Saturday, 23rd November 2024

Ayurved: ಧನ್ವಂತರಿ ಆಯುರ್ವೇದ ಚಿಕಿತ್ಸೆಯು ನಮ್ಮ ದೇಶದ ಪ್ರಾಚೀನ ಚಿಕಿತ್ಸಾ ಪದ್ದತಿ : ನಗರಸಭಾಧ್ಯಕ್ಷ ಎ.ಗಜೇಂದ್ರ

ಜಿಲ್ಲಾಡಳಿತದಿಂದ ನಡೆದ  ೯ನೇ ವರ್ಷದ ಧನ್ವಂತರಿ ಜಯಂತಿಗೆ ಚಾಲನೆ ನೀಡಿ ಹೇಳಿಕೆ

ಚಿಕ್ಕಬಳ್ಳಾಪುರ: ಧನ್ವಂತರಿ ಆಯುರ್ವೇದ ಚಿಕಿತ್ಸೆಯು ನಮ್ಮ ದೇಶದ ಪ್ರಾಚೀನ ಚಿಕಿತ್ಸೆ ಆಗಿದ್ದು ಇದನ್ನು ಎಲ್ಲರೂ ಅಳವಡಿಸಿಕೊಳ್ಳುವುದರಿಂದ ಆರೋಗ್ಯದ ಸಮಸ್ಯೆಗಳನ್ನು ಶಾಶ್ವತವಾಗಿ ಗುಣಪಡಿಸಬಹುದು ಎಂದು ನಗರಸಭೆ ಅಧ್ಯಕ್ಷ ಎ.ಗಜೇಂದ್ರ ತಿಳಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಆಯುಷ್ ಇಲಾಖೆ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಧನ್ವಂತರಿ ಜಯಂತಿಯ ಪ್ರಯುಕ್ತ ನಡೆದ ೯ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಜೀವನಶೈಲಿಯ ಕಾರಣದಿಂದಾಗಿ ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಕೀಲುನೋವು, ಥೈರಾಯಿಡ್, ಮೂಲವ್ಯಾಧಿ, ಪಿಸಿಓಡಿ ಹೀಗೆ ಅನೇಕ ವ್ಯಾದಿಗಳು ಹೆಚ್ಚಾಗುತ್ತಿವೆ. ಈ ಎಲ್ಲ ಕಾಯಿಲೆಗಳಿಗೆ ಆರ್ಯುವೇದದಲ್ಲಿ ಚಿಕಿತ್ಸೆ ಲಭ್ಯವಿದೆ. ಎಲ್ಲರು ಆರ್ಯುವೇದ ಚಿಕಿತ್ಸಾ ಪದ್ಧತಿ ಕಡೆ ಮುಖ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ.ತಬೀಬಾ ಬಾನು ಅವರು ಮಾತನಾಡಿ ಪ್ರತಿ ವರ್ಷ ಅಶ್ವಿನಿ ಮಾಸದ ಕೃಷಿ ವಿಶ್ವದ ತ್ರಯೋದಶಿ ದಿನ ಧ್ವನಂತರಿ ಜಯಂತಿ ಪ್ರಯುಕ್ತ ರಾಷ್ಟ್ರೀಯ ಆರ್ಯುರ್ವೆದ ಜಯಂತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಆರ್ಯುವೇದ ಶಾಸ್ತ್ರವು ಭಾರತದ ಪುರಾತನ ವೈದ್ಯಕೀಯ ಪದ್ಧತಿಯಾಗಿದ್ದು, ರೋಗಬರುವುದನ್ನು ತಡೆಹಿಡಿದು, ರೋಗ ಬಂದ ನಂತರ ವಾಸಿ ಮಾಡುವ ಚಿಕಿತ್ಸಾ ವಿಧಾನ ಒಳಗೊಂಡ ಶಾಸ್ತçವಾಗಿ ಬೆಳೆದಿದೆ ಎಂದು ತಿಳಿಸಿದರು.

ಈ ವೇಳೆ ಶಿಡ್ಲಘಟ್ಟ ಆರ್ಯುವೇದ ವೈದ್ಯಾಧಿಕಾರಿ ವಿಜಯ್ ಕುಮಾರ್ ಹಾಗೂ ಚಿಂತಾಮಣಿ ಡಾ. ಪ್ರಶಾಂತ್ ಅವರು ವಿಶೇಷ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಆಯುಷ್ ಇಲಾಖೆಯ ಸಿಬ್ಬಂದಿ, ಹೆಚ್ಚಿನ ಸಂಖ್ಯೆಯಲ್ಲಿ ಅಂಗನವಾಡಿ ಶಿಕ್ಷಕಿಯರು ಹಾಗೂ ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.

ಇದನ್ನೂ ಓದಿ: ಆರೋಗ್ಯಕ್ಕಾಗಿ ನೀರು- ಹೇಗೆ, ಎಷ್ಟು, ಯಾವಾಗ ?