Saturday, 14th December 2024

ಆಧುನಿಕ, ದಿಟ್ಟ ಮತ್ತು ಸದೃಢ: ಸ್ಕೋಡಾ ಆಟೊ ಇಂಡಿಯಾ ಹೊಚ್ಚಹೊಸ ಕಾಂಪ್ಯಾಕ್ಟ್ ಎಸ್.ಯು.ವಿ.ಯ ವಿನ್ಯಾಸದ ಕಿರುನೋಟದ ಹಂಚಿಕೆ

 ಸ್ಕೋಡಾ ಆಟೊ ಇಂಡಿಯಾದ ಮೊಟ್ಟಮೊದಲ ಕಾಂಪ್ಯಾಕ್ಟ್ ಎಸ್.ಯು.ವಿ.ಯ ಎರಡನೆಯ ಟೀಸರ್ ವಿನ್ಯಾಸ ಬಿಡುಗಡೆ

 ಭಾರತಕ್ಕಾಗಿ ವಿಶೇಷವಾಗಿ ವಿನ್ಯಾಶಗೊಳಿಸಲಾದ ಪ್ಲಾಟ್ ಫಾರಂ ಆಧರಿಸಿದೆ

 ಆಧುನಿಕ ಸದೃಢತೆಯ ತತ್ವಗಳಿಂದ ಪಡೆದ ಸೂಚನೆಗಳ ವಿನ್ಯಾಸ ಅನುಷ್ಠಾನ

 2025ರಲ್ಲಿ ಭಾರತದಲ್ಲಿ ವಿಶ್ವಕ್ಕೆ ಪ್ರವೇಶ

 ಭಾರತದಲ್ಲಿ ಮುಂದುವರಿದ ಪ್ರಗತಿಯ ಬ್ರಾಂಡ್ ಗುರಿಗೆ ಅನುಗುಣವಾಗಿ ಉತ್ಪನ್ನದ ಸರಣಿ

ಹುಬ್ಬಳ್ಳಿ: ಸ್ಕೋಡಾ ಆಟೊ ಇಂಡಿಯಾದ ಬೃಹತ್ ಅಭಿಯಾನವು ಅದರ ಜಾಗತಿಕ 129ನೇ ಮತ್ತು ಭಾರತದಲ್ಲಿ 24ನೇ ವಾರ್ಷಿಕೋತ್ಸವದ ಅಂಗವಾಗಿ ಮುಂದುವರಿದಿದೆ. ವರ್ಷಪೂರ್ತಿ ಅಸಂಖ್ಯ ಗ್ರಾಹಕ ಮತ್ತು ಉತ್ಪನ್ನದ ಕ್ರಮಗಳ ನಂತರ ಮತ್ತು 2024ರ ಪ್ರಾರಂಭದಲ್ಲಿ ಹೊಚ್ಚಹೊಸ ಕಾಂಪ್ಯಾಕ್ಟ್ ಎಸ್.ಯು.ವಿ.ಯ ಪ್ರಕಟಣೆಯೊಂದಿಗೆ ಸ್ಕೋಡಾ ಆಟೊ ಇಂಡಿಯಾ ಈ ಹೊಚ್ಚಹೊಸ ಕಾರಿನ ಎರಡನೆಯ ಮಿನುಗು ನೋಟ ನೀಡಿದೆ.

