ಬಾಗೇಪಲ್ಲಿ: ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್ ಸರಕಾರಗಳೆರಡೂ ಇದ್ದು ಸಾಮಾನ್ಯ ಜನರ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದು ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆ0ಕಟಪ್ಪ ಆರೋಪಿಸಿದರು.
ಬಾಗೇಪಲ್ಲಿ ಪಟ್ಟಣದ ಸಿಪಿಐಎಂ ಪಕ್ಷದ ಸುಂದರಯ್ಯ ಭವನದಲ್ಲಿ ಬಾಗೇಪಲ್ಲಿ ಪಟ್ಟಣದಲ್ಲಿ ನವೆಂಬರ್ ೨೧, ೨೨ರಂದು ಜಿಲ್ಲಾ ಸಮ್ಮೇಳನದ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.
ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೊಳಿಸುತ್ತಿದೆ ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸುವಂತಾಗಿದೆ. ಆದರೆ, ಕೇಂದ್ರ ಸರ್ಕಾರವು ಈ ಬಗ್ಗೆ ಯಾವುದೇ ಚಿಂತೆಯಿಲ್ಲದAತೆ ವರ್ತಿಸುತ್ತಿದೆ ಇನ್ನೂ ಕಾಂಗ್ರೆಸ್ ಭ್ರಷ್ಟಾಚಾರದ ಆರೋಪದಲ್ಲಿ ಜನರನ್ನು ಮರೆತಿದ್ದಾರೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತವಾದ ನೀರಾವರಿ ಯೋಜನೆಗಳು ಜಾರಿಯಾಗಬೇಕು, ಕೆ.ಸಿ ವ್ಯಾಲಿಗೆ ಮೂರನೇ ಹಂತದ ಶುದ್ದೀಕರಣ, ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದಿಗೆ ಕೈಗೊಂಡಿರುವ ನಿರ್ಣಯ ಗಳನ್ನು ಜಾರಿ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಸಿಪಿಐಎಂ ಪಕ್ಷವನ್ನು ಬಲಪಡಿಸಿ ಜನಪರವಾದ ಹೋರಾಟಗಳನ್ನು ಹೆಚ್ಚು ಹೆಚ್ಚಾಗಿ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾ.ಅನಿಲ್ ಕುಮಾರ್ ಅವುಲಪ್ಪ, ಸಿದ್ದಗಂಗಪ್ಪ,ರಘುರಾಮ ರೆಡ್ಡಿ ಅಶ್ವಥಪ್ಪ, ಜಿ.ಕೃಷ್ಣಪ್ಪ, ಬಿಳ್ಳೂರು ನಾಗರಾಜು, ಚನ್ನರಾಯಪ್ಪ, ಓಬಳ ರಾಜು, ಲಕ್ಷ್ಮೀ ನಾರಾಯಣ, ಮುಸ್ತಫಾ, ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.