ ಇವರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಾರೆ.ಯಾರು ಏನೇ ಹೇಳಿದರೂ ಕ್ಷೇತ್ರದ ಜನತೆಯ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಇದನ್ನು ಬದಲಿಸಲು ಯಾರಿಂದಲೂ ಆಗುವುದಿಲ್ಲ ಎಂದರು.

ಗ್ರಾಮಪ0ಚಾಯಿತಿ ಅಧ್ಯಕ್ಷ ಸತೀಶ್ ಮಾತನಾಡಿ ಸುಧಾಕರ್ ಅವರ ಮುಂದೆ ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಬಂದು ನಿಂತರೂ ಸೋಲುವುದು ಖಚಿತ.ಬಿಜೆಪಿ ಸರಕಾರದ ವರ್ಚಸ್ವೀ ನಾಯಾಕರಾಗಿ ಬೆಳೆದಿರುವ ಸಚಿವ ಸುಧಾಕರ್ ಅವರ ಬೆಳವಣಿಗೆ ಸಹಿಸದ ವಿರೋಧಿಗಳು ನಾಲಿಗೆಗೆ ಹಿಡಿತ ಇಲ್ಲದೆ ಮಾತನಾಡುತ್ತಾರೆ.ಆದರೆ ಬಿಜೆಪಿ ಪಕ್ಷ ಮತ್ತು ಸರಕಾರದ ಘಟಾನುಗಟಿಗಳೇ ಇವರ ಬಗ್ಗೆ ಮೆಚ್ಚಿಕೆಯ ಮಾತುಗಳನ್ನಾಡುವುದು ಸುಲಭದ ವಿಚಾರವಲ್ಲ.ಕೊರೋನಾ ಸಂದರ್ಭದ ಇವರ ಸಾಧನೆಯನ್ನು ಪ್ರಧಾನಿ ಮೋದಿಯವರೇ ಗುರುತಿಸಿ ಭೇಷ್ ಎಂದಿದ್ದಾರೆ. ಇದಕ್ಕಿಂತಲೂ ಸಾಧನೆ ಬೇರೇನು ಬೇಕು ಎಂದರು.

ಈ ಬಾರಿಯ ಚುನಾವಣೆ ಅಭಿವೃದ್ಧಿ ವರ್ಸಸ್ ಕುತಂತ್ರ ರಾಜಕಾರಣದ ನಡುವೆ ನಡೆಯಲಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆ ಎಂದಿಗೂ ಕೂಡ ಹೊರಗಿನವರಿಗೆ ಮಣೆ ಹಾಕುವುದಿಲ್ಲ. ಮನೆಮಗನ ಕೈಬಿಡುವುದಿಲ್ಲ.ಯಾರು ಬಂದು ಏನೇ ತಿಪ್ಪರಲಾಗ ಹಾಕಿದರೂ ಸಚಿವ ಸುಧಾಕರ್ ಅವರು ೧ ಲಕ್ಷಕ್ಕೂ ಮೀರಿದ ಮತಗಳ ಅಂತರದಿAದ ಜಯವನ್ನು ಪಡೆದೇ ಪಡೆಯುತ್ತಾರೆ ಎಂದು ಭವಿಷ್ಯ ನುಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸುಧಾಕರ್ ನಿಮ್ಮೆಲ್ಲರ ಹರಕೆ, ಅಭಿಮಾನ ಹಾರೈಕೆಗಳ ಬಲದಿಂದ ನಾನು ಈ ಎತ್ತರಕ್ಕೆ ಏರಲು ಸಾಧ್ಯವಾಗಿದೆ. ಎಲ್ಲಿಯವರೆಗೆ ನಿಮ್ಮ ಪ್ರೀತಿ ಆಶೀರ್ವಾದ ನನ್ನ ಮೇಲಿರಲಿದೆಯೋ ಅಲ್ಲಿಯವರೆಗೆ ನನಗೆ ಅಂಜಿಕೆಯೇ ಇಲ್ಲ.ನಾನು ಕಳೆದ ೧೫ ವರ್ಷಗಳಿಂದ ಚಿಕ್ಕಬಳ್ಳಾಪುರದ ಬಗ್ಗೆ ಕಲ್ಪನೆ ಕನಸು ಕಂಡಿದ್ದೇನೆ. ನಿಮ್ಮಗಳ ಅಭಿಮಾನದಿಂದ ದೊರೆತಿರುವ ರಾಜಕೀಯ ಶಕ್ತಿಯನ್ನು ಬಳಸಿ ಅದನ್ನು ಸಾಕಾರ ಮಾಡುತ್ತಾ ಸಾಗಿದ್ದೇನೆ.ಮುಂದಿನ ದಿನಗಳಲ್ಲಿ ಇನ್ನಷ್ಟು ವೇಗವಾಗಿ ಇದನ್ನು ಅನುಷ್ಟಾನಕ್ಕೆ ತಂದು, ಬೆಂಗಳೂರಿನ ಪರ್ಯಾಯ ಉಪನಗರವಾಗಿ ಅಭಿವೃದ್ದಿ ಪಡಿಸಲು ನೀಲನಕ್ಷೆ ಸಿದ್ದಪಡಿಸಲಾಗಿದೆ ಎಂದರು.

ಈಕ್ಷೇತ್ರದಲ್ಲಿ ಅತ್ಯಗತ್ಯವಾಗಿ ಜನತೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಥಮ ಆಧ್ಯತೆ ನೀಡಲಾಗಿದೆ. ರಾಜ್ಯದ ಇತಿಹಾಸ ದಲ್ಲಿ ಇದೇ ಮೊದಲ ಬಾರಿಗೆ ೨೨ಸಾವಿರ ನಿವೇಶನಗಳನ್ನು ಅರ್ಹರಿಗೆ ಉಚಿತವಾಗಿ ನೀಡುವ ಕೆಲಸ ಮಾಡುತ್ತಿದ್ದೇನೆ. ೭೫ ವರ್ಷಗಳಲ್ಲಿ ಈ ಕೆಲಸ ಯಾರೂ ಮಾಡಿಲ್ಲದ ಕೆಲಸ ಮಾಡುತ್ತಿರುವುದಕ್ಕೆ ನನಗೆ ಹೆಮ್ಮೆಯಿದೆ. ದೊಡ್ಡಮರಳಿ ಗ್ರಾಮ ಪಂಚಾಯಿತಿ ಒಂದರಲ್ಲೇ ೪೦೦ ಕುಟುಂಬಗಳಿಗೆ ಆಶ್ರಯ ಕಲ್ಪಿಸುವ ಕೆಲಸವಾಗುತ್ತಿದೆ ಎಂದರು.

ವೇದಿಕೆಯಲ್ಲಿ ಮಾಜಿ ಗ್ರಾಪಂ ಅಧ್ಯಕ್ಷರಾದ ಮಂಜುನಾಥ್, ವೆಂಕಟೇಶ್,ಕುಮಾರ್, ಕೊಳವನಹಳ್ಳಿ ದ್ಯಾವಣ್ಣ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ, ಗಂಗಾಧರ್,ಗೋಪಾಲ್, ಕುಪ್ಪಹಳ್ಳಿ ನಾರಾಯಣಸ್ವಾಮಿ, ಮತ್ತಿತರರು ಇದ್ದರು.