Tuesday, 28th May 2024

ಹಾಪ್ ಕಾಮ್ಸ್ ನಿಂದ ಸಂಚಾರಿ ಮಾರಾಟ ಮಳಿಗೆ

ಚಿತ್ರದುರ್ಗ:

ಜಿಲ್ಲೆಯಲ್ಲಿ ಹಾಪ್‍ಕಾಮ್ಸ್ ವತಿಯಿಂದ 12 ಸಂಚಾರಿ ಮಾರಾಟ ಮಳಿಗೆಗಳನ್ನು ಜಿಲ್ಲೆಯಾದ್ಯಂತ ಪ್ರಾರಂಭಿಸಲಾಗುವುದು ಎಂದು ಹಾಪ್‍ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ರವಿ ತಿಳಿಸಿದ್ದಾರೆ.

ಹಾಪ್‍ಕಾಮ್ಸ್ ವತಿಯಿಂದ ಜಿಲ್ಲೆಯಲ್ಲಿ ತರಕಾರಿ ಮತ್ತು ಹಣ್ಣುಗಳ ಮಾರಾಟ ವ್ಯವಸ್ಥೆ ಕುರಿತಂತೆ ಮಾಹಿತಿ ನೀಡಿರುವ ಹಾಪ್‍ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ರವಿ ಅವರು, ಕೊರಾನಾ ವೈರಸ್ (ಕೋವಿಡ್-19) ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಸಂಪೂರ್ಣವಾಗಿ ಲಾಕ್‍ಡೌನ್ ಜಾರಿಗೊಳಿಸಿದ್ದು, ಕೆಲವು ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.

ಚಿತ್ರದುರ್ಗದಲ್ಲಿ ಇತ್ತೀಚೆಗಷ್ಟೇ ಹಾಪ್‍ಕಾಮ್ಸ್ ವತಿಯಿಂದ ಒಂದು ಸಂಚಾರಿ ತರಕಾರಿ ಮಾರಾಟ ಮಳಿಗೆ ವಾಹನಕ್ಕೆ ಜಿಲ್ಲಾಧಿಕಾರಿಗಳು ಚಾಲನೆ ನೀಡಿದ್ದರು. ಈಗಾಗಲೇ ಚಿತ್ರದುರ್ಗ ನಗರದಲ್ಲಿ-1, ಹೊಸದುರ್ಗ-2 ಹಾಗೂ ಚಳ್ಳಕೆರೆಯಲ್ಲಿ-01 ಸಂಚಾರಿ ಮಾರಾಟ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಈ ವ್ಯವಸ್ಥೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಹೀಗಾಗಿ ಶೀಘ್ರದಲ್ಲಿಯೇ ಜಿಲ್ಲೆಯಾದ್ಯಂತ ಇಂತಹ ಒಟ್ಟು 12 ಸಂಚಾರಿ ಮಾರಾಟ ಮಳಿಗೆಗಳನ್ನು ಪ್ರಾರಂಭಿಸಲಾಗುವುದು.

ಹಾಪ್‍ಕಾಮ್ಸ್ ಸಂಸ್ಥೆಯು ತೋಟಗಾರಿಕೆ ಇಲಾಖೆಯ ಒಂದು ಅಂಗಸಂಸ್ಥೆಯಾಗಿದ್ದು, ರೈತರಿಂದ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ, ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯ 14 ಹಾಪ್‍ಕಾಮ್ಸ್ ಮಳಿಗೆಗಳಲ್ಲಿ ಬೆಳಿಗ್ಗೆ 8 ರಿಂದ ರಾತ್ರಿ 8 ರ ತನಕ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲಾಗುತ್ತಿದೆ.

ಚಿತ್ರದುರ್ಗ ತೋಟಗಾರಿಕೆ ಇಲಾಖೆ ಆವರಣ, ಜಿಲ್ಲಾಸ್ಪತ್ರೆಯ ಆವರಣ, ವಿವೇಕಾನಂದ ಉದ್ಯಾನವನದ ಹಾಪ್‍ಕಾಮ್ಸ್‍ನಲ್ಲಿ ಉತ್ತಮ ಮತ್ತು ಗುನಮಟ್ಟದ ಬಾಳೆ, ಸೇಬು, ಕಿತ್ತಳೆ, ಕಲ್ಲಂಗಡಿ, ಕರಬೂಜ, ಪಪ್ಪಾಯಿ, ಕಿವಿ, ಸಪೋಟ, ಅನಾನಸ್, ಮೋಸಂಬಿ ಹಣ್ಣುಗಳು ದೊರೆಯುತ್ತವೆ.

ಜೆ.ಸಿ.ಆರ್. ಬಡಾವಣೆ ಉದ್ಯಾನವನದ ಹಾಪ್‍ಕಾಮ್ಸ್‍ನಲ್ಲಿ ಬಾಳೆ, ಸೇಬು, ಕಿತ್ತಳೆ, ಕಲ್ಲಂಗಡಿ, ಕರಬೂಜ, ಪಪ್ಪಾಯಿ, ಕಿವಿ, ಸಪೋಟ, ಅನಾನಸ್, ಮೋಸಂಬಿ, ಟಮೋಟ, ಮೆಣಸಿನಕಾಯಿ, ಈರುಳ್ಳಿ, ಆಲೂಗಡ್ಡೆ, ಬೀನ್ಸ್, ಕ್ಯಾರೆಟ್, ಬಿಟ್‍ರೋಟ್, ಸೌತೆಕಾಯಿ, ಸೊಪ್ಪು ದೊರೆಯುತ್ತದೆ.

