Wednesday, 11th December 2024

ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ: ಪರಮೇಶ್ವರ್

ತುಮಕೂರು: ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಕೆಲವರು ನಮ್ಮ ನಮ್ಮಲ್ಲಿ ಅಸಮಾಧಾನ ತರಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಸುದ್ದಿ ಹರಿದಾಡಿತ್ತು. ಅದೆಲ್ಲಾ ಸುಳ್ಳು ಸುದ್ದಿ ಕೆಲ ವಿಚಾರ ಗಳ ಬಗ್ಗೆ ಸುರ್ಜೆವಾಲಾ ಅವರ ಜೊತೆ ಚರ್ಚೆ ಮಾಡಿದ್ದೇನೆ. ಸುಮಾರು ೩ ಗಂಟೆ ಚರ್ಚೆ ಮಾಡಿದ್ದೇನೆ. ನಾವು ಯಾವ ರೀತಿ ಚುನಾವಣೆಗೆ ಹೋಗಬೇಕು, ಚುನಾವಣೆಗೆ ನಮ್ಮ ಗಣ ನೀತಿ ಏನಿರಬೇಕು, ಚುನಾವಣಾ ಪ್ರಣಾಳಿಕೆಗಳು ಹೇಗೆ ಇರಬೇಕು, ಜನ ಅದನ್ನು ಒಪ್ಪುತ್ತಾ ರೆಯೇ ಎಂಬ ಬಗ್ಗೆ ಚರ್ಚೆ ನಡೆಸಿದ್ದೇವೆ. ಆದರೆ ಅದನ್ನ ಬೇರೆ ಬೇರೆ ರೀತಿ ಬಿಂಬಿಸಿದ್ದಾರೆ ಎಂದರು.
ಕಾಂಗ್ರೆಸ್ ಹೊರಡಿಸಿದ ಪ್ರಣಾಳಿಕೆಗಳು ನನ್ನ ಗಮನಕ್ಕೆ ಬಂದಿದೆ. ನಾವೆಲ್ಲರೂ ಒಟ್ಟಿಗೆ ಸೇರಿ ಮಾಡಿದ್ದೇವೆ. ಕೆಲವರು ನಮ್ಮಲ್ಲಿ ಅಸಮಾಧಾನ ತರಲು ಈ ರೀತಿ ಮಾಡುತ್ತಿದ್ದಾರೆ. ಗೃಹಲಕ್ಷ್ಮೀ ಭಾಗ್ಯಕ್ಕೆ ಕೆಲವರು ಎಲ್ಲಿಂದ ಹಣ ತರುತ್ತೀರಾ ಎಂದು ಪ್ರಶ್ನಿಸು ತ್ತಿದ್ದಾರೆ. ಅದಕ್ಕೆಲ್ಲಾ ನಾವು ಉತ್ತರ ಕೊಟ್ಟಿದ್ದೇವೆ. ನಾವು ಜನರಿಗೆ ಪ್ರಣಾಳಿಕೆ ಕೊಟ್ಟ ಮೇಲೆ ಅದನ್ನ ಜಾರಿಗೆ ತರಬೇಕು. ಇದರ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ೧ ನೇ ತರಗತಿಯಿಂದ ೫ ನೇ ತರಗತಿಯವರೆಗೆ ಯಾರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸು ತ್ತಾರೋ ಅಂತಹ ಎಸ್‌ಸಿ, ಎಸ್‌ಟಿ ಸಮುದಾಯದ ಕುಟುಂಬಕ್ಕೆ ಹಣ ಬಿಡುಗಡೆ ಮಾಡುತ್ತೇವೆ ಅಂತ ಹೇಳಿಕೆ ಬಿಡುಗಡೆ ಮಾಡಿ ದ್ದೇವೆ. ಅದಕ್ಕೆ ವರ್ಷಕ್ಕೆ ೩೬೦೦ ಕೋಟಿ ಹಣ ಬೇಕಾಗುತ್ತದೆ. ಇದರ ಬಗ್ಗೆ ತೀರ್ಮಾನ ಮಾಡಿದ್ದೇವೆ ಎಂದರು.
ಗುಬ್ಬಿ ಎಚ್‌ಎಎಲ್ ಉತ್ಪಾದನಾ ಘಟಕ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ವಿಚಾರವಾಗಿ ಮಾತನಾಡಿ,  ಮೋದಿ ನಮ್ಮ ಪ್ರಧಾನಮಂತ್ರಿಗಳು. ಅವರೇ ಫೌಂಡೇಷನ್ ಹಾಕಿದ್ದರು. ಎರಡು ವರ್ಷಗಳಲ್ಲಿ ಇಲ್ಲಿಂದ ಹೆಲಿಕಾಪ್ಟರ್ ಹಾರಾಡುತ್ತದೆ ಅಂತ ಹೇಳಿದ್ದರು. ಕಾರಣಾಂತರಗಳಿಂದ ೭ ವರ್ಷಗಳ ಬಳಿಕ ಉದ್ಘಾಟನೆ ಆಗುತ್ತಿದೆ.
ಎಚ್‌ಎಎಲ್ ಉತ್ಪಾದನಾ ಘಟಕದಲ್ಲಿ ಒಟ್ಟು ೬೫೦೦ ಜನರಿಗೆ ಉದ್ಯೋಗ ಕೊಡುತ್ತೇವೆ ಅಂತ ಹೇಳಿದ್ದರು.  ಜಿಲ್ಲೆಯ ಜನರಿಗೆ ಹೆಚ್ಚಿನ ಉದ್ಯೋಗ ಕೊಡಬೇಕು. ನಮ್ಮಲ್ಲಿ ಐಟಿಐ, ಇಂಜಿನಿಯರ್ ಸೇರಿ ಅನೇಕ ವಿದ್ಯಾಭ್ಯಾಸ ಮಾಡಿದವರು ಇದ್ದಾರೆ. ಅವರನ್ನು ಆಯ್ಕೆ ಮಾಡಿ ತರಬೇತಿ ಕೊಟ್ಟು ಕೆಲಸ ಕೊಡಿ ಎಂದರು.