Saturday, 14th December 2024

68 ಲಕ್ಷಕ್ಕೂ ಅಧಿಕ ನಿವ್ವಳ ಲಾಭ: ಡಾ.ವೀರಣ್ಣ

ಶ್ರೀಗುರು ರಾಘವೇಂದ್ರ ಸಹಕಾರಿಯ 7ನೇ ವಾರ್ಷಿಕಸಭೆ

ಮಾನವಿ : ಶ್ರೀ ಗುರು ರಾಘವೇಂದ್ರ ಪತ್ತಿನ ಸೌಹಾರ್ದ ಸಹಕಾರಿಯ 7 ನೇ ವಾರ್ಷಿಕೋತ್ಸವ ಅಂಗವಾಗಿ ಅಧ್ಯಕ್ಷ ಡಾ ವೀರಣ್ಣ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಅವರು ನಮ್ಮ ಸಹಕಾರಿಯೂ ಕಳೆದ ಏಳು ವರ್ಷದಲ್ಲಿ ಹಂತಹಂತವಾಗಿ ಬೆಳವಣಿಗೆಯಲ್ಲಿ ಸಾಗಿದೆ. ಇದಕ್ಕೆಲ್ಲ ನಮ್ಮ ಸರ್ವ ಸದಸ್ಯ ಮತ್ತು ಸಹಕಾರಿ ಸಿಬ್ಬಂದಿಗಳು, ನಿತ್ಯ ನಿರಂತರ ಸೇವೆಯನ್ನು ಮಾಡಿರುವುದರಿಂದ 68,27,576 ಲಕ್ಷದಷ್ಟು ನಿವ್ವಳ ಲಾಭವನ್ನು ಗಳಿಸಿದೆ ಇದಕ್ಕೆಲ್ಲ ಸಹಕಾರಿಗಳ ಸಹಕಾರವನ್ನು ಕೂಡ ಮರೆಯುವುವಂತಿಲ್ಲ ಎಂದರು.

ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆದ 7 ನೇ ವರ್ಷದ ವಾರ್ಷಿಕ ಮಹಾಸಭೆ ಉದ್ಘಾಟನೆ ಮಾಡಿದ ರಾಜ್ಯ ಸಹಕಾರಿ ನಿರ್ದೇಶಕ ತಿಮ್ಮಯ್ಯ ಶೆಟ್ಟಿ ಮಾತಾನಾಡಿ ಸಂಸ್ಥೆಯು ಏಳೇ ವರ್ಷದಲ್ಲಿ ಅತ್ಯುತ್ತಮ ಸೇವೆಯ ಮೂಲಕ ಉತ್ತಮವಾಗಿ ಬೆಳವಣಿಗೆ ಕಂಡಿದೆ. ಇದಕ್ಕೆಲ್ಲ ಸಹಕಾರಿಗಳ ಸಹಕಾರ ಪ್ರಮುಖವಾಗಿದೆ ಸಾಲವನ್ನು ಪಡೆದವರು ಅದಷ್ಟು ಬಹು ಬೇಗನೇ ಮರುಪಾವತಿ ಮಾಡಿದಲ್ಲಿ ಇನ್ನೂ ಉತ್ತಮವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಶ್ರೀ ಗುರು ರಾಘವೇಂದ್ರ ಸಹಕಾರಿಯ ಅಧ್ಯಕ್ಷ ಮತ್ತು ಸರ್ವ ಸದಸ್ಯ ಸಿಬ್ಬಂದಿಗಳಿಗೆ ಅಭಿನಂದನೆಗಳು ತಿಳಿಸಿದರು.

ನಂತರ ಸಿ ಪಿ ಐ ಮಹಾದೇವಪ್ಪ ಪಂಚಮುಖಿ, ರಾಜಶೇಖರ ಸಿಂಧನೂರು, ಕರುಣ್ಯಾ ವೃದ್ದಶ್ರಾಮದ ಡಾ ಚನ್ನಬಸಯ್ಯಸ್ವಾಮಿ ಮಾತನಾಡಿ, ಕುಟುಂಬದ ನಿರ್ವಹಣೆಯಲ್ಲಿ ಎಲ್ಲ ಸದಸ್ಯರ ಪಾತ್ರ ಹೇಗೆ ಪ್ರಮುಖವೋ ಅದರಂತೆ ಸಹಕಾರಿಯ ಬೆಳವಣಿಗೆಗೆ ಕೂಡ ಎಲ್ಲ ಸಹಕಾರಿಗಳ ಸಹಕಾರ ಮುಖ್ಯ ಎಂದರು.

ನಂತರ ಷ.ಬ್ರ.ಡಾ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ನಿಲೋಗಲ್ ಇವರು ಮಾತಾನಾಡಿ ಸರ್ಕಾರಿ ಬ್ಯಾಂಕಿನಲ್ಲಿ ಬಡವರಿಗೆ ಬೇಗ ಸಾಲವನ್ನು ನೀಡುವುದಿಲ್ಲ ಪ್ರಮುಖವಾಗಿ ರೈತರಿಗೆ ನೀಡಲು ಹಿಂದೆಟ್ಟು ಹಾಕುತ್ತವೆ ಆದರೆ ಪತ್ತಿನ ಸಹಕಾರ ಸಂಘದ ಬ್ಯಾಂಕಗಳು ಬೇಗನೇ ಹಣವನ್ನು ಸಾಲವನ್ನಾಗಿ ನೀಡಿ ಸಹಕಾರಿ ಮಾಡುತ್ತವೆ ಎಂದರು. ನಂತರ ಹತ್ತನೇ ತರಗತಿ ಮತ್ತು ಪಿ ಯು ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಚಂದ್ರಕಾಂತ ಇಲ್ಲೂರು, ಎಸ್‌. ಎಚ್‌. ರಾಮಾಂಜನಯ್ಯ ಶೆಟ್ಟಿ ಉಪಾಧ್ಯಕ್ಷರು. ಜಿ. ಸಂತೋಷ ಬ್ಯಾಗವಾಟ, ಬೆನಕಯ್ಯ ಶೆಟ್ಟಿ, ಸುದರ್ಶನ ಶೆಟ್ಟಿ, ಬಸವಂತ ಕುಮಾರ, ಶಂಭುಲಿಂಗಯ್ಯ ಹಿರೇಮಠ,ಡಿ. ಶ್ರೀನಿವಾಸ, ಮಲ್ಲಿಕಾರ್ಜುನ ಗೌಡ, ಪಿ. ರಾಮ ರಾಜು, ಕಾನೂನು ಸಲಹೆಗಾರ ಶಿವಶರಣಪ್ಪ ವಕೀಲರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ಇಲ್ಲೂರು, ಸತೀಶ ಇಲ್ಲೂರು,ದೇವರಾಜ ಸಂಗಪೂರು,ರಮೇಶ ಮೇಟಿ, ಸದಾನಂದ ಮೇಟಿ, ಶಿವಕೀಶನರಾಯ, ಸೇರಿದಂತೆ ಅನೇಕರು ಉಪಸ್ಥಿ ತರಿದ್ದರು.