Sunday, 1st December 2024

Election: ನ.16ಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಘೋಷಣೆ

ಅ.28 ರಿಂದ ನವೆಂಬರ್ 7 ರ 5 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ

ಚಿಕ್ಕಬಳ್ಳಾಪುರ: 2024-2029ನೇ ಅವಧಿಯ ಚಿಕ್ಕಬಳ್ಳಾಪುರ ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣೆಯು ಘೋಷಣೆ ಆಗಿದ್ದು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಅ.28 ರಿಂದ ನವೆಂಬರ್ 7 ರವರೆಗೆ ಬೆಳಿಗ್ಗೆ ೧೧ ಗಂಟೆಯಿ0ದ ಸಂಜೆ ೫ ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದು. ನಾಮಪತ್ರಗಳನ್ನು  ನವೆಂಬರ್ ೮ ರಂದು ಬೆಳಿಗ್ಗೆ ೧೧ ಗಂಟೆಯವರೆಗೆ ಪರಿಶೀಲಿಸಲಾಗುವುದು. ನಂತರ  ಅರ್ಹ ಅಭ್ಯರ್ಥಿಗಳ ಹೆಸರನ್ನು ಅಂದೆ ಪ್ರಕಟಣೆ ಮಾಡಲಾಗುವುದು.

ಉಮೇದುವಾರಿಕೆಯನ್ನು  ನವೆಂಬರ್ ೧೧ ರ ಸಂಜೆ ೪:೩೦ ಗಂಟೆಯವರೆಗೆ ವಾಪಸ್ಸು ಪಡೆಯಬಹುದು ನಂತರ ಚುನಾವಣಾ ಕಣದಲ್ಲಿ ಉಳಿದ ಅಭ್ಯರ್ಥಿಗಳ ಹೆಸರನ್ನು  ನವೆಂಬರ್ ೧೧ರ ಸಂಜೆ ೫:೩೦ ಗಂಟೆಗೆ ಪ್ರಕಟಣೆ ಮಾಡಲಾಗುವುದು.

ಚುನಾವಣೆಯು  ನವೆಂಬರ್ ೧೬ ರಂದು ಬೆಳಿಗ್ಗೆ ೯ ಗಂಟೆಯಿ0ದ ಸಂಜೆ ೪ ಗಂಟೆಯವರೆಗೆ ನಗರದ ಸರ್ಕಾರಿ ನೌಕರರ ಸಂಘ(ತಾಯಿ ಮತ್ತು ಮಕ್ಕಳ ಆಸ್ಪತ್ರೆ ಎದುರು)ದ ಕಚೇರಿಯಲ್ಲಿ ನಡೆಯಲಿದೆ.

ಮತದಾನದ ನಂತರ  ಅಂದೆ ಮತಗಳ ಎಣಿಕೆ ಫಲಿತಾಂಶ ಸಹ ಪ್ರಕಟಣೆಯಾಗಲಿದೆ. ಚುನಾವಣೆಯ ಮತದಾನ ಮತ್ತು ಸ್ಪರ್ಧೆಯ ಪ್ರಕ್ರಿಯೆಗಳಲ್ಲಿ  ಭಾಗವಹಿಸುವ ಮುನ್ನ ಸರ್ಕಾರಿ ನೌಕರರ, ಅಧಿಕಾರಿ ಬಂಧುಗಳು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿಕೊಳ್ಳಲು ರಾಜ್ಯ ಸರ್ಕಾರಿ ನೌಕರರ ಸಂಘದ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷ ಜಿ. ಹರೀಶ್ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Chikkaballapur: ವಾಲ್ಮೀಕಿ ಮಹರ್ಷಿ ಜೀವನ ಮೌಲ್ಯ, ತತ್ವಗಳು ಎಲ್ಲ ಕಾಲಕ್ಕೂ ಪ್ರಸ್ತುತ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