Wednesday, 11th December 2024

ರಸ್ತೆ ಗಳ ಉನ್ನತೀಕರಿಸುವುದು ಅಭಿವೃಧಿಯ ಭಾಗವಾಗಿದೆ: ಡಾ.ಜಿ.ಪರಮೇಶ್ವರ

ಕೊರಟಗೆರೆ: ನಗರ ಮತ್ತು ಗ್ರಾಮೀಣ ಪ್ರದೇಶಗಳ ರಸ್ತೆಗಳನ್ನು ಸಂಪರ್ಕಿಸಲು ಸೇತುವೆಗಳನ್ನು ನಿರ್ಮಿಸುವುದು ಮತ್ತು ರಸ್ತೆ ಗಳನ್ನು ಉನ್ನತೀಕರಿಸುವುದು ಅಭಿವೃಧಿಯ ಭಾಗವಾಗಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

ಪಟ್ಟಣದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಆಭಿವೃಧಿ ಇಲಾಖೆಯಿಂದ ೨.೫೦ ಕೋಟಿ ವ್ಯಚದಲ್ಲಿ ನಿರ್ಮಾಣಗೊಂಡ ಕೊರಟಗೆರೆಯಿಂದ ಮಲ್ಲೇಶಪುರ ಹಾಗೂ ಬೈಪಾಸ್ ರಸ್ತೆಗೆ ಸಂಪರ್ಕಿಸುವ ಮೇಲ್ಸೇತುವೆ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಹಲವೆಡೆ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವೆ ರಸ್ತೆಗಳ ಮದ್ಯೆ ಅಡೆ ತಡೆಗಳು ಉಂಟಾಗಿ ಸಂಪರ್ಕಗಳು ಇಲ್ಲದೆ ಜನರು ಸಂಕಷ್ಟದಲ್ಲಿ ಸಿಲುಕಿರುತ್ತಾರೆ, ಅಂತಹ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡಬೇಕಾಗಿದೆ, ಈಗಾಗಲೇ ಕೊರಟಗೆರೆ ಮತ್ತು ಬೊಡ ಗಾನಹಳ್ಳಿ, ಕಾಮರಾಜನಹಳ್ಳಿ ಸಂಪರ್ಕ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಈಗ ಮಲ್ಲೇಶ ಪುರ ಸಂಪರ್ಕ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಉದ್ಘಾಟಿಸ ಲಾಗಿದೆ ಎಂದರು.

ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಅಗತ್ಯ ಮೂಲಭೂತ ಸೌರ‍್ಯ ಒದಗಿಸುವ ಕೆಲಸವನ್ನು ಪ್ರತಿ ಗ್ರಾಮ ಪಂಚಾಯತಿಗಳಿಗೆ ಬೇಟಿ ನೀಡಿ ಸಭೆ ನಡಸಿ ಪರಿಶೀಲಿಸಿ ಕೆಲಸಗಳನ್ನು ಮಾಡಲಾಗುತ್ತಿದೆ, ಕೊರಟಗೆರೆ ಪಟ್ಟಣದ ಅಭಿವೃದಿಗಾಗಿ ನಗರಾಭಿವೃದ್ದಿ ಇಲಾಖೆಯ ವಿಶೇಷ ಅನುದಾನದಲ್ಲಿ ೬ ಕೋಟಿ ಮತ್ತು ನಗರೋತ್ತಾನ ಯೋಜನೆಯಲ್ಲಿ ೫ ಕೋಟಿ ಅನುದಾನ ವನ್ನು ಮಂಜೂರು ಮಾಡಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ನಾಹಿದಾ ಜಮ್ ಜಮ್, ಕಿರು ನೀರಾವರಿಯ ಸಹಾಯಕ ಇಂಜಿನಿಯರ್ ರಮೇಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ಎ.ಡಿ.ಬಲರಾಮಯ್ಯ, ಕೆ.ಆರ್.ಓಬಳರಾಜು, ನಾಗರಾಜು, ನಂದೀಶ್, ಯುವ ಕಾಂಗ್ರೆಸ್ ಅದ್ಯಕ್ಷ ವಿನಯ್‌ಕುಮಾರ್, ಗ್ರಾ.ಪಂ. ಸದಸ್ಯ ಕೆ.ಎಲ್.ಮಂಜುನಾಥ್ ಮುಖಂಡರುಗಳಾದ ಗಣೇಶ್, ಮುತ್ತವಲ್ಲಿ ಹಿದಾಯತ್ ಉಲ್ಲಾ ಷರೀಫ್, ಲಕ್ಷ್ಮಮ್ಮ , ತುಂಗಾಮ೦ಜುನಾಥ್, ರಾಘವೇಂದ್ರ, ಸಮೀಉಲ್ಲಾ ಷರೀಫ್, ಕುಮಾರ್, ಅರವಿಂದ್, ರವಿಕುಮಾರ್ ಸೇರಿದಂತೆ ಇತರರು ಹಾಜರಿದ್ದರು.