Friday, 1st December 2023

ಅಂಗಿ ಬನಿಯನ್ ಬಿಚ್ಚಿ ದೇವರ ದರ್ಶನ ಮಾಡುವುದಕ್ಕೆ ಆಕ್ಷೇಪ: ದೂರು ಸಲ್ಲಿಕೆ

ದಕ್ಷಿಣ ಕನ್ನಡ: ದೇವಾಲಯಗಳಲ್ಲಿ ಅಂಗಿ ಬನಿಯನ್ ತೆಗೆದು ದೇವರ ದರ್ಶನ ಮಾಡುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಈ ಕುರಿತು ಧಾರ್ಮಿಕ ದತ್ತಿ ಇಲಾಖೆಗೆ ಲಿಖಿತ ದೂರು ಸಲ್ಲಿಕೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಮಣ್ಯ ದೇವಾಲಯ, ಕೊಲ್ಲೂರು ಮೂಕಾಂಬಿಕಾ ದೇವಾಲಯದ ವಿರುದ್ಧ ದೂರು ನೀಡಲಾಗಿದೆ. ಮಂಗಳೂರು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದಿಂದ ಧಾರ್ಮಿಕ ದತ್ತಿ ಇಲಾಖೆಗೆ ಲಿಖಿತ ದೂರು ನೀಡಲಾಗಿದೆ.

ಹಿಂದೂ ಸಂಪ್ರದಾಯದಲ್ಲಿ ಇಂತಹ ಪದ್ದತಿ ಇಲ್ಲ, ದಿವ್ಯಾಂಗರು ಬಟ್ಟೆ ಕಳಚಿ ದರ್ಶನ ಪಡೆಯುವುದು ಕಷ್ಟವಾಗುತ್ತದೆ. ಇದು ಸಂವಿಧಾನ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಕೂಡಲೇ ದೇವಾಲಯಗಳಲ್ಲಿ ಅಂಗಿ ಬನಿಯನ್ ತೆಗೆದು ದೇವರ ದರ್ಶನ ಮಾಡಬೇಕು ಎಂಬ ಸೂಚನಾ ಫಲಕ ತೆರವುಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.

error: Content is protected !!