ಚಿಕ್ಕಬಳ್ಳಾಪುರ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಕಚೇರಿಯನ್ನು ಜಿಲ್ಲಾಧ್ಯಕ್ಷ ಗೋವಿಂದರೆಡ್ಡಿ ಬಾಗೇಪಲ್ಲಿ ಪಟ್ಟಣದಲ್ಲಿ ಭಾನುವಾರ ಉದ್ಘಾಟಿಸಿದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಗೋವಿಂದ ರೆಡ್ಡಿ ಕಚೇರಿ ಉದ್ಘಾಟಿಸಿ ಮಾತನಾಡಿ ತಾಲ್ಲೂಕು ಸಮಸ್ತ ರೈತರು ಸಭೆ ಸೇರಿ ಅವರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸೂಕ್ತ ಸ್ಥಳವಿರಲಿಲ್ಲ. ಈಗ ತಾಲ್ಲೂಕು ಕಚೇರಿ ಆರಂಭಿಸಿ ರುವುದರಿ0ದ ರೈತರು ಸಂಪರ್ಕಿಸಲು ಅನುಕೂಲವಾಗುತ್ತದೆ. ಯಾವುದೇ ಸಂದರ್ಭದಲ್ಲಿ ರೈತರು ಕಚೇರಿಗೆ ಬಂದು ಅವರ ಸಮಸ್ಯೆ ಹೇಳಿಕೊಳ್ಳಬಹುದು’ ಎಂದರು.
ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳಿಗೆ ಸರ್ಕಾರದ ಮೂಲಕ ಪರಿಹಾರ ಒದಗಿಸಿಕೊಡುವುದು ರೈತ ಸಂಘದ ಮುಖ್ಯ ಗುರಿ. ರೈತರು ಹೊಸ ಕಚೇರಿಗೆ ಬಂದು ಅವರ ದೂರು ದುಮ್ಮಾನ ತಿಳಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಘಟಕದ ಪದಾಧಿಕಾರಿಗಳು ಸಾರ್ವಜನಿಕರು ಹಾಜರಿದ್ದರು.