Wednesday, 11th December 2024

ಪುರಸಭಾ ಆಡಳಿತದಲ್ಲಿ ಪತಿಯಂದಿರ ದರ್ಬಾರ್

ದಲಿತ ಕುಂದು ಕೊರತೆ ಸಭೆಯಲ್ಲಿ ಆಕ್ರೋಶ

ಚಿಕ್ಕನಾಯಕನಹಳ್ಳಿ : ಪುರಸಭೆಯ ಆಡಳಿತದಲ್ಲಿ ಮಹಿಳೆಯರು ಸದಸ್ಯರಾದರೂ ಪತಿಯರೇ ದರ್ಬಾರ್ ನಡೆಸುತ್ತಿರುವುದು ದುರಂತ ಎಂದು ದಲಿತ ಮುಖಂಡ ಲಿಂಗದೇವರು ವಿಷಾದಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪ.ಜಾ. ಮತ್ತು ಪ.ವರ್ಗದ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದರು.

ಕೆಲವು ಮಹಿಳಾ ಸದಸ್ಯರ ಪತಿಯರು ನಿತ್ಯವೂ ಪುರಸಭಾ ಕಚೇರಿಗೆ ಆಗಮಿಸಿ ಚೇರು ಹಾಕಿಕೊಂಡು ಕುಳಿತುಕೊಳ್ಳುತ್ತಾರೆ. ಪ್ರಶ್ನಿಸಿದರೆ ಉಡಾಪೆ ಉತ್ತರವನ್ನು ನೀಡುತ್ತಾರೆ ಎಂದಾಗ ಸಚಿವರು ಅಸಹಾಯಕತೆ ವ್ಯಕ್ತಪಡಿಸಿ ಇದನ್ನು ಅವರೇ ಅರ್ಥ ಮಾಡಿಕೊಳ್ಳ ಬೇಕು. ನಾನು ಶಾಸಕನಾಗಿ ಇಲ್ಲದೆ ಇದ್ದಿದ್ದರೆ ಸಾಮಾನ್ಯ ಸಭೆಗೆ ಹಾಜರಾಗುತ್ತಿದ್ದರೇನೋ ಎಂದು ಹೇಳಿ ಹುಳಿಯಾರು ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಓರ್ವ ಮಹಿಳಾ ಸದಸ್ಯೆಯ ಪತಿ ಹಾಜರಿದ್ದು ಇದನ್ನು ಗಮನಿಸಿ ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಯಿತು ಎಂದರು.

ಮತಾಂತರಿಗಳಿಗೆ ಮೀಸಲಾತಿ ಇಲ್ಲ
ಒತ್ತಾಯ ಪೂರ್ವಕವಾಗಿ ಆಮಿಷ ಒಡ್ಡಿ ಮತಾಂತರ ಮಾಡುತ್ತಿರುವ ಪ್ರಕರಣಗಳು ತಾಲ್ಲೂಕಿನಲ್ಲಿ ಸದ್ದು ಮಾಡುತ್ತಿದ್ದು ನಿಗಾ ವಹಿಸುವಂತೆ ಸಭೆಯಲ್ಲಿ ಒತ್ತಾಯಿಸಿದಾಗ ಇದೀಗ ಮತಾಂತರಿಗಳಿಗೆ ಮೀಸಲಾತಿ ಸಿಗುವುದಿಲ್ಲ. ಪರಿಶಿಷ್ಟ ಜಾತಿಯ ಮೀಸಲಾತಿ ಪಡೆಯುತ್ತಿರುವವರು ಮತಾಂತರಗೊ0ಡು ಮುಸ್ಲಿಂ, ಕ್ರೆöÊಸ್ತ ಧರ್ಮವನ್ನು ಪಾಲಿಸಿದರೆ ಅವರಿಗೆ ಯಾವುದೇ ರೀತಿಯ ಮೀಸಲಾತಿ ಸಿಗುವುದಿಲ್ಲ. ಹಿಂದು ಹಾಗು ಬೌಧ್ದ ಧರ್ಮದ ಹೊರತಾಗಿ ಬೇರೆ ಧರ್ಮದ ಯಾವುದೇ ವ್ಯಕ್ತಿಗಳನ್ನು ಪರಿಶಿಷ್ಟ ಜಾತಿಗೆ ಸೇರಿದವರೆಂದು ಪರಿಗಣಿಸಲಾಗುವುದಿಲ್ಲ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ದಲಿತ ಕೇರಿಗಳಲ್ಲಿ ಬೀದಿ ದೀಪಗಳು ಸರಿಯಾಗಿ ಉರಿಯುವುದಿಲ್ಲ, ದಲಿತರಿಗೆ ಮೂಲಭೂತ ಸೌಕರ್ಯಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಒದಗಿಸುತ್ತಿಲ್ಲ ಅಲೆಮಾರಿಗಳಿಗೆ ತಾಲ್ಲೂಕು ಆಡಳಿತ ಅತಿಯಾದ ಕಾಳಜಿ ತೋರುತ್ತಿದ್ದು ಸ್ಥಳಿಯರಿಗೆ ಅನ್ಯಾಯ ವಾಗುತ್ತಿದೆ ಎಂದು ಬೇವಿನಹಳ್ಳಿ ಚನ್ನಬಸವಯ್ಯ ದೂರಿದರು. ಹೊನ್ನೆಬಾಗಿಯ ಶ್ರೀನಿವಾಸ್ ಎಂಬುವರು ಹಸು ಕೊಡಿಸುತ್ತೇ ನೆಂದು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆಂದು ಸಭೆಯಲ್ಲಿ ದೂರು ಕೇಳಿಬಂದಿತು.

ಪಟ್ಟಣದಲ್ಲಿರುವ ಸರಕಾರಿ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಜಗಜೀವನರಾಂ ಭವನ ಕಟ್ಟಿಸಿ ಅದರಲ್ಲಿ ಗ್ರಂಥಾಲಯ ಆರಂಭಿಸಬೇಕೆAದು ಕೋರಲಾಯಿತು. ಅಂಗನವಾಡಿ ಕೇಂದ್ರಗಳನ್ನು ಸುಸ್ಥಿತಿಯಲ್ಲಿಡುವಂತೆ ಸಚಿವರು ಸಿಡಿಪಿಓಗೆ ಸೂಚಿಸಿ ದರು. ಸಭೆಯಲ್ಲಿ ದಲಿತ ಮುಖಂಡ ನಿರಂಜನ್. ವಸಂತ್ ಕುಮಾರ್, ಗೋವಿಂದ ರಾಜು, ತಹಸೀಲ್ದಾರ್ ತೇಜಸ್ವಿನಿ, ಇಓ ವಸಂತ್‌ಕುಮಾರ್, ಸಮಾಜ ಕಲ್ಯಾಣಾಧಿಕಾರಿ ತ್ರಿವೇಣಿ, ಸಿಪಿಐ ನಿರ್ಮಲ ಹಾಗು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.