Saturday, 14th December 2024

ರೋಗಿಗಳ ಕೃತಜ್ಞತೆ ವೈದ್ಯರಿಗೆ ಶ್ರೀರಕ್ಷೆ: ಡಾ.ಪರಮೇಶ್

ತುಮಕೂರು: ರೋಗಿಗಳು ಚಿಕಿತ್ಸೆ ಪಡೆದ ನಂತರ ವೈದ್ಯರಿಗೆ ನೀಡುವ ಕೃತಜ್ಞತೆಯೇ ವೈದ್ಯರಿಗೆ ಶ್ರೀರಕ್ಷೆ ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿ ದರು‌.

ನಗರದ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ ಇತ್ತೀಚೆಗ ವೈದ್ಯರ ಮೇಲೆ ಹಲ್ಲೆ ಹಾಗೂ ದೌರ್ಜನ್ಯಗಳು ಅವರು ತಮ್ಮ ವೃತ್ತಿಯ ಬಗ್ಗೆ ಬೇಸರ ವ್ಯಕ್ತಪಡಿಸುವಂತಾಗಿದೆ. ವೈದ್ಯರು ಒಮ್ಮೆ ತಮ್ಮ ಕರ್ತವ್ಯ ದಿಂದ ವಿಮುಖರಾದರೆ ಸಮಾಜದ ಆರೋಗ್ಯ ಹದಗೆಡಲಿದೆ ಎಂದರು.

ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಡಾ.ಶಾಲಿನಿ ಮಾತನಾಡಿ ಮಾತ್ರೆಗಳು ರೋಗಿಯ ಖಾಯಿಲೆ ಗುಣಪಡಿಸಿದರೆ ವೈದ್ಯ ಮಾತ್ರ ರೋಗಿಯ ದೇಹ ಹಾಗೂ ಮನ ಸ್ಸನ್ನು ಕೂಡ ಗುಣಪಡಿಸುತ್ತಾನೆ. ವೈದ್ಯ ವೃತ್ತಿಯನ್ನು ವೈದ್ಯಕೀಯ ವಿದ್ಯಾರ್ಥಿಗಳು ಜೀವ ಉಳಿಸುವ ಪವಿತ್ರವಾದ ಕರ್ತವ್ಯವಾಗಿ ಭಾವಿಸಬೇಕು ಎಂದರು.

ಹೃದ್ರೋಗ ತಜ್ಞ ಹಾಗೂ ಸೂಪರ್ ಸ್ಪೆಷಾಲಿಟಿ ವಿಭಾಗದ ಮುಖ್ಯಸ್ಥರಾದ ಡಾ.ಭಾನುಪ್ರಕಾಶ್ ಹೆಚ್.ಎಂ. ಮಾತನಾಡಿ ಉದ್ಯೋ ಗದ ಜೊತೆಗೆ ಬದುಕಿನ ಸಾರ್ಥಕತೆಯನ್ನು ಒದಗಿಸುವುದು ವೈದ್ಯವೃತ್ತಿಯಾಗಿದೆ. ರೋಗಿಯ ಚೇತರಿಕೆ ನೀಡುವಷ್ಟು ಆತ್ಮತೃಪ್ತಿ ವೈದ್ಯನಿಗೆ ಮತ್ತಾವುದು ನೀಡುವುದಿಲ್ಲ ಎಂದರು.

ಇದೇ ವೇಳೆ ರೋಗಿಗಳ ಆರೋಗ್ಯಕ್ಕಾಗಿ ಶ್ರಮಿಸಿದ ವೈದ್ಯರುಗಳಿಗೆ ಆಸ್ಪತ್ರೆ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಮೆಡಿಕಲ್ ಹಾಗೂ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ನಿರಂಜನಮೂರ್ತಿ, ಸಿಇಓ ಡಾ‌.ಸಂಜೀವ್ ಕುಮಾರ್, ನರ್ಸಿಂಗ್ ವಿಭಾಗದ ಮುಖ್ಯಸ್ಥ ನಾಗಣ್ಣ, ಸೇರಿದಂತೆ ಆಸ್ಪತ್ರೆಯ ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.