Wednesday, 11th December 2024

ಫೆಬ್ರವರಿಯಲ್ಲಿ ಸೈಬರ್ ಸೆಕ್ಯುರಿಟಿ ಸರ್ಟಿಫಿಕೇಟ್ ಪ್ರೊಗ್ರಾಂ ಆರಂಭ

ಸೆಕ್ಯೂರ್ ಐಸ್ ಸೈಬರ್ ಸೆಕ್ಯುರಿಟಿ ಸರ್ಟಿಫಿಕೇಟ್ ಕಾರ್ಯಕ್ರಮವು 2024 ರ ಫೆಬ್ರವರಿ ಬ್ಯಾಚ್‌ಗಾಗಿ ಮಹತ್ವಾಕಾಂಕ್ಷಿ ವೃತ್ತಿಪರರನ್ನು ಸ್ವಾಗತಿಸುತ್ತದೆ

ಬೆಂಗಳೂರು: ಬೆಂಗಳೂರಿನಲ್ಲಿರುವ ಪ್ರಮುಖ ಸೈಬರ್ ಭದ್ರತಾ ಸಂಸ್ಥೆಯಾದ ಸೆಕ್ಯೂರ್ ಐಸ್ (SecurEyes), 2024ರ ಫೆಬ್ರವರಿ ಬ್ಯಾಚ್ಗಾಗಿ ಅತಿ ಹೆಚ್ಚು ಬೇಡಿಕೆಯಿರುವ ಸೈಬರ್ ಸೆಕ್ಯುರಿಟಿ ಸರ್ಟಿಫಿಕೇಟ್ ಪ್ರೊಗ್ರಾಂ ಅನ್ನು ಪ್ರಾರಂಭಿಸಲು ಉತ್ಸುಕವಾಗಿದೆ.

ಅಭಿವೃದ್ಧಿ ಮತ್ತು ಸುರಕ್ಷತೆಯ ವಾತಾವರಣವನ್ನು ಬೆಳೆಸುವಲ್ಲಿ ಸೈಬರ್ ಭದ್ರತಾ ವೃತ್ತಿಪರರು ವಹಿಸುವ ನಿರ್ಣಾಯಕ ಪಾತ್ರವನ್ನು ಒತ್ತಿಹೇಳಿದ ಸೆಕ್ಯೂರ್ ಐಸ್ ನ ಸಹ ಸಂಸ್ಥಾಪಕ ಮತ್ತು ಸಿಟಿಒ ಸೀಮಂತ ಪಟ್ನಾಯಕ್, “ಅಸುರಕ್ಷಿತ ವಾತಾವರಣದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ. ಸೈಬರ್ ಸೆಕ್ಯುರಿಟಿ ವೃತ್ತಿಪರರು, ಸಾಮಾನ್ಯ ವ್ಯಕ್ತಿಗಳು, ವ್ಯವಹಾರಗಳು ಮತ್ತು ಸರ್ಕಾರಗಳ ಭಾವನಾತ್ಮಕ ಮತ್ತು ದೈಹಿಕ ಸುರಕ್ಷತೆಯ ನಡುವಿನ ಪ್ರಮುಖ ಕೊಂಡಿ ಯಾಗಿದ್ದಾರೆ. ಈ ದೊಡ್ಡ ವೃತ್ತಿ ಸಾಕಷ್ಟು ತೃಪ್ತಿಯನ್ನು ನೀಡುತ್ತದೆ” ಎಂದು ಪಟ್ನಾಯಕ್ ಹೇಳಿದರು.