Wednesday, 11th December 2024

ಆ.೧೫ ರಂದು ವೇಗದ ಸೈಕಲ್ ಸ್ಪರ್ಧೆ

ಚಿಕ್ಕನಾಯಕನಹಳ್ಳಿ : ಮಾಜಿ ಮಂತ್ರಿ ಎನ್. ಬಸವಯ್ಯನವರ ಸ್ಮರಣಾರ್ಥ ಸ್ವಾತಂತ್ರö್ಯ ಸುವರ್ಣ ಮಹೋತ್ಸವದ ಅಂಗವಾಗಿ ಆ.೧೫ ರಂದು ವೇಗದ ಸೈಕಲ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕ ಸ್ವಾಮಿ ಹೇಳಿದರು.

ಕನ್ನಡ ಸಂಘದ ವೇದಿಕೆಯ ಆವರಣದಲ್ಲಿ ಮಾತನಾಡಿದ ಅವರು ಪಟ್ಟಣದ ನೆಹರು ವೃತ್ತದಿಂದ ಆರಂಭವಾಗುವ ಸ್ಪರ್ಧೆಯು ಹೊಸಹಳ್ಳಿ, ಜಾಣೆಹಾರ್ ಮುಖಾಂತರ ಕಾತ್ರಿಕೆಹಾಲ್‌ಗೆ ತೆರಳಿ ವಾಪಸ್ ನೆಹರು ವೃತ್ತಕ್ಕೆ ಬಂದು ಸಂಪನ್ನಗೊಳಿಸುವುದು.

ಪ್ರಥಮ ಬಹುಮಾನವಾಗಿ ೫೫೫೫ ರೂಪಾಯಿ, ದ್ವಿತಿಯ ಬಹುಮಾನ ೩೩೩೩ ರೂಪಾಯಿ, ತೃತೀಯ ೨೨೨೨ ರೂಪಾಯಿ, ನಾಲ್ಕನೇ ೧೧೧೧ ರೂಪಾಯಿ, ಐದನೇ ೫೫೫ ರೂಪಾಯಿಗಳು. ಸ್ಪರ್ಧೆಯನ್ನು ಪೂರ್ಣಗೊಳಿಸುವ ಪ್ರತಿಯೊಬ್ಬರಿಗೂ ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ೯೬೧೧೨೪೫೮೫೫, ೯೭೪೦೨೪೦೯೮೪, ೯೩೪೨೮೯೨೬೫೫ ಈ ಸಂಖ್ಯೆಯನ್ನು ಸಂಪರ್ಕಿಸಿ. ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ಕೃಷ್ಣೇಗೌಡರನ್ನು ಕನ್ನಡ ಸಂಘದ ವತಿಯಿಂದ ಇದೇ ವೇಳೆ ಗೌರವಿಸಲಾಯಿತು.

ಚಿಕ್ಕಮಕ್ಕಳಿಗಾಗಿ ಮೂರು ಚಕ್ರದ ವೇಗದ ಸೈಕಲ್ ಸ್ಪರ್ಧೆ
ಸ್ನೇಹಕೂಟ ಬಳಗದ ವತಿಯಿಂದ ೩ ರಿಂದ ೬ ವರ್ಷದ ಒಳಗಿನ ಪುಟಾಣಿಗಳಿಗೆ ಮೂರು ಚಕ್ರದ ವೇಗದ ಸೈಕಲ್ ಸ್ಪರ್ಧೆಯನ್ನು ಆ. ೧೫ ರ ಮಧ್ಯಾಹ್ನ ೩.೩೦ ಕ್ಕೆ ಆಯೋಜಿಸಲಾಗಿದೆ.

ಪ್ರವೇಶ ಧನ ೫೦ ರೂ ಆಗಿದ್ದು ಭಾಗವಹಿಸುವ ಮಕ್ಕಳು ಜನ್ಮ ದಿನಾಂಕದ ಧೃಡಿಕರಣ ಪತ್ರ ತರಬೇಕು. ಹೆಸರು ನೊಂದಣಿ ಮಾಡಲು ಆ.೧೩ ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಯಣ್ಣ ಮೊ. ಸಂಖ್ಯೆ ೯೪೪೯೬೮೪೨೫೯ ಸಂಪರ್ಕಿಸಲು ಸ್ನೇಹಕೂಟದ ಅಧ್ಯಕ್ಷ ಸಿ.ಹೆಚ್.ಪ್ರಕಾಶ್ ತಿಳಿಸಿದರು.