Wednesday, 11th December 2024

ದರ್ಶನ್ ಸೇರಿ ನಾಲ್ವರು ಆರೋಪಿಗಳು ಪುನಃ ಪೊಲೀಸರ ಕಸ್ಟಡಿಗೆ

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪ ಸಂಬಂಧ ಇಂದು ವಿಚಾರಣೆ ನಡೆಸಿದ 24ನೇ ACMM ಕೋರ್ಟ್, ದರ್ಶನ್ ಸೇರಿ ನಾಲ್ವರು ಆರೋಪಿಗಳನ್ನು ಪುನಃ ಅನ್ನಪೂರ್ಣೇಶ್ವರಿ ನಗರ ಪೊಲೀಸರ ಕಸ್ಟಡಿಗೆ ನೀಡಿ ಆದೇಶಿಸಿದೆ. ಅತ್ತ ಆರೋಪಿ A1 ಪವಿತ್ರಾಗೌಡ ಸೇರಿ 10 ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

ಮೈಸೂರಿನ ಹೋಟೆಲ್ವೊಂದರಲ್ಲಿ ದರ್ಶನ್ ತಂಗಿದ್ದಕ್ಕೆ ಹಾಗೂ ವರ್ಕೌಟ್ ಮಾಡಿದ್ದ ಜಿಮ್ನಲ್ಲೂ ಪೊಲೀಸರು ಮಹಜರು ಮಾಡಬೇಕಿದೆ. ರೇಣುಕಾಸ್ವಾಮಿ ಕೊಲೆ ನಂತರದಲ್ಲಿ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಮನೆಗೆ ಹೋಗಿದ್ದರು. ಪತ್ನಿ ಮನೆಯಲ್ಲಿ ನಡೆದ ಪೂಜೆಯಲ್ಲೂ ದರ್ಶನ್ ಭಾಗಿಯಾಗಿದ್ದರು. ಇನ್ನು ವಿಜಯಲಕ್ಷ್ಮಿ ಮನೆಯಿಂದ ದರ್ಶನ್ ಶೂ ವಶಕ್ಕೆ ಪಡೆಯಲಾಗಿದೆ.

ಪೊಲೀಸರು ವಿಚಾರಣೆ ವೇಳೆ ದರ್ಶನ್ ಸಮಂಜಸವಾಗಿ ಉತ್ತರ ನೀಡಿಲ್ಲ ಎನ್ನಲಾಗಿದೆ. FSL ವರದಿ ಸಹ ಇನ್ನೂ ಪೊಲೀಸರ ಕೈಗೆ ಸೇರಿಲ್ಲ. ಆರೋಪಿಗಳ ಮೊಬೈಲ್ ರಿಟ್ರಿವ್ ಮಾಡಲಾಗಿದ್ದು ಹಾಗೂ ಟೆಕ್ನಿಕಲ್ ಎವಿಡೆನ್ಸ್ ಕ್ರಾಸ್ ಎಕ್ಸಾಮಿನೇಷನ್ ಬಾಕಿ ಇರುವ ಕಾರಣ ತನಿಖೆ ಮಾಡಬೇಕಿದೆ. ಅಲ್ಲದೇ ಮೃತ ರೇಣುಕಾಸ್ವಾಮಿಯ ಮೊಬೈಲ್ ಕೂಡ ಇನ್ನು ಪತ್ತೆ ಮಾಡಲಾಗುತ್ತಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ಕೇಳಿದ್ದಾರೆಂದು ವರದಿಯಾಗಿದೆ.