Wednesday, 11th December 2024

ಪರದೇಶದ ಶಿಕ್ಷಣ ಪದ್ದತಿಯಿಂದ ನಾವು ಹೊರಬರಲೇಬೇಕು: ಡಿ.ವಿ.ಸದಾನಂದ ಗೌಡ

ತುಮಕೂರು: ದೇಶದ ಸಂಸ್ಕೃತಿ, ಸಂಸ್ಕಾರ ಉಳಿಯಬೇಕು, ಪರದೇಶದ ಶಿಕ್ಷಣ ಪದ್ದತಿಯಿಂದ ನಾವು ಹೊರಬರಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.
ಪಠ್ಯ ಪುಸ್ತಕದಲ್ಲಿ ಕುವೆಂಪುಗೆ ಅವಮಾನ ಆರೋಪ ವಿಚಾರ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕುವೆಂಪು ಕುರಿತಂತೆ ಪಠ್ಯದಲ್ಲಿ ಹೆಚ್ಚಿನ ವಿಚಾರ ಸೇರಿಸಿದ್ದು ಬಿಜೆಪಿ, ಕುವೆಂಪು ಅವರ ಎರಡು ಕವನವನ್ನ ನಾಡಗೀತೆ ಮಾಡಿದ್ದು ಬಿಜೆಪಿ. ಹಾಗಾಗಿ ನಾವು ಅಪಮಾನ ಮಾಡಲು ಸಾಧ್ಯನಾ ಎಂದು ಪ್ರಶ್ನಿಸಿದರು.
ಪಠ್ಯಪುಸ್ತಕ ವಾಪಸ್ ಪಡೆದುಕೊಳ್ಳುವಂತೆ ದೇವೇಗೌಡರ ಪತ್ರ ವಿಚಾರ ಸಂಬಂಧ ಮಾತನಾಡಿ,  ಈ ಕುರಿತು ಮಾತನಾಡೋದಕ್ಕೆ ಸಿಎಂ ಹಾಗೂ ಶಿಕ್ಷಣ ಸಚಿವರು ತಯಾ ರಿದ್ದಾರೆ.  ಆದರೆ ದೇವೇಗೌಡರೇ ಮಾತನಾಡೋಕೆ ಬಾರದೇ ಮಾರ್ಗದಲ್ಲಿ ಕುಳಿತು ಕೊಳ್ತೇನೆ ಅಂದರೇ ಹೇಗೆ ಎಲ್ಲವೂ ರಾಜಕೀಯ ಪ್ರೇರಿತವಾಗಿರಬಾರದು.
ಈಗಾಗಲೇ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ನಾವು ಯಾವುದರಲ್ಲೂ ರಾಜಕಾರಣ ತುರುಕಿ, ಬೆಳಯುವಂತಾ ಮಕ್ಕಳ ಮನಸ್ಸನ್ನ ಹಾಳು ಮಾಡಲ್ಲಾ ಎಂದರು. ಮೆಕಾಲೆ ಆಧಾರಿತ ಶಿಕ್ಷಣ ಪದ್ದತಿಯನ್ನು ಭಾರತೀಯ ಶಿಕ್ಷಣ ಪದ್ದತಿಯಾಗಿ ಬದಲಾ ಯಿಸಬೇಕು. ಹಾಗಂತ ನಾನು ಗುರುಕುಲ ಶಿಕ್ಷಣ ಪದ್ದತಿ ಬೇಕು ಅಂತಾ ಹೇಳುತ್ತಿಲ್ಲ. ಭಾರತೀಯ ಸಂಸ್ಕೃತಿಯ ಮೂಲ ಬೇರಿ ನೊಂದಿಗೆ ನಮ್ಮ ಶಿಕ್ಷಣ ಪದ್ದತಿ ಸಾಗಬೇಕು ಎಂದರು.
ಅಗ್ನಿಪಥ್ ವಿರುದ್ಧ ಕಾಂಗ್ರೆಸ್ ಹೋರಾಟ ವಿಚಾರ ಸಂಬಂಧ ಮಾತನಾಡಿ, ಕಾಂಗ್ರೆಸ್ ಗೆ ಹೋರಾಟ ಮಾಡಲು ಬೇರೆ ವಿಚಾರ ವಿಲ್ಲ. ಹಾಗಾಗಿ ಹೋರಾಟ ಮಾಡುತ್ತಿದ್ದಾರೆ. ಅಗ್ನಿಪಥ್ ನಲ್ಲಿ ಭಾಗಿಯಾದ ಯುವಕರಿಗೆ ಮಹೇಂದ್ರ, ಅಧಾನಿ ಸೇರಿ ಖಾಸಗಿ ಕಂಪನಿಗಳು ಉದ್ಯೋಗ ಮೀಸಲಿಡುತ್ತವೆ ಎಂದಿದ್ದಾರೆ.
ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡ ತಕ್ಷಣ ಮಿಲಿಟರಿ ವ್ಯವಸ್ಥೆ ಬದಲಾಗಲ್ಲ. ಮೂಲ ವ್ಯವಸ್ಥೆ ಹಾಗೆಯೇ ಇರುತ್ತೆ  ಎಂದರು. ಇಡಿ ಅವರು ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ, ಕಾಂಗ್ರೆಸ್ ನವರಿಗೆ ಸಂವಿಧಾನಿಕ ಸಂಸ್ಥೆ ಮೇಲೆ ನಂಬಿಕೆ‌ ಇಲ್ಲ. ಹಾಗಾಗಿ ಅವರು ಇಡಿ ಮೇಲೆ ಆರೋಪ ಮಾಡುತ್ತಿದ್ದಾರೆ . ಮೋದಿ ಗುಜರಾತ್ ಸಿಎಂ ಆಗಿದ್ದಾಗ ಎಸ್ಐಟಿ ಮುಂದೆ ಹಾಜ ರಾಗಿದ್ದರು. ಸುಪ್ರೀಂ ಕೋರ್ಟ್ ನಿಂದ ಇಂದು ಆರೋಪಮುಕ್ತರಾಗಿದ್ದಾರೆ ಎಂದರು.