Saturday, 14th December 2024

ಆಯೋಗಗಳು ಮಾಡುವ ವರದಿಗಳು ಜನಸಾಮಾನ್ಯರಿಗೆ ನ್ಯಾಯಯುತವಾಗಿದೆ

ಚಿಕ್ಕನಾಯಕನಹಳ್ಳಿ: ಆಯೋಗಗಳು ಮಾಡುವ ವರದಿಗಳು ಜನಸಾಮಾನ್ಯರಿಗೆ ನ್ಯಾಯಯುತವಾಗಿದ್ದು ಆ ನಿಟ್ಟಿನಲ್ಲಿ ನಿವೃತ್ತ ನೌಕರರಿಗೆ ೭ನೇ ವೇತನದ ಆಯೋಗದ ವಿಚಾರದಲ್ಲಿ ಮಂತ್ರಿಮ0ಡಲದಲ್ಲಿ ಶಿಫಾರಸ್ಸು ಮಾಡುವೆ ಇದರಿಂದ ಅನುಕೂಲ ವಾಗುವುದು ಎಂದು ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಹೇಳಿದರು.

ಪಟ್ಟಣದ ತೀನಂಶ್ರೀ ಭವನದಲ್ಲಿ ನಕರರವರ ಮತ್ತು ನಿವೃತ್ತ ನೌಕರರ ದಿನಾಚಾರಣೆ ಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೌಕರರು ವಯೋಮತಿಯಿಂದ ಕರ್ತವ್ಯದಿಂದ ನಿವೃತ್ತಿ ಹೊಂದಿದ ನಂತರದ ದಿನಗಳಲ್ಲಿ ಕಷ್ಟದ ಬದುಕು ಎದುರಾಗು ವುದು ಸಹಜವಾಗಿದೆ. ಇತ್ತೀಚಿಗೆ ಮನೆಗಳಲ್ಲಿ ಮಕ್ಕಳು ವೃದ್ದಾಪ್ಯರನ್ನು ನೋಡಿಕೊಳ್ಳುವಲ್ಲಿ ವ್ಯತಾಸಗಳು ಕಂಡು ಬರುತ್ತಿದ್ದು ಈನಿಟ್ಟಿನಲ್ಲಿ ನಿವೃತ್ತ ನೌಕರರಿಗೆ ಎಳನೇ ವೇತನ ಆಯೋಗದ ವರದಿಯು ಜಾರಿಗೆ ಬಂದರೆ ವೃದ್ದಾಪ್ಯದಲ್ಲಿ ಸಹಕಾರಿ ಯಾಗುತ್ತದೆ ಮುಂಬ ರುವ ಮಂತ್ರಿ ಮಂಡಲದಲ್ಲಿ ದನಿ ಎತ್ತಿ ಮಾತನಾಡುವೆ ಎಂದರು.

ತಾಲ್ಲೂಕಿನ ನಿವೃತ್ತ ನೌಕರರ ಸಂಘವು ಸ್ವಂತ ಕಟ್ಟಡ ಹೊಂದಿದ್ದು ಸಂಘಟನೆಯಲ್ಲಿ ಜಿಲ್ಲೆಯಲ್ಲಿ ಹೆಸರು ಮಾಡಿದೆ. ಆದರೆ ಬೇಡಿಕೆಯಂತೆ ವಿಶಾಲವಾದ ಸಂಘದ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಹಣವನ್ನು ಮಂಜೂರು ಮಾಡಿಸುವೆ ನಿವೇಶನದ ಕೊರತೆ ಇದೆ ಎಂದರು. ಸರ್ಕಾರಕ್ಕೆ ಸಂಬದ ಪಟ್ಟಣದಲ್ಲಿ ನಿವೇಶನಗಳ ಕೊರತೆಯಿಂದ ವಾಲ್ಮೀಕಿ ಭವನ ಬಾಬು ಜಗಜೀವನ್‌ ರಾವ್ ಭವನ ಹಾಗು ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣಕ್ಕೆ ತೊಂದರೆ ಯಾಗುತ್ತಿದೆ ಎಂದರು.

