Friday, 13th December 2024

55 ಲಕ್ಷ ವೆಚ್ಚದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಡಿ‌.ಸಿ ಗೌರಿಶಂಕರ್

ತುಮಕೂರು: ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ ಗೌರಿಶಂಕರ್ ರವರು ಊರುಕೆರೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಊರುಕೆರೆ ಗ್ರಾಮ ಪಂಚಾಯತಿ ಕಳಸೆಗೌಡನ ಪಾಳ್ಯದಲ್ಲಿ ಸುಮಾರು 55 ಲಕ್ಷ ರೂ.ಗಳ ಸಿಸಿ ರಸ್ತೆ ಮತ್ತು ಸಿಸಿ ಚರಂಡಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಇದೇ ಗ್ರಾಮದ ಸುಮಾರು 500 ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಶಾಸಕರು ಹರಿಶಿಣ, ಕುಂಕುಮ ಬಳೆ ಬಾಗಿನ ನೀಡುವ ಮೂಲಕ ಹೆಣ್ಣು ಮಕ್ಕಳನ್ನು ಗೌರವಿಸಿದರು.

ನೂತನವಾಗಿ ನಿರ್ಮಿಸುತ್ತಿರುವ ಗಣೇಶನ ದೇವಸ್ಥಾನಕ್ಕೆ ಶಾಸಕ ಡಿ.ಸಿ ಗೌರಿಶಂಕರ್ ಅವರು ವೈಯಕ್ತಿಕವಾಗಿ 5 ಲಕ್ಷ ರೂಗಳನ್ನು ಕೊಡುವುದಾಗಿ ಭರವಸೆ ನೀಡಿದರು.

ಕಳಸೇಗೌಡನ ಪಾಳ್ಯದ ಜನರು ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚುಗೆ ವ್ಯಕ್ತಪಡಿಸಿ ಗ್ರಾಮದ ಬಿಜೆಪಿ ಕಾರ್ಯಕರ್ತರಾದ ಮಂಜುನಾಥ (ಗೌಡ), ಧರಣೇಶ್, ನಿಜಗುಣ, ಬಸವರಾಜು, ಸಿದ್ದಾನಂಜಯ್ಯ,ಸಿದ್ದರಾಜು, ಮಧು, ಸಿದ್ದೇಶ್, ರಾಕೇಶ್, ಹಾಗು ಕಳಸೆಗೌಡನ ಪಾಳ್ಯ ಮತ್ತು ಅಕ್ಕಾ ಪಕ್ಕದ ನೂರಾರು ಬಿಜೆಪಿ ಕಾರ್ಯ ಕರ್ತರು ತಮ್ಮ ಪಕ್ಷವನ್ನು ತೊರೆದು ತುಮಕೂರು ಜಿಲ್ಲಾ ಯುವ ಜನತಾ ದಳದ ಅಧ್ಯಕ್ಷರೂ ಹಾಗೂ ಊರೂಕೆರೆ ಜಿಲ್ಲಾ ಪಂಚಾಯತಿ ಉಸ್ತುವಾರಿಯಾದ ಹಿರೇಹಳ್ಳಿ ಮಹೇಶ ಹಾಗೂ ಬೆಳಗುಂಬ ಜಿಲ್ಲಾ ಪಂಚಾಯತಿ ಉಸ್ತುವಾರಿಯಾದ ಹರೀಶ್ ಎನ್ ಆರ್ ರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು.

ನಂತರ ನರಸಾಪುರ ಗ್ರಾಮದಲ್ಲಿ ಸುಮಾರು 14 ಲಕ್ಷ ರೂ.ಗಳ ವೆಚ್ಚದಲ್ಲಿ ಶಾಲಾ ಕಟ್ಟಡ ಕಾಮಗಾರಿಗೆ ಶಾಲೆಯ ಪುಟಾಣಿ ಮಕ್ಕಳೊಂದಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಯುವ ಜನತಾ ದಳದ ಅಧ್ಯಕ್ಷರು ಹಾಗೂ ಉರಕೆರೆ ಜಿಲ್ಲಾ ಪಂಚಾಯ್ತಿ ಉಸ್ತುವಾರಿ ಗಳಾದ ಹಿರೇಹಳ್ಳಿ ಮಹೇಶ್ ನವರೂ ಮತ್ತು ಬೆಳಗುಂಬ ಜಿಲ್ಲಾ ಪಂಚಾಯತ್ ಜೆಡಿಎಸ್ ಉಸ್ತುವಾರಿಗಳಾದ ನರಸಾಪುರ ಹರೀಶ್ ಎನ್ ಆರ್ ಹಾಗೂ ಮುಖಂಡರುಗಳಾದ ಸಿದ್ದಪ್ಪ, ನರಸಾಪುರ ಕೃಷ್ಣಮೂರ್ತಿ, ತೋಪೆಗೌಡ ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ಜೆಡಿಎಸ್ ಮುಖಂಡರುಗಳು ಮತ್ತು ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.