Saturday, 14th December 2024

ಧನಂಜಯ್ ಗುರೂಜಿ ಧರಿಸಿದ್ದ ಉಗುರು ಪರೀಕ್ಷೆಗೆ

ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಬಿದನಗೆರೆ ಆಶ್ರಮದ ಧನಂಜಯ್ ಗುರೂಜಿ ಹುಲಿ ಉಗುರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡು ಪರೀಕ್ಷೆಗೆ ಕಳುಹಿಸಿದ್ದಾರೆ.

ಧನಂಜಯ ಗುರೂಜಿ ಕೊರಳಿನಲ್ಲಿ ಹುಲಿ ಉಗುರು ಧರಿಸಿದ್ದಾರೆಂಬ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ಸಾಕಷ್ಟು ದೂರುಗಳು ಬಂದಿದ್ದವು, ಈ ಸಂಬಂಧ ಅಧಿಕಾರಿಗಳು ಆಶ್ರಮಕ್ಕೆ ತೆರಳಿ ಪರಿಶೀಲಿಸಿ ಧನಂಜಯ್ ಗುರೂಜಿ ಧರಿಸಿದ್ದ ಉಗುರನ್ನು ವಶಪಡಿಸಿಕೊಂಡು ಪರೀಕ್ಷೆಗಾಗಿ ಲ್ಯಾಬ್ ಗೆ ಕಳುಹಿಸಿದ್ದಾರೆ. ವರದಿ ಬಂದ ನಂತರ ಧನಂಜಯ್ ಗುರೂಜಿ ಧರಿಸಿದ್ದ ಉಗುರು ಅಸಲಿಯೋ ಅಥವಾ ನಕಲಿಯೋ ಎಂಬುದು ತಿಳಿಯಲಿದೆ. ಈ ಸಂಬಂಧ ಮಾಹಿತಿ ಪಡೆಯಲು ಧನಂಜಯ್ ಗುರೂಜಿ ಸಂಪರ್ಕಕ್ಕೆ ಸಿಗಲಿಲ್ಲ.
*
ಬಿದನಗೆರೆ ಸ್ವಾಮೀಜಿ ಧರಿಸಿದ್ದ ಉಗುರುಗಳನ್ನು ವಶಪಡಿಸಿಕೊಂಡು ಪರೀಕ್ಷೆಗಾಗಿ ಕಳುಹಿಸಲಾಗಿದೆ. ವರದಿ ಬಂದ ನಂತರ ಉಗುರು ಅಸಲಿಯೋ ಅಥವಾ ನಕಲಿ ಎಂಬುದು ತಿಳಿಯಲಿದೆ. ಈ ಸಂಬಂಧ ಕೋರ್ಟ್ ಗೆ ಮಾಹಿತಿ ಸಲ್ಲಿಸಲಾಗುವುದು.
ಅನುಪಮ.ಎಚ್., ಡಿಸಿಎಫ್, ತುಮಕೂರು.