Wednesday, 11th December 2024

ಮಾ.೨ ಕ್ಕೆ ಶಿಡ್ಲಘಟ್ಟದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ

ಗರ್ಭಿಣಿ ಸಾವಿಗೆ ಕಾರಣವಾದ ವೈದ್ಯ ಸಿಬ್ಬಂದಿ ವಜಾಗೆ ಆಗ್ರಹಿಸಿ

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆ ಜಿಲ್ಲಾಸ್ಪತೆಯ ವೈದ್ಯರು ಹಾಗೂ ಸಿಬ್ಬಂದಿ ದಿವ್ಯ ನಿರ್ಲಕ್ಷತನದಿಂದ ೨೧ ವರ್ಷದ ನರ್ಸಿಂಗ್ ಓದುತ್ತಿದ್ದ ಗರ್ಭಿಣಿ ಸಾವಿಗೀಡಾಗಿದ್ದಾರೆ.ತಪ್ಪಿತಸ್ತ ವೈದ್ಯರು ಮತ್ತು ದಾದಿಯರ ವಜಾಗೆ ಆಗ್ರಹಿಸಿ ಮಾ.೨ ರಂದು ಶಿಡ್ಲಘಟ್ಟದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಸಮಾನ ಮನಸ್ಕರ ಸಂಘದ ಸದಸ್ಯ ಈಧರೆ ಪ್ರಕಾಶ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಅಬ್ಲೂಡು ನಿವಾಸಿ ಮೌನಿಕ ೨೦೨೩ರ ಜ.೧೩ರಂದು ಹೆರಿಗೆಗೆಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರ ಅನುಪಸ್ಥಿತಿಯಲ್ಲಿ ಹೆರಿಗೆ ಮಾಡಿಸಲು ಮುಂದಾದ ದಾದಿಯರು,ಕರ್ತವ್ಯದ ಅವಧಿಯಲ್ಲಿ ಹಾಜರಿರದ ವೈದ್ಯರ ಕಾರಣ ಮೊಬೈಲ್ ಮಾರ್ಗದರ್ಶನದ ಮೂಲಕ ಹೆರಿಗೆ ಮಾಡಲು ಮುಂದಾಗಿದ್ದರಿAದಲೇ  ಮೋನಿಕ ಸಾವಿಗೀಡಾಗಿದ್ದಾರೆ.ವೃತ್ತಿಯ ಬಗ್ಗೆ ಉದಾಸೀನ ತೋರಿ ಅಮಾಯಕ ಜೀವದ ಬಲಿಗೆ ಕಾರಣವಾದ ಆರೋಪಿಗಳನ್ನು ಕೂಡಲೇ ಕರ್ತವ್ಯದಿಂದ ವಜಾಗೊಳಿಸಿ ಕಾನೂನಿನಂತೆ ಕ್ರಮಜರುಗಿಸಬೇಕು ಎಂದು ಆಗ್ರಹಿಸಿದರು.

