Thursday, 7th December 2023

ಹಾಡಹಗಲೇ ನಡು ರಸ್ತೆಯಲ್ಲಿ ಯುವತಿ ಹತ್ಯೆ

ದಾವಣಗೆರೆ: ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಯುವತಿಯನ್ನು ಹಾಡಹಗಲೇ ನಡು ರಸ್ತೆಯಲ್ಲಿ ಕೊಲೆ ಮಾಡಿದ ಘಟನೆ ದಾವಣಗೆರೆಯಲ್ಲಿ ಗುರುವಾರ ನಡೆದಿದೆ. ನಗರದ ವಿನೋಭನಗರ ನಿವಾಸಿ ಚಾಂದ್ ಸುಲ್ತಾನ್(೨೪) ಕೊಲೆಯಾದ ಯುವತಿ.

ತಮ್ಮ ಮನೆಯಿಂದ ಸ್ಕೂಟರ್‌ನಲ್ಲಿ ಹೊರಟು ನಗರದ ಪಿಜೆ ಬಡಾವಣೆಯ ಚರ್ಚ್‌ ಎದುರು ಸಾಗುತ್ತಿದ್ದಾಗ ವ್ಯಕ್ತಿಯೊಬ್ಬ ಅಡ್ಡ ಗಟ್ಟಿ ಕೊಲೆ ಮಾಡಿದ್ದಾನೆ. ಸ್ಕೂಟರನ್ನು ತಡೆದಾಗ ಆಕೆ ಉರುಳಿ ಬಿದ್ದಿದ್ದು, ಅಲ್ಲೇ ಹೋದ ಯುವಕ ಚೂರಿಯಿಂದ ಆಕೆಯನ್ನು ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.

ಚಾಂದ್‌ ಸುಲ್ತಾನ್‌ ಅವರಿಗೆ ಎಂಟು ತಿಂಗಳ ಹಿಂದೆ ಹರಿಹರ ಮೂಲದ ಯುವಕನ ಜತೆ ವಿವಾಹ ನಿಶ್ಚಿತಾರ್ಥವಾಗಿತ್ತು. ಇದನ್ನು ವಿರೋಧಿಸಿ ಬೇರೊಬ್ಬ ವ್ಯಕ್ತಿ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ದಾವಣಗೆರೆ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read E-Paper click here

error: Content is protected !!