ಮಹಾವೀರ ನಗರದ ಉದ್ಯಾನವನ ಮತ್ತು ಧವಳಗಿರಿ ಬಡಾವಣೆಯ ಉದ್ಯಾನವನದ ಹಾಪ್‍ಕಾಮ್ಸ್‍ನಲ್ಲಿ ಬಾಳೆ, ಕಲ್ಲಂಗಡಿ, ಸೇಬು, ಟೊಮೋಟೋ, ಮೆಣಸಿನಕಾಯಿ, ಈರುಳ್ಳಿ, ಆಲೂಗಡ್ಡೆ, ಬೀನ್ಸ್, ಕ್ಯಾರೆಟ್, ಬಿಟ್‍ರೂಟ್, ಬದನೆಕಾಯಿ, ಬೆಳ್ಳುಳ್ಳಿ, ನುಗ್ಗೆಕಾಯಿ, ಕುಂಬಳಕಾಯಿ, ಎಲೆಕೋಸು, ಸೌತೆಕಾಯಿ ಮತ್ತು ಸೊಪ್ಪು ದೊರೆಯಲಿದೆ.

ನಾಯಕನಹಟ್ಟಿಯ ಬಸ್‍ಸ್ಟ್ಯಾಂಡ್ ಹತ್ತಿರದ ಹಾಪ್‍ಕಾಮ್ಸ್‍ನಲ್ಲಿ ಬಾಳೆ, ಕಲ್ಲಂಗಡಿ, ಸೇಬು, ಟೊಮೋಟೋ, ಮೆಣಸಿನಕಾಯಿ, ಈರುಳ್ಳಿ, ಆಲೂಗಡ್ಡೆ, ಬೀನ್ಸ್, ಕ್ಯಾರೆಟ್, ಬಿಟ್‍ರೂಟ್, ಬದನೆಕಾಯಿ, ಬೆಳ್ಳುಳ್ಳಿ, ನುಗ್ಗೆಕಾಯಿ, ಕುಂಬಳಕಾಯಿ, ಎಲೆಕೋಸು, ಸೌತೆಕಾಯಿ ಮತ್ತು ಸೊಪ್ಪು ದೊರೆಯುತ್ತದೆ.

ತಳಕು ಬಸ್‍ಸ್ಟ್ಯಾಂಡ್ ಹತ್ತಿರದ ಹಾಪ್‍ಕಾಮ್ಸ್‍ನಲ್ಲಿ ಬಾಳೆ, ಸೇಬು, ಕಿತ್ತಳೆ, ಕಲ್ಲಂಗಡಿ, ಕರಬೂಜ, ಪಪ್ಪಾಯಿ, ಕಿವಿ, ಸಪೋಟ, ಅನಾನಸ್, ಮೊಸಂಬಿ ದೊರೆಯುತ್ತದೆ.

ಮೊಳಕಾಲ್ಮುರು ತೋಟಗಾರಿಕೆ ಇಲಾಖೆಯ ಆವರಣದ ಮುಂಭಾಗ ಹಾಗೂ ಬೈಪಾಸ್ ಹತ್ತಿರದ ಹಾಪ್‍ಕಾಮ್ಸ್‍ನಲ್ಲಿ ಬಾಳೆ, ಸೇಬು, ಕಿತ್ತಳೆ, ಕಲ್ಲಂಗಡಿ, ಕರಬೂಜ, ಪಪ್ಪಾಯಿ, ಕಿವಿ, ಸಪೋಟ, ಅನಾನಸ್ ಮತ್ತು ಮೊಸಂಬಿ ದೊರೆಯುತ್ತದೆ.

ಎಚ್.ಡಿ.ಪುರ ಹಾಪ್‍ಕಾಪ್ಸ್‍ನಲ್ಲಿ ಬಾಳೆ, ಸೇಬು, ಕಿತ್ತಳೆ, ಕಲ್ಲಂಗಡಿ, ಕರಬೂಜ, ಪಪ್ಪಾಯಿ, ಕಿವಿ, ಸಪೋಟ, ಅನಾನಸ್, ಮೊಸಂಬಿ, ಟಮೋಟೋ, ಮೆಣಸಿನಕಾಯಿ, ಈರುಳ್ಳಿ ಮತ್ತು ಆಲೂಗಡ್ಡೆ ದೊರೆಯುತ್ತದೆ.
ಅಗ್ರೊ ವಾರ್ ರೂಂ ಸ್ಥಾಪನೆ: ರೈತರ ನೆರವಿಗಾಗಿ ರಾಜ್ಯಮಟ್ಟದಲ್ಲಿ ಅಗ್ರೊ ವಾರ್ ರೂಂ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದ್ದು, 080-22212818, 080-22210237 ಕ್ಕೆ ಸಂಪರ್ಕಿಸಿ ರೈತರು ತಮ್ಮ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡಬಹುದು ಜಿಲ್ಲಾ ಹಾಪ್‍ಕಾಮ್ಸ್ ತಿಳಿಸಿದೆ.

error: Content is protected !!