Friday, 13th December 2024

500ಕ್ಕೂ ಹೆಚ್ಚು ಮಂದಿ ದತ್ತಪೀಠಕ್ಕೆ

ತುಮಕೂರು:  ನಗರದಿಂದ ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠಕ್ಕೆ ಸುಮಾರು 10 ಬಸ್‌ಗಳಲ್ಲಿ 500ಕ್ಕೂ ಅಧಿಕ ಮಂದಿ ಮಂಗಳವಾರ ತೆರಳಿದರು.
ನಗರದಲ್ಲಿ ದತ್ತ ಮಾಲಾಧಾರಿಗಳು ದತ್ತ ಪೀಠಕ್ಕೆ ತೆರಳುವ ಮುನ್ನ ಕುಂಟುಮ್ಮನ ತೋಟದಲ್ಲಿ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ನಂತರ ಟೌನ್‌ಹಾಲ್ ವೃತ್ತದಲ್ಲಿ ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ತಂಗನಹಳ್ಳಿ ಮಠದ ಶ್ರೀ ಬಸವಾನಂದ ಸ್ವಾಮೀಜಿ, ಬೆಳ್ಳಾವಿ ಕಾರದ ಮಠಾಧ್ಯಕ್ಷರಾದ ಶ್ರೀ ಕಾರದೇಶ್ವರ ಸ್ವಾಮೀಜಿಯವರ ಆಶೀರ್ವಾದ ಪಡೆದ ದತ್ತ ಮಾಲಾಧಾರಿಗಳು ನಾಗರಕಟ್ಟೆಗೆ ಪೂಜೆ ಸಲ್ಲಿಸಿದರು.
ದತ್ತಪೀಠಕ್ಕೆ ಪ್ರಯಾಣ ಬೆಳೆಸಿದ ದತ್ತ ಮಾಲಾಧಾರಿಗಳನ್ನು ಶಾಸಕ ಜ್ಯೋತಿಗಣೇಶ್, ಮುಖಂಡರಾದ ಚಿದಾನಂದ್, ಡಾ. ಪರಮೇಶ್ ಮತ್ತಿತರರು ಆತ್ಮೀಯವಾಗಿ ಬೀಳ್ಕೊಟ್ಟರು.