Wednesday, 11th December 2024

Dr Veerendra Heggade: ಡಾ.ವಿರೇಂದ್ರ ಹೆಗ್ಗಡೆ ಯವರನ್ನು ವಿಶ್ವಸಂಸ್ಥೆಯಲ್ಲಿ ನೋಡುವಾಸೆ : ಮುರುಳೀಧರ ಹಾಲಪ್ಪ

ಚಿಕ್ಕನಾಯಕನಹಳ್ಳಿ : ರಾಜ್ಯಸಭಾ ಸದಸ್ಯ ಶ್ರೀ ವಿರೇಂದ್ರ ಹೆಗ್ಗೆಡೆ ಅವರನ್ನು ವಿಶ್ವಸಂಸ್ಥೆಯಲ್ಲಿ ನೋಡಲು ಬಯಸುವೆ ಅವರು ವಿಶ್ವಸಂಸ್ಥೆಯಲ್ಲಿ ಸೇವೆ ಮಾಡಬೇಕೆಂಬುದು ನನ್ನಾಸೆ ಎಂದು ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದ ಅಡಿಯಲ್ಲಿ ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಪುನಶ್ಚೇತನಗೊಂಡ ೭೦೬ ನೇ ಕೆರೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು ಹೆಗ್ಗೆಡೆ ಅವರು ವಿಶ್ವಸಂಸ್ಥೆಯಲ್ಲಿ ಹುದ್ದೆಯನ್ನು ಅಲಂಕರಿಸಿದರೆ ಅದು ನಮಗೆಲ್ಲಾ ಸಂತಸದ ವಿಷಯ ಎಂದು ಹೇಳಿದರು.
ಪದ್ಮಭೂಷಣ ವಿರೇಂದ್ರಹೆಗ್ಗಡೆ ನೇತೃತ್ವದ ಟ್ರಸ್ಟ್ಗಳು ಐದು ದಶಕಗಳಿಂದಲೂ ಬಡವರು, ಸಣ್ಣ ಮತ್ತು ಅತಿ ಸಣ್ಣ ರೈತರು, ಮಹಿಳೆಯರು ಮತ್ತು ದೀನದಲಿತ ಜನರ ಉನ್ನತಿಗಾಗಿ ಹಲವಾರು ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಸರಕಾರ ವ್ಯಾಪ್ತಿಗೆ ಬರುವ ವಿದ್ಯಾರ್ಥಿ ವೇತನ, ನಿರ್ಗತಿಕರಿಗೆ ಪಿಂಚಣಿ ಮತ್ತು ಇತರೆ ಮೂಲಭೂತ ಸೌಕರ್ಯ ಒದಗಿಸಿದ್ದಾರೆ. ಯಾವುದೇ ನಿರೀಕ್ಷೆಯಿಲ್ಲದೆ ಬಡವರಿಗೆ ಎಲ್ಲಾ ರೀತಿಯ ಸೇವೆ ಒದಗಿಸುವುದರಿಂದ ಧರ್ಮಾಧಿಕಾರಿಗಳು ನಿಜವಾದ ಕರ್ಮಯೋಗಿದ್ದಾರೆ. ಒಂದು ಕಪ್ಪು ಚುಕ್ಕೆ ಇಲ್ಲದೆ ಜೀವನದಲ್ಲಿ ಹೆಗ್ಗೆಡೆಯವರು ಮುಂದುವರೆಯುತ್ತಿದ್ದಾರೆ. ಹಾಗಾಗಿ ಸರಕಾರಗಳು ಹಾಗು ನಾನು ಅವರ ಪರ ನಿಲ್ಲುತ್ತೇವೆ ಎಂದು ಘೋಷಿಸಿದರು.
ಗ್ರಾಮಾಭಿವೃದ್ದಿ ಯೋಜನೆ ಪ್ರಾದೇಶಿಕ ನಿರ್ದೇಶಕ ಶೀನಪ್ಪ ಮಾತನಾಡಿದರು. ಜಿಲ್ಲಾ ನಿರ್ದೇಶಕ ದಿನೇಶ್, ಯೋಜ ನಾಧಿಕಾರಿ ಪ್ರೇಮಾನಂದ್, ಕೆರೆ ಸಮಿತಿ ಅಧ್ಯಕ್ಷ ಮರುಳಸಿದ್ದೇಶ್, ನಿವೃತ್ತ ಮುಖ್ಯ ಶಿಕ್ಷಕ ಕರಿಯಪ್ಪ, ರೈತ ರಂಗಸ್ವಾಮಿ, ಸಂಘದ ಸದಸ್ಯರು ಹಾಗು ಗ್ರಾಮಸ್ಥರು ಭಾಗವಹಿಸಿದ್ದರು. ಕೃಷಿ ಮೇಲ್ವಿಚಾರಕ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು, ವಲಯ ಮೇಲ್ವಿಚಾರಕ ಭಾಸ್ಕರ್ ವಂದಿಸಿದರು.
ಸಂಘದ ಕಾರ್ಯ ಸಮಾಜಕ್ಕೆ ಆದರ್ಶ
ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಸಂಘಗಳು ಅತ್ಯಂತ ವ್ಯವಸ್ಥಿತವಾಗಿ ಕಾರ್ಯಚಟುವಟಿಕೆಗಳನ್ನು ನಡೆಸುತ್ತಾ ಬಂದಿವೆ. ಕೆರೆಯ ಪುನರುಜ್ಜೀವನಕ್ಕೆ ಗ್ರಾಮ ಪಂಚಾ ಯಿತಿಯನ್ನು ಸಂಘ ಸಂಪರ್ಕಿಸಿದಾಗ ತಕ್ಷಣ ಸಹಿ ಮಾಡಿ ಒಪ್ಪಿಗೆ ನೀಡಲಾಯಿತು. ಸಂಘಗಳ ಕಾರ್ಯಚಟುವಟಿಕೆಗೆ ನಾವು ಎಲ್ಲಾ ರೀತಿಯ ನೆರವು ನೀಡುತ್ತೇವೆ ಎಂದು ಮುದ್ದೇನಹಳ್ಳಿ ಗ್ರಾ.ಪಂ.ಅಧ್ಯಕ್ಷ ಗಂಗಾಧರಯ್ಯ ತಿಳಿಸಿದರು.