ಚಿಕ್ಕನಾಯಕನಹಳ್ಳಿ : ಪಟ್ಟಣದ ಸರಕಾರಿ ಪ್ರಥಮದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳ ತಂಡವು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನಾ ಕಚೇರಿಗೆ ಭೇಟಿ ನೀಡಿ ಯೋಜನೆಯ ಕಾರ್ಯಕ್ರಮ ಗಳ ಕುರಿತು ವಿಶೇಷ ಅಧ್ಯಯನ ನಡೆಸಿತು.
ಯೋಜನೆಯ ಕಾರ್ಯಚಟುವಟಿಕೆಗಳ ಕುರಿತಂತೆ ಅಧ್ಯಯನ ನಡೆಸಲು ಗುರುವಾರ ನಗರದ ಕಚೇರಿಗೆ ಆಗಮಿಸಿದ್ದ ವಿದ್ಯಾರ್ಥಿಗಳ ತಂಡಕ್ಕೆ ಯೋಜನೆಯ ಮೇಲ್ವಿಚಾರಕ ಭಾಸ್ಕರ್ ಉಪನ್ಯಾಸ ನೀಡಿದರು. ಸ್ವಸಹಾಯ ಸಂಘಗಳ ನಿರ್ವಹಣೆ, ಮಹಿಳಾ ಸಬಲೀಕರಣ, ಕ್ಷೇತ್ರದ ಪರಂಪರೆ ಪರಮಪೂಜ್ಯ ಡಾ.ವಿರೇಂದ್ರ ಹೆಗ್ಗಡೆ ಅವರ ಮಾರ್ಗ ದರ್ಶನದಂತೆ ಯೋಜನೆಯ ಪಾಲುದಾರರಿಗೆ ವಿಮೆ, ವೃದ್ದಾಪ್ಯ ವೇತನ, ವಿದ್ಯಾರ್ಥಿ ವೇತನ ಸಹಿತ ಅನೇಕ ಜನಸ್ನೆಹಿ ಕಾರ್ಯಕ್ರಮಗಳ ಮೂಲಕ ಸಂಸ್ಥೆ ಸಮಾಜಕ್ಕೆ ನೆರವಾಗುತ್ತಿದೆ ಎಂದು ತಿಳಿಸಿದರು.
ಕಚೇರಿ ಮೇಲ್ವಿಚಾರಕ ರಿಜ್ವಾನ್, ಸಹಾಯಕ ಮಂಜುನಾಥ್, ಪ್ರೋಪೆಸರ್ ಮಂಜುನಾಥ್ ಉಪಸ್ಥಿತರಿದ್ದರು.