Saturday, 14th December 2024

ಧಾರವಾಡ ಪ್ರತ್ಯೇಕ ಪಾಲಿಕೆಗೆ ಪ್ರತಿಭಟನೆ

ಹುಬ್ಬಳ್ಳಿ: ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕು ಎಂದು ಗುರುವಾರ ಧಾರವಾಡ-ಹುಬ್ಬಳ್ಳಿ ಮಹಾನಗರ ಸಮಗ್ರ ಅಭಿವೃದ್ಧಿ ಸಂಘ, ಉತ್ತರ ಕನರ್ಾಟಕ ಸಮಗ್ರ ಅಭಿವೃದ್ಧಿ ಸಂಘ ಹಾಗೂ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ ಹೋರಾಟ ವೇದಿಕೆ ಕಾರ್ಯಕರ್ತರು ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.

ಸಾಮಾನ್ಯ ಸಭೆಯಲ್ಲಿ ಪಾಲಿಕೆ ಈ ಕುರಿತು ಸ್ಪಷ್ಟ ನಿಲುವು ತಳೆಯಬೇಕು. ಜನಸಂಖ್ಯೆ ಆಧಾರದ ಮೇಲೆ ಪಾಲಿಕೆ ಮಾನ್ಯತೆ ನೀಡಬೇಕು. ಧಾರವಾಡ ಜಿಲ್ಲಾ ಕೇಂದ್ರ ಕೂಡ ಹೌದು. ನಗರವೂ 60 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದೆ.

ಶಾಲಾ-ಕಾಲೇಜು, ವಿವಿ, ವಿವಿಧ ತರಬೇತಿ ಕೇಂದ್ರಗಳು, ಐಐಟಿ, ಐಐಐಇ, ಹೈಕೋರ್ಟ್ ಪೀಠ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಹೊಂದಿದೆ. ಹಲವಾರು ಕೈಗಾರಿಕಾ ಕೇಂದ್ರಗಳು ಇವೆ. ಧಾರವಾಡಕ್ಕೆ ಈ ಎಲ್ಲ ಅಂಶಗಳನ್ನು ಆಧರಿಸಿ ಪ್ರತ್ಯೇಕ ಪಾಲಿಕೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಡಾ.ವೆಂಕನಗೌಡ ಪಾಟೀಲ, ಶಂಕರಪ್ಪ ನೀರಾವರಿ, ಎಂ.ಬಿ.ಕಟ್ಟಿ, ಕಮ್ಮಾರ್, ರವಿಕುಮಾರ್ ಮಾಳಗೇರ್, ಮನೋಜ್ ಪಾಟೀಲ ಮತ್ತಿತರರು ಪ್ರತಿಭಟನೆಯಲ್ಲಿದ್ದರು.