Friday, 20th September 2024

Darshan: ಆರೋಪಿ ದರ್ಶನ್‌ಗೆ ಸರ್ಜಿಕಲ್‌ ಚೇರ್‌

darshan

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ ಅವರಿಗೆ ಸರ್ಜಿಕಲ್‌ ಚೇರ್‌ ನೀಡಲಾಗಿದೆ.

 

ದರ್ಶನ್‌ಗೆ ಸರ್ಜಿಕಲ್‌ ಚೇರಿನ ಅಗತ್ಯವಿದೆ ಎಂದು ಆತನ ಪತ್ನಿ ವಿಜಯಲಕ್ಷ್ಮೀ ಅವರು ವೈದ್ಯಕೀಯ ವರದಿ ನೀಡಿದ್ದರೂ, ಅದನ್ನು ಜೈಲಾಧಿಕಾರಿ ಒಪ್ಪಿರಲಿಲ್ಲ.

ದರ್ಶನ್‌ ವೈದ್ಯಕೀಯ ವರದಿ ಬಂದ ನಂತರವೇ ಸರ್ಜಿಕಲ್‌ ಚೇರ್‌ ನೀಡುವುದಾಗಿ ಹೇಳಿದ್ದರು. ಅದರಂತೆ, ಬಳ್ಳಾರಿ ಜೈಲಿನಲ್ಲಿರುವ ಕೊಲೆ ಆರೋಪಿ ದರ್ಶನ್‌ ಗೆ ಸರ್ಜಿಕಲ್‌ ಚೇರ್‌ ನೀಡಲಾಗಿದೆ.

ಆರೋಪಿ ದರ್ಶನ್‌ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.