Wednesday, 11th December 2024

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ನೇತ್ರ ತಜ್ಞ ಡಾ.ಚಂದ್ರಪ್ಪ ರೇಷ್ಮಿ ನಿಧನ

ಲಬುರ್ಗಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ನೇತ್ರ ತಜ್ಞ ಡಾ ಚಂದ್ರಪ್ಪ ರೇಷ್ಮಿ(90) ಅವರು ಭಾನುವಾರ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.

ಕಲಬುರ್ಗಿಯ ಜಯನಗರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಿದ್ದಾರೆ. ಡಾ.ಚಂದ್ರಪ್ಪ ಅವರು ಮಾಜಿ ರಾಷ್ಟ್ರಪತಿ ಗ್ಯಾನಿ ಚೈಲ್ ಸಿಂಗ್, ಟಾಟಾ ಸಮೂಹ ಸಂಸ್ಥೆಯ ಸಂಸ್ಥಾಪಕ ಜೆ ಆರ್ ಡಿ ಟಾಟಾ ಸೇರಿದಂತೆ ಅನೇಕ ಗಣ್ಯರಿಗೆ ನೇತ್ರ ಚಿಕಿತ್ಸೆ ನೀಡಿದ್ದರು.

ವಿಶ್ವದ ಮೂರನೇ ಉತ್ತಮ ಕಣ್ಣಿನ ವೈದ್ಯರೆಂದೇ ಪ್ರಖ್ಯಾತರಾಗಿದ್ದ ಡಾ.ಚಂದ್ರಪ್ಪ ನಿಧನರಾಗುವ ಮೂಲಕ ಇನ್ನಿಲ್ಲವಾಗಿದ್ದಾರೆ. ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಕಲಬುರ್ಗಿ ಜಿಲ್ಲೆಯ ಚಿತ್ತಾಪುರದಲ್ಲಿ ಕುಟುಂಬಸ್ಥರು ನಾಳೆ ನೆರವೇರಿಸಲಿದ್ದಾರೆ.