ತಪಾಸಣೆಗೆಂದು ಬಂದ ನಂತರ ಹೆರಿಗೆ ವಾರ್ಡಿಗೆ ದಾಖಲಾದ ಮೌನಿಕ ಆರೋಗ್ಯವಾಗಿಯೇ ಇದ್ದರು.ಅನುಭವ ಇಲ್ಲದ ದಾದಿಯರು ವೈದ್ಯರ ಅನುಪಸ್ಥಿತಿಯಲ್ಲಿ ಹೆರಿಗೆ ಮಾಡಿಸಲು ಮುಂದಾಗಿ ಮಗುವನ್ನು ಹೊರಗೆ ತೆಗೆದಿದ್ದಾರೆ. ಈ ವೇಳೆ ಸರಿಯಾದ ಕ್ರಮಗಳನ್ನು ಅನುಸರಿಸದ ಕಾರಣ ಅಧಿಕ ರಕ್ತಸ್ರಾವವಾಗಿದೆ.ಸಕಾಲದಲ್ಲಿ ಇದನ್ನು ನಿಯಂತ್ರಣಕ್ಕೆ ತರಲಾಗದ ಕಾರಣ ಮೌನಿಕ ನಿತ್ರಾಣಗೊಂಡು ಸಾವುಬದುಕಿನ ನಡುವೆ ಹೋರಾಟ ಮಾಡುವ ಸಂದರ್ಭದಲ್ಲಿ ಗರ್ಭಿಣಿಯ ವಾರಸುದಾರರಿಗೆ ತಪ್ಪುಮಾಹಿತಿ ನೀಡಿ ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ತಾಕೀತು ಮಾಡಿದ್ದಾರೆ. ಅವರ ಸೂಚನೆಯಂತೆ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದರೂ ಕೂಡ ಚಿಕ್ಕಬಳ್ಳಾಪುರ ಉತ್ಸವದ ಅಂಗವಾಗಿ ವೈದ್ಯರ ಅಲಭ್ಯತೆಯ ಕಾರಣ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ನರಳಿ ನರಳಿ ಬಾಣಂತಿ ಮೌನಿಕ ಸಾವನ್ನಪ್ಪುತ್ತಾಳೆ. ಜಿಲ್ಲಾಸ್ಪತ್ರೆಯಂತಹ ಜಿಲ್ಲಾಸ್ಪತ್ರೆಯಲ್ಲಿಯೇ  ವೈದ್ಯರು, ಸಿಬ್ಬಂದಿ ತುರ್ತು ಸೇವೆಗೆ ಲಭ್ಯರಿರದೆ ಉತ್ಸವಕ್ಕೆ ತೆರಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಈ ಸಾವಿಗೆ ಸಚಿವ ಸುಧಾಕರ್ ಕೂಡ ಪರೋಕ್ಷವಾಗಿ ಕಾರಣವಾಗಿದ್ದಾರೆ ಎಂದು ದೂರಿದರು.

ಮೌನಿಕ ಸಾವಿನಿ ಬಗ್ಗೆ ಬಂದಿರುವ ತನಿಖಾ ವರದಿಯಲ್ಲಿ ವೈದ್ಯರು, ಸಿಬ್ಬಂದಿಯ ನಿರ್ಲಕ್ಷದಿಂದಲೇ ಸಾವು ಸಂಭವಿಸಿದೆ ಎಂದು ಸ್ಪಷ್ಟವಾಗಿ ನಮೂದಿಸಿ ದ್ದರೂ, ಇದುವರೆಗೂ ಸಂಬ0ಧ ಪಟ್ಟವರ ವಿರುದ್ಧ ಡಿಹೆಚ್‌ಒ ಆಗಲಿ ಜಿಲ್ಲಾಧಿಕಾರಿಗಳೇ ಆಗಲಿ ಕ್ರಮಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ನಿಟ್ಟಿನಲ್ಲಿ ಮಾ.೨ರಂದು ಶಿಡ್ಲಘಟ್ಟದಿಂದ ಜಿಲ್ಲಾಧಿಕಾರಿಗಳ ಮೆರವಣಿಗೆ ನಡೆಸಿ ಪ್ರತಿಭಟಿಸಲಾಗುವುದು. ಇದಕ್ಕೂ ಮಣಿ ದಯದಿದ್ದರೆ ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮೌನಿಕ ಪತಿ ಮಧು ಮಾತನಾಡಿ, ಮೃತ ಮೌನಿಕ ಪ್ಯಾರಾ ಮೆಡಿಕಲ್ ಪದವಿ ವ್ಯಾಸಂಗ ಮಾಡುತ್ತಿದ್ದರು. ಪದವಿ ಮೂಗಿದ ನಂತರ ಚಿಕ್ಕಬಳ್ಳಾಪುರದಲ್ಲಿ ನರ್ಸ್ ಕೆಲಸಕ್ಕೆ ಸೇರಿಸಬೇಕೆಂಬ ಆಸೆಯಿತ್ತು. ಆದರೆ ವೈದ್ಯರ ನಿರ್ಲಕ್ಷದಿಂದ ಪ್ರಾಣ ಕಳೆದುಕೊಂಡಿದ್ದು, ಇಂತಹ ಪ್ರಕರಣಗಳು ಮರು ಕಳುಹಿಸದಂತೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಹೆರಿಗಾಗಿ ಶಿಡ್ಲಘಟ್ಟ ಆಸ್ಪತ್ರೆಗೆ ಮೌನಿಕಳನ್ನು ದಾಖಲು ಮಾಡಲಾಗಿತ್ತು. ಅಧಿಕ ನೋವನ್ನು ಅನುಭವಿಸುತ್ತಿರುವುದನ್ನು ಕಂಡು ಶಸ್ತçಚಿಕಿತ್ಸೆ ಮಾಡುವಂತೆ ವೈದ್ಯರನ್ನೂ ಅಂಗಲಾಚಿದರೂ ಅವರು ಮನೆಗೆ ಹೋದರು. ರಾತ್ರಿಯೆಲ್ಲ ನೋವು ಅನುಭವಿಸಿದಳು. ಈ ಬಗ್ಗೆ ದಾದಿಯರು ಡಾ.ಸುಗುಣ ಅವರಿಗೆ ಕರೆ ಮಾಡಿ ತಿಳಿಸಿದಾಗ ವೈದ್ಯರು ಆಸ್ಪತ್ರೆಗೆ ಬಾರದೆ ಮನೆಯಲ್ಲಿ ಇದ್ದುಕೊಂಡು ಮೊಬೈಲ್ ಮೂಲಕ ಮಾರ್ಗದರ್ಶನ ನೀಡಿ ಹೆರಿಗೆ ಮಾಡಿಸಲು ತಿಳಿಸಿದ್ದಾರೆ. ಇದರಿಂದಾಗಿ ತೀವ್ರ ರಕ್ತಸ್ರಾವವಾಗಿದೆ. ಇನ್ನು ತುರ್ತು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಐಸಿಯುಗೆ ಸೇರಿಸಿ ೨ ತಾಸು ಕಳೆದರೂ ವೈದ್ಯರು ಚಿಕಿತ್ಸೆ ನೀಡಿಲ್ಲ. ಇದರಿಂದಾಗಿ ಮೌನಿಕ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಅಳಲು ತೋಡಿಕೊಂಡರು.

