Thursday, 3rd October 2024

ನಕಲಿ ಅಂಕಪಟ್ಟಿ ಮೂಲಕ ಪ್ರಾಂಶುಪಾಲ ಹುದ್ದೆಗೇರಿದ ವಾರ್ಡನ್..!

ಧಾರವಾಡ: ಧಾರವಾಡದ ಮುತ್ತಣ್ಣ ಸ್ಮಾರಕ ಪೊಲೀಸ್ ವಸತಿ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸು ತ್ತಿರುವ ಡಾ.ಯಲ್ಲಪ್ಪಗೌಡ ಪಿ.ಕಲ್ಲನಗೌಡರ್ ಎಂಬವರು ನಕಲಿ ಅಂಕಪಟ್ಟಿ ಮೂಲಕ ಈ ಹುದ್ದೆಗೇರಿದ್ದಾರೆ ಎಂದು ಆರೋಪಿಸಲಾಗಿದೆ.

ಕಲ್ಲನಗೌಡರ್‌ ಅವರು ನಕಲಿ ಬಿಎಡ್ ಅಂಕಪಟ್ಟಿ ಪಡೆದು ವಾರ್ಡನ್ ಹುದ್ದೆಯಿಂದ ಪ್ರಾಂಶುಪಾಲ ಹುದ್ದೆಗೆ ಜಿಗಿದಿದ್ದಾರೆ ಎಂದು ಸಿದ್ದಪ್ಪ ಅಕ್ಕಿ ಎನ್ನುವವರು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ದ್ದಾರೆ.

ಕಲ್ಲನಗೌಡರ್‌ ಅವರು ಪ್ರಾಂಶುಪಾಲ ಹುದ್ದೆ ಗಿಟ್ಟಿಸುವ ದುರುದ್ದೇಶದಿಂದ ಉತ್ತರ ಪ್ರದೇಶದ ಸಂಸ್ಥೆಯಿಂದ ಬಿಎಡ್ ನಕಲಿ ಅಂಕಪಟ್ಟಿ ಪಡೆದಿದ್ದಾರೆ. 2001ರಲ್ಲೇ ಉತ್ತರ ಪ್ರದೇಶದ ಡಿಪಾರ್ಟ್ಮೆಂಟ್ ಆಫ್ ಓಪನ್ ಡಿಸ್ಟಾನ್ಸ್ ಎಜುಕೇಶನ್ ಕೇಂದ್ರದ ಅಂಕಪಟ್ಟಿ ಪಡೆದಿದ್ದಾರೆ.

2007-08ಸಾಲಿನಲ್ಲಿ ಕರ್ತವ್ಯದಲ್ಲಿದ್ದರೂ ಮತ್ತೊಮ್ಮೆ ರೆಗ್ಯುಲರ್ ಬಿಎಡ್ ಪದವಿ ಪಡೆದಿದ್ದಾರಂತೆ.

ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