ವಿದ್ಯಾ ವಾಹಿನಿ ಕಾಲೇಜು: ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 7ನೇ ರ‍್ಯಾಂಕ್
ತುಮಕೂರು: ನಗರದ ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪವಿತ್ರ ಜಿ.ಬಿ., ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ 591 ಅಂಕಗಳನ್ನು ಗಳಿಸಿ ರಾಜ್ಯಕ್ಕೆ 7 ನೇ ರ‍್ಯಾಂಕ್ ಗಳಿಸುವುದರ ಮೂಲಕ ವಿದ್ಯಾವಾಹಿನಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಪವಿತ್ರ ತಂದೆ ಬಸವರಾಜು ಸಿಲಿಂಡರ್ ಡೆಲಿವರಿ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ತಾಯಿ ರೇಖಾ ಗೃಹಿಣಿಯಾಗಿದ್ದಾರೆ.
ನನ್ನ ಈ ಸಾಧನೆಗೆ ನನ್ನ ತಾತ, ತಂದೆ, ತಾಯಿ ಹಾಗೂ ವಿದ್ಯಾವಾಹಿನಿ ಪ.ಪೂ ಕಾಲೇಜಿನ ಉತ್ತಮ ವಾತಾವರಣ ಕಾರಣವಾಗಿದೆ.
ಕಾಲೇಜಿನಲ್ಲಿ ಮಾಡುತ್ತಿದ್ದ ಅಂದಿನ ಪಾಠಗಳನ್ನು ಅಂದೇ ಓದುತ್ತಿದ್ದೆ, ಬಹಳಷ್ಟು ಪರೀಕ್ಷೆಗಳು ನಾನು ಸಾಧಕಳಾಗಲು ಸಾಧ್ಯ ವಾಯಿತು. ಮುಂದೆ ನಾನು ಐಎಎಸ್ ಮಾಡುವಾಸೆಯನ್ನು ಇಟ್ಟುಕೊಂಡಿರುವೆ ಎಂದು ವಿದ್ಯಾರ್ಥಿನಿ ಪವಿತ್ರ ಅಭಿಪ್ರಾಯ ಹಂಚಿಕೊಂಡರು.
ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಮೋನಿಕ ವಿ.ಎಸ್. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಯಲ್ಲಿ ಶೇ.97 ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇವರು ಮುಂದೆ ಡಾಕ್ಟರ್ ಆಗುವ ಆಸೆಯನ್ನು ಹೊಂದಿದ್ದಾರೆ. ತಂದೆ ಜಿ.ವೆಂಕಟೇಶ್ ಫಾರೆಸ್ಟ್ ಡಿಪಾರ್ಟ್ಮೆಂಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ, ತಾಯಿ ಶಾರದ ಗೃಹಿಣಿಯಾಗಿದ್ದಾರೆ.
ಇದೇ ವೇಳೆ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಜಯಣ್ಣ , ಕಾರ್ಯದರ್ಶಿ ಪ್ರದೀಪ್ ಕುಮಾರ್, ಪ್ರಾಚಾರ್ಯರಾದ ವೈಶಾಲಿ ಬಿ.ಎ., ಉಪಪ್ರಾಚಾರ್ಯ ನವೀನ್‌ರಾಜ್, ಉಪನ್ಯಾಸಕರು ಹಾಗೂ ಸಿಬ್ಬಂದಿವರ್ಗದವರು ಹಾಜರಿದ್ದರು.