ಮುಖAಡ ಸಂದೀಪ್ ರೆಡ್ಡಿ ಮಾತನಾಡಿ, ಆರೋಪಿಗಳಾದ ವೈದ್ಯರಾದ ಡಾ.ಸುಗುಣ, ಡಾ.ಅಗ್ನಿ, ದಾದಿಯರಾದ ರೇಣುಕ, ಪ್ರೇಮ ಇವರ ಡಿಎಚ್‌ಒ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಒತ್ತಡಗಳಿಗೆ ಮಣಿದು ಮೀನಾಮೇಷ ಎಣಿಸುತ್ತಿದ್ದಾರೆ. ಪ್ರಭಾವಿ ಆರೋಗ್ಯ ಸಚಿವ ಡಾ.ಸುಧಾಕರ್ ನೊಂದವರಿಗೆ ಸೌಜನ್ಯಕ್ಕೂ ಸಂತ್ವಾನ ತಿಳಿಸುವ ಕೆಲಸ ಮಾಡಿಲ್ಲ. ಜನರಿಗೆ ಆರೋಗ್ಯ ಸಿಕ್ಕಿದಾಗ ಸಂತೋಷ ಸಿಗುತ್ತದೆ. ಉತ್ಸವಗಳಿಂದ ಯಾವುದೇ ರೀತಿ ಸಂತೋಷ ಸಿಗುವುದಿಲ್ಲ ಎಂಬುದನ್ನು ಅವರು ಇನ್ನಾದರೂ ಅರಿಯಲಿ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮೃತಳ ತಾಯಿ ಲಕ್ಷ್ಮಮ್ಮ,ಹಳ್ಳಿಮಕ್ಕಳ ಸಂಘದ ವೆಂಕಟರಮಣಪ್ಪ,ಮುಖAಡರಾದ ಬಸವರಾಜು, ಪ್ರೇಮ, ವೇದ ಮತ್ತಿತರರು ಇದ್ದರು.