ಡಿಸೈನ್ ಟೀಸರ್ ಬಿಡುಗಡೆ ಕುರಿತು ಸ್ಕೋಡಾ ಆಟೊ ಇಂಡಿಯಾದ ಬ್ರಾಂಡ್ ಡೈರೆಕ್ಟರ್ ಪೆಟ್ರೆ ತನೇಜಾ, “ನಾವು 2024ರ ವರ್ಷವನ್ನು ನಮ್ಮ ಹೊಚ್ಚಹೊಸ ಕಾಂಪ್ಯಾಕ್ಟ್ ಎಸ್.ಯು.ವಿ. ಪ್ರಕಟಣೆಯೊಂದಿಗೆ ಪ್ರಾರಂಭಿಸಿದೆವು. 2024ರ ಮಧ್ಯದಲ್ಲಿ ನಾವು ಸರಿಯಾದ ದಾರಿಯಲ್ಲಿದ್ದೇವೆ. ನಮ್ಮ ಕಾಂಪ್ಯಾಕ್ಟ್ ಎಸ್.ಯು.ವಿ.ಯು ಭಾರತದಾದ್ಯಂತ ನಮ್ಮ ರಸ್ತೆಗಳಲ್ಲಿ ಕಠಿಣ ಪರೀಕ್ಷೆಗೆ ಒಳಪಡುತ್ತಿದೆ ಮತ್ತು ನಮ್ಮ ಉತ್ಪನ್ನ ಸಿದ್ಧತೆಗಳು, ಹೆಚ್ಚಿನ ಸಾಮರ್ಥ್ಯಗಳು ಮತ್ತು ಗುಣಮಟ್ಟದ ಸ್ಥಳೀಯ ಪೂರೈಕೆದಾರ ಪಾಲುದಾರರನ್ನು ಸಜ್ಜುಗೊಳಿಸುತ್ತಿದ್ದೇವೆ. ಈ ಹೊಸ ಕಾಂಪ್ಯಾಕ್ಟ್ ಎಸ್.ಯು.ವಿ.ಯು ನಿಜಕ್ಕೂ ಭಾರತದ ರಸ್ತೆಗಳ ಮೇಲೆ ನಮ್ಮ ಯೂರೋಪಿಯನ್ ತಂತ್ರಜ್ಞಾನವನ್ನು ಕ್ರಾಂತಿಕಾರಗೊಳಿಸಲಿದೆ. ಇದು ದೊಡ್ಡ ಕಾರ್ ಪ್ಲಾಟ್ ಫಾರಂ ಆಧರಿಸಿದ್ದು ನಮ್ಮ ಕಾಂಪ್ಯಾಕ್ಟ್ ಎಸ್.ಯು.ವಿ.ಯು ಕಿರಿದಾದ ಹೆಜ್ಜೆ ಗುರುತಿನಲ್ಲಿಯೇ `ದೊಡ್ಡ ಕಾರು’ ಭಾವನೆ ತರುತ್ತದೆ ಮತ್ತು ಇದರಿಂದ ಹೊಸ ಕಾರು ಖರೀದಿದಾರರಿಗೆ ಮಹತ್ತರ ಮೆಚ್ಚುಗೆಯಾಗುತ್ತದೆ, ಅದು ಯೂರೋಪಿನ ಹೊರಗಡೆ ಸ್ಕೋಡಾ ಆಟೊಗೆ ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿರುವ ನಮ್ಮ ಬ್ರಾಂಡ್ ನ ಬದ್ಧತೆಗೆ ಅನುಗುಣವಾಗಿದೆ. ಸ್ಕೋಡಾ ಕಾರುಗಳ ಹೆಚ್ಚಿನ ಪ್ರಮಾಣವು ನಮ್ಮ ಸ್ಥಳೀಯ ಕಾರ್ಖಾನೆಗಳಲ್ಲಿ ತಯಾರಾಗುತ್ತವೆ ಮತ್ತು ಸ್ಥಳೀಯವಾಗಿ ಉತ್ಪಾದನೆಯಾದ ಸ್ಕೋಡಾ ಕಾರುಗಳನ್ನು 14 ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ” ಎಂದರು.

ವಿನ್ಯಾಸ

ಕುಶಾಕ್ ಮತ್ತು ಸ್ಲೇವಿಯಾದಂತಹ ದೊಡ್ಡ ಕಾರುಗಳಿಗೆ ಅಭಿವೃದ್ಧಿಪಡಿಸಲಾದ ಎಂಕ್ಯೂಬಿ-ಎ0-ಐಎನ್ ಪ್ಲಾಟ್ ಫಾರಂ ಆಧರಿಸಿರುವ ಬರಲಿರುವ ಕಾಂಪ್ಯಾಕ್ಟ್ ಎಸ್.ಯು.ವಿ. ದೊಡ್ಡ ಕಾರಿನ ಡೈನಮಿಕ್ಸ್, ನಿರ್ವಹಣೆ ಮತ್ತು ರೋಡ್-ಮ್ಯಾನರ್ಸ್ ಭರವಸೆ ನೀಡುತ್ತಿದ್ದು 4 ಮೀಟರ್ ವ್ಯಾಪ್ತಿಯನ್ನು ಕಾಪಾಡಿಕೊಂಡು ನೀಡುತ್ತಿದೆ. ಈ ವಿನ್ಯಾಸವನ್ನು ಸ್ಕೋಡಾ ಆಟೊದ ಆಧುನಿಕ ಸಾಲಿಡ್ ಡಿಸೈನ್ ಭಾಷೆಯ ಅಂಶಗಳಿಂದ ಉನ್ನತಗೊಳಿಸಲಾಗಿದೆ. ಈ ಹೊಚ್ಚಹೊಸ ಕಾಂಪ್ಯಾಕ್ಟ್ ಎಸ್.ಯು.ವಿ. ಭಾರತದಲ್ಲಿ ಆಧುನಿಕ ಸಾಲಿಡ್ ಡಿಸೈನ್ ಭಾಷೆಯ ಮೊದಲ ಅನುಷ್ಠಾನವಾಗಲಿದೆ. ಇದು ಸ್ಪಷ್ಟ, ಕಡಿಮೆಗೊಳಿಸಿದ ಗೆರೆಗಳಿಂದ ರೂಪಿಸಲ್ಪಟ್ಟಿದ್ದು ಸ್ಕೋಡಾ ಕಾರುಗಳ ಸರಳತೆ, ಸದೃಢತೆ ಮತ್ತು ಗುಣಮಟ್ಟವನ್ನು ಪ್ರತಿಫಲಿಸುತ್ತದೆ.