ಸಂಘದ ಗೌರವಾಧ್ಯಕ್ಷರಾದ ಸಿ.ಡಿ.ರುದ್ರಮುನಿ ಮಾತನಾಡಿ ಕಳೆದ ೩೬ ವರ್ಷಗಳಿಂದ ತಾಲ್ಲೂಕಿನಲ್ಲಿ ನಿವೃತ್ತ ನೌಕರರ ಸಂಘವು ಉತ್ತಮ ಕೆಲಸಮಾಡಿಕೊಂಡು ಬಂದಿದೆ ಫಲಾನುಭವಿಗಳಿಗೆ ನ್ಯಾಯ ಕೊಡಿಸುವಲ್ಲಿ ಶ್ರಮಿಸಲಾಗುತ್ತಿದ್ದು ರಾಜ್ಯ ಸಂಘಟನೆಯು ವಿವಿದ ಬೇಡಿಕೆಗಳನ್ನು ಈಡೇರಿಸಲು ಪ್ರತಿಭಟನೆಯ ಸಂದರ್ಭದಲ್ಲಿ ತಾಲ್ಲುಕು ಘಟಕವು ಭಾಗಿಯಾಗಿದೆ. ರಾಜ್ಯ ನಿವೃತ್ತ ಸಂಘವು ಸ್ವಂತ ಕಟ್ಟಡವನ್ನು ಹೊಂದಿಲ್ಲ ಆದರೆ ತಾಲ್ಲೂಕು ಘಟಕವು ಸ್ವಂತ ಕಟ್ಟಡವನ್ನು ಹೊಂದಿದ್ದರು ಚಿಕ್ಕದಾಗಿದ್ದು ದೊಡ್ಡ ಮಟ್ಟದ ಕಟ್ಟಡ ನಿಮಾನವಾಗ ಬೇಕಾಗಿದೆ ಹಾಗು ೭ನೇ ವೇತನ ಆಯೋಗದ ವರದಿಯು ಶೀಘ್ರವಾಗಿ ಜಾರಿಗೆ ಬರುವಂತೆ ಸರ್ಕಾರದಲ್ಲಿ ಒತ್ತಾಯ ತರುವಂತೆ ಸಚಿವ ಜೆ.ಸಿ.ಮಾಧುಸ್ವಾಮಿಗೆ ಮನವಿ ಮಾಡಿದರು.

ಪ್ರಧಾನ ಕಾರ್ಯದರ್ಶಿ ನಂಧೀಶ್ ಬಟ್ಲೇರಿ ಮಾತನಾಡಿ ಈವರ್ಷ ಸಂಘದ ೨೮ ಸದಸ್ಯರುಗಲು ನಿಧನ ಹೊಂದಿದ್ದಾರೆ ಮೃತರ ಕುಟುಂಬ ಗಳಿಗೆ ಸಮಘದಿಂದ ಸಹಾಯಧನವನ್ನು ನೀಡಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಎಂ.ಎಸ್.ಇಶ್ವರಪ್ಪ ಸಮಾರಮಭದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದರು.೭೫ ವರ್ಷ ತುಂಬಿದ ನಿವೃತ್ತ ನೌಕರರಿಗೆ ಸನ್ಮಾನ ಮತ್ತು ಕ್ರೀಢಾ ಮತ್ತು ಸಾಂಸ್ಕೃತಿಕ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಎಂ.ವಿ.ನಾಗರಾಜರಾವ್ ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟನರಸಯ್ಯ,ಕನ್ನಡ ಸಂಘದ ವೇದಿಕೆಯ ಅಧ್ಯಕ್ಷ ಸಿ.ಬಿ.ರೇಣುಕ ಸ್ವಾಮಿ, ಜಿಲ್ಲಾ ಸ0ಘದ ಸಾವಿತ್ರಿ ಮೂರ್ತಿ,ತಾಲ್ಲೂಕು ಘಟಕದ ಖಜಾಂಚಿ ಎಸ್.ಆರ್.ಶಾಂತಯ್ಯ,ಎಸ್.ವಿಶ್ವೇಶ್ವರಯ್ಯ, ಎನ್. ಇಂದಿರಮ್ಮ ರಾಮಕೃಷ್ಣಪ್ಪ ಸೇರಿದಂತೆ ಮುಂತಾದವರಿದ್ದರು.