Wednesday, 11th December 2024

ಫೆ.11: ರಾಷ್ಟ್ರೀಯ ನೃತ್ಯೋತ್ಸವ

ತುಮಕೂರು: ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ,ಗಾಂಧಿ ಸರ್ಕಲ್ ಚನ್ನರಾಯಪಟ್ಟಣ ಇವರ ವತಿಯಿಂದ ಫೆ.11ರ ಭಾನುವಾರ ಬೆಳಗ್ಗೆ 10 ಗಂಟೆಯಿ0ದ ಸಂಜೆ 6 ಗಂಟೆಯವರೆಗೆ 60ನೇ ರಾಷ್ಟ್ರೀಯ ನೃತ್ಯೋತ್ಸವವನ್ನು ಯಡಿಯೂರಿನ ಶ್ರೀಸಿದ್ದಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ಆಯೋಜಿಸಲಾಗಿದೆ ಎಂದು ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯ ಕಾರ್ಯದರ್ಶಿ ವಿದೂಷಿ ಡಾ.ಸ್ವಾತಿ ಪಿ.ಭಾರದ್ವಜ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,2017ರಲ್ಲಿ ಸ್ಥಾಪನೆಯಾದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ(ರಿ) ಆರಂಭದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಗಿತ್ತು.ಆದರೆ ಜನರಿಂದ ದೊರೆತೆ ಅಭೂತಪೂರ್ವ ಸ್ಪಂದನೆಯಿಂದ ಪ್ರತಿ ತಿಂಗಳು ಒಂದು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದುವರೆಗೂ 59 ಕಾರ್ಯಕ್ರಮಗಳನ್ನು ಆಯೋಜಿಸಿದ್ದು, 5 ವರ್ಷದಿಂದ 60 ಪ್ರತಿವರ್ಷ ದವರೆಗಿನ ನೃತ್ಯಪಟುಗಳು ವಯುಕ್ತಿಕ ವಿಭಾಗದಲ್ಲಿ ಮತ್ತು ಗುಂಪು ವಿಭಾಗದಲ್ಲಿ ಭಾಗವಹಿಸಬಹುದಾಗಿದೆ.ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯರಿಗೆ ರಾಷ್ಟಿçÃಯ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.
ವಿವಿಧ 8 ಶಾಸ್ತಿçÃಯ ನೃತ್ಯಗಳನ್ನು ಒಂದೆಡೆ ಸೇರಿಸಿ 125ಕ್ಕು ಹೆಚ್ಚು ಕಲಾವಿದರು, ನೃತ್ಯ ಗುರುಗಳು ಭಾಗವಹಿಸಿ,ನೃತ್ಯ ಪ್ರದರ್ಶನ ನೀಡಲಿದ್ದಾರೆ. ಇದುವರೆಗೂ ಸಿಂಗಪುರ್,ಮಲೇಷಿಯಾ,ಶ್ರೀಲAಕಾ, ಇಂಡೋನೆಷಿಯಾ ಸೇರಿದಂತೆ ಪ್ರವಾಸಿ ತಾಣಗಳಾದ ಶಿರಡಿ,ಮಂತ್ರಾಲಯ,ತಿರುಪತಿ,ತಮಿಳುನಾಡು,ಹೈದ್ರಾಬಾದ್,ಚನೈ, ತಲ0ಗಾಣ, ಗೋವಾ, ಗುಜರಾತ್, ರಾಜ್‌ಕೋಟ್, ಕೇರಳ, ಕಣ್ಣೂರು, ಮೈಸೂರು, ಧರ್ಮಸ್ಥಳ, ಶ್ರವಣಬೆಳಗುಳ, ಉಡುಪಿ, ಹೊರನಾಡು, ತಂಜಾವೂರು, ಕೋಲಾರ, ಸೇರಿದಂತೆ ರಾಜ್ಯುದ ವಿವಿಧೆಡೆ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ತುಮಕೂರಿನ ಪರಿಸರವಾದಿ ಪ್ರೋ.ಸಿದ್ದಪ್ಪ,ಮೈಸೂರಿನ ವೈದಿಕ ಮತ್ತು ಅದ್ಯಾತ್ಮಿಕ ಚಿಂತಕರಾದ ಶ್ರೀಧರಶರ್ಮ,ಉದ್ಯಮಿ ಡಾ.ಆರ್.ಎಲ್. ರಮೇಶಬಾಬು,ಹಿರಿಯ ಪತ್ರಕರ್ತರಾದ ಎ.ಎಲ್.ಜಯರಾಮ್,ಲೊಕೇಶ್,ವಿ. ಅವರುಗಳಿಗೆ ರಾಷ್ಟಿçÃಯ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಡಾ.ಸ್ವಾತಿ ಭಾರದ್ವಜ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷರಾದ  ಅನಿತಾ ಪ್ರಕಾಶ್,ಅಕಾಡೆಮಿ ರಾಜ್ಯ ಸಂಚಾಲಕರಾದ ಲಕ್ಷಿö್ಮÃಶ್.ಸಿ.ಆರ್, ರಘುರಾಜ್.ವೈ.ಕೆ ಉಪಸ್ಥಿತರಿದ್ದರು.