ಬೆಂಗಳೂರು: ಯುಎಸ್ ಉನ್ನತ ಶಿಕ್ಷಣ ಮೇಳವು ಫೆ.12 ರಿಂದ 20 ರವರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳಲ್ಲಿ ನಡೆಯಲಿದೆ.
ಯುಎಸ್ ಡಿಪಾರ್ಟ್ಮೆಂಟ್ ಆಫ್ ಕಾಮರ್ಸ್, ಇಂಟರ್ನ್ಯಾಷನಲ್ ಟ್ರೇಡ್ ಅಡ್ಮಿನಿಸ್ಟ್ರೇಷನ್, ಭಾರತದ ಯುಎಸ್ ವಾಣಿಜ್ಯ ಸೇವೆ ಮತ್ತು ಯುಎಸ್ ಕಾನ್ಸು ಲೇಟ್ ಜನರಲ್, ಚೆನ್ನೈ, ಬೆಂಗಳೂರು, ಮಣಿಪಾಲ್, ಮಂಗಳೂರು, ಕೊಚ್ಚಿ ಮತ್ತು ಕೊಯಮತ್ತೂರಿನಲ್ಲಿ ಯುಎಸ್ ಉನ್ನತ ಶಿಕ್ಷಣ ಮೇಳಗಳ ಸರಣಿ ಯನ್ನು ಆಯೋಜಿಸುತ್ತಿವೆ.
ಮೇಳವು ಬೆಂಗಳೂರಿನಲ್ಲಿ ಸಂಜೆ 4 ರಿಂದ 7 ರವರೆಗೆ ವಿಟ್ಟಲ್ ಮಲ್ಯ ರಸ್ತೆಯ ಜೆಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್, 24/1 ನಲ್ಲಿ ನಡೆಯಲಿದೆ. ಮೇಳವು ಉಚಿತವಾಗಿದ್ದು, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸ್ನಾತಕೋತ್ತರ ಅಥವಾ ಡಾಕ್ಟರೇಟ್ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಮುಕ್ತ ವಾಗಿದೆ.
ಸಂದರ್ಶಕರು 18 US ಉನ್ನತ ಶಿಕ್ಷಣ ಪ್ರತಿನಿಧಿಗಳು, EducationUSA ಸಲಹೆಗಾರರು ಮತ್ತು US ಕಾನ್ಸುಲೇಟ್ ಜನರಲ್ ಚೆನ್ನೈನಿಂದ ವೀಸಾ ಅಧಿಕಾರಿ ಗಳು/ರಾಯಭಾರಿಗಳನ್ನು ಭೇಟಿ ಮಾಡಲು ಅವಕಾಶವನ್ನು ಹೊಂದಿರುತ್ತಾರೆ. ಕಾನ್ಸುಲೇಟ್ ಜನರಲ್ ಚೆನ್ನೈನ ಅಧಿಕಾರಿಗಳು ಯುಎಸ್‌ನಲ್ಲಿ ಉನ್ನತ ಶಿಕ್ಷಣ, ವಿದ್ಯಾರ್ಥಿ ವೀಸಾಗಳು ಮತ್ತು ಇತರ ಪ್ರಶ್ನೆಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತಾರೆ.ಮೇಳದಲ್ಲಿ ಭಾಗವಹಿಸಲು ನೋಂದಣಿ ಕಡ್ಡಾಯ.
ಅರಿಜೋನಾ ಸ್ಟೇಟ್ ಯೂನಿವರ್ಸಿಟಿ, ಬ್ರ್ಯಾಂಟ್ ಯೂನಿವರ್ಸಿಟಿ, ಕ್ಯಾಥೋಲಿಕ್ ಯೂನಿವರ್ಸಿಟಿ ಆಫ್ ಅಮೇರಿಕಾ, ಸಿಟಿ ಯೂನಿವರ್ಸಿಟಿ ಆಫ್ ಸಿಯಾಟಲ್, ಕ್ಲಾರ್ಕ್ಸನ್ ಯೂನಿವರ್ಸಿಟಿ, ಜಾರ್ಜ್ ವಾಷಿಂಗ್ಟನ್ ಯೂನಿವರ್ಸಿಟಿ, ಕೆನ್ನೆಸಾ ಸ್ಟೇಟ್ ಯೂನಿವರ್ಸಿಟಿ ಮತ್ತು ಮೇರಿಮೌಂಟ್ ಯೂನಿ ವರ್ಸಿಟಿ ಮೇಳದಲ್ಲಿ ಭಾಗವಹಿಸಲಿವೆ.