ವಿನ್ಯಾಸದ ವಿಧಾನ

ವಿನ್ಯಾಸದ ತಂಡವು ಈ ಹೊಚ್ಚಹೊಸ ಎಸ್.ಯು.ವಿ.ಗೆ ದಿಟ್ಟ ಮತ್ತು ಸದೃಢ ಆಕಾರಗಳನ್ನು ಫೆಂಡರ್ ಗಳ ಸುತ್ತಲೂ ನೀಡಲು ಪ್ರಯತ್ನಶೀಲವಾಗಿದ್ದು ಕಾರಿಗೆ ಉನ್ನತೀರಿಸಿದ ನಿಲುವು ಮತ್ತು ರಸ್ತೆಯ ಉಪಸ್ಥಿತಿ ನೀಡುತ್ತದೆ. ಈ ಸ್ಕೋಡಾ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಚಕ್ರದ ಸುತ್ತಲೂ ಸ್ಥಳವಿದ್ದು ಏರಿಳಿತದ ರಸ್ತೆಯ ಮೇಲ್ಮೈಗಳಲ್ಲೂ ಸರಾಗವಾಗಿ ಚಲಿಸುತ್ತದೆ ಮತ್ತು ಕಾರಿಗೆ ಎಸ್.ಯು.ವಿ. ಗುಣವನ್ನು ನೀಡುತ್ತದೆ. ಈ ವಿನ್ತಾಸವು ಸಾಮಾನ್ಯ ಸ್ಕೋಡಾ ಎಸ್.ಯು.ವಿ. ಭಾಷೆಯನ್ನು ಮುಂಬದಿಯಲ್ಲಿ ಉಳಿಸಿಕೊಳ್ಳುತ್ತದೆ ಹಾಗೂ ನಿಖರ ಡಿ.ಆರ್.ಎಲ್. ಲೈಟ್ ಸಿಗ್ನೇಚರ್ ಗಳಂತಹ ಸುಧಾರಿತ ಮತ್ತು ನಿಖರ ವಿವರಗಳನ್ನು ಸೇರಿಸುತ್ತದೆ. ಈ ಬರುವ ಎಸ್.ಯು.ವಿ.ಯು ಬದಿಯಲ್ಲಿ ಹಾಗೂ ಹಿಂಬದಿಯಲ್ಲಿ ಹೆಕ್ಸಾಗನ್ ಮಾದರಿಯನ್ನು ಹೊಂದಿದ್ದು ಈ ವಿನ್ಯಾಸಕ್ಕೆ ಹೆಚ್ಚಿನ ಮೌಲ್ಯ ನೀಡಿದೆ.

ಕಾರು

ಹೊಚ್ಚಹೊಸ ಕಾಂಪ್ಯಾಕ್ಟ್ ಎಸ್.ಯು.ವಿ. ಭಾರತದಲ್ಲಿ ಸಬ್ 4 ಮೀಟರ್ ಎಸ್.ಯು.ವಿ. ವರ್ಗದಲ್ಲಿ ಸ್ಪರ್ಧಿಸುತ್ತದೆ. ಇದು ಈ  ವಲಯಕ್ಕೆ ಈ ಬ್ರಾಂಡ್ ನ ಮೊದಲ ಪ್ರವೇಶವಾಗಿದೆ ಮತ್ತು ಕಂಪನಿಯು ಈ ಹೊಸ ವಾಹನಕ್ಕೆ ಹೊಸ ಗ್ರಾಹಕರನ್ನು ತರಲು ಇಡಿಯಾಗಿ ಹೊಸ ಮಾರುಕಟ್ಟೆಗಳನ್ನು ಗುರಿಯಾಗಿಸಿಕೊಂಡಿದೆ. ಈ ಎಸ್.ಯು.ವಿ.ಯು ಕುಶಾಕ್ ಮತ್ತು ಸ್ಲೇವಿಯಾದಂತೆ ಎಂಕ್ಯೂಬಿ-ಎ0-ಐಎನ್ ಪ್ಲಾಟ್ ಫಾರಂ ಆಧರಿಸಿದ್ದು ಭಾರತದಲ್ಲಿನ ಹಾಗೂ ಝೆಕ್ ರಿಪಬ್ಲಿಕ್ ತಂಡಗಳು ಭಾರತಕ್ಕಾಗಿ ಅಭಿವೃದ್ಧಿಪಡಿಸಿವೆ. ಕುಶಾಕ್ ಮತ್ತು ಸ್ಲೇವಿಯಾ ವಯಸ್ಕರು ಮತ್ತು ಮಕ್ಕಳ ಜಾಗತಿಕ ಎನ್.ಸಿ.ಎ.ಪಿ.ಯ ಸುರಕ್ಷತೆಯ ಪರೀಕ್ಷೆಗಳಲ್ಲಿ ಪೂರ್ಣ 5-ಸ್ಟಾರ್ಸ್ ಪಡೆದಿದೆ ಮತ್ತು 14 ದೇಶಗಳಿಗೆ ರಫ್ತಾಗುತ್ತಿದೆ.