Friday, 13th December 2024

ದುಡಿದ ಒಂದು ಭಾಗ ಸಾಮಾಜಿಕ ಸೇವೆಗೆ ಮೀಸಲಾದರೆ ದೇವರು ಒಪ್ಪುತ್ತಾನೆ

ಗುಬ್ಬಿ: ನಾವು ದುಡಿದ ಒಂದು ಭಾಗ ಸಾಮಾಜಿಕ ಸೇವೆಗೆ ಮೀಸಲಾದರೆ ದೇವರು ಒಪ್ಪುತ್ತಾನೆ ಎಂದು ಬೆಳ್ಳಾವಿ ಮಠದ ಕಾರದ ವೀರ ಬಸವ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಗೋಸಲ ಚನ್ನಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು ಅಧ್ಯಕ್ಷರಾದ ಗಿರೀಶ್ ಸಾರ್ವಜನಿಕವಾಗಿ ಶಿಕ್ಷಣ ಮತ್ತು ಆರೋಗ್ಯ ಎಲ್ಲರಿಗೂ ಸಿಗಬೇಕು ಎಂಬ ದೃಷ್ಟಿಯಿಂದ ಹಲವು ಕಾರ್ಯ ಕ್ರಮಗಳನ್ನ ಮಾಡುತ್ತಾ ಬಂದಿದ್ದು ಪತ್ತಿನ ಸಹಕಾರ ಸಂಘದ ಮೂಲಕವೂ ಸಹ ಸಾಮಾಜಿಕ ಸೇವೆ ಮಾಡುತ್ತಿರುವುದು ಗಮನಾರ್ಹವಾಗಿದೆ. ಗೋಸಲ ಚನ್ನಬಸವೇಶ್ವರ ಸ್ವಾಮಿಯವರ ದೇವಾಲಯದಲ್ಲಿ ನಡೆಯುವ ನಿತ್ಯ ದಾಸೋಹಕ್ಕೆ ಒಂದು ತಿಂಗಳ ಕಾಲ ಪತ್ತಿನ ಸಹಕಾರ ಸಂಘದ ಮೂಲಕ ದಾಸೋಹ ಮಾಡಿಸುತ್ತೇನೆ ಎನ್ನುವ ಯೋಜನೆ ಮಾಡಿರುವುದು ಸಂತೋಷದ ವಿಷಯವಾಗಿದೆ ಇವರ ಸಂಸ್ಥೆ ಮತ್ತಷ್ಟು ಚೆನ್ನಾಗಿ ಬೆಳೆಯಲಿ ಸಾಮಾಜಿಕವಾಗಿ ತೊಡಗಿ ಕೊಳ್ಳಲಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗೋಸಲ ಚನ್ನಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸಹಳ್ಳಿ ಗಿರೀಶ್, ಲಯನ್ಸ್ ಕ್ಲಬ್ ಅಧ್ಯಕ್ಷ ರಮೇಶ್ ಬಾಬು, ಅರ್ಚಕ ಸಂಘದ ಅಧ್ಯಕ್ಷ ಮಹಾ ರುದ್ರೇಶ್, ಉಪಾಧ್ಯಕ್ಷೆ ಶೃತಿ ಎಸ್, ನಿರ್ದೇಶಕರಾದ ಸಂಪತ್, ರುದ್ರೇಶ್, ಅಶ್ವಿನ್ ರಾಜ್, ಧರಣೇಶ, ರುದ್ರಪ್ರಸಾದ್, ರಾಜಕುಮಾರ, ಶೃತಿ, ಮಂಜುನಾಥ್, ನಂಜೇಗೌಡ, ಚೇತನಜಗದೀಶ್, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಚೇತನ ಸೇರಿದಂತೆ ಇನ್ನಿತರರು ಹಾಜರಿದ್ದರು.