Friday, 20th September 2024

ಸುಲಭವಾಗಿ ಇವಿ ವಾಹನಗಳಿಗೆ ಬದಲಾಯಿಸಿಕೊಳ್ಳಲು #ಈಸಿಟುಇವಿ ಅಭಿಯಾನ ಆರಂಭಿಸಿದ ಟಾಟಾ.ಇವಿ

~ ಟಾಟಾ.ಇವಿ ತನ್ನ #EasyToEV ಅಭಿಯಾನದ ಮೂಲಕ ಇವಿಗಳ ಕುರಿತಾದ ಮಿಥ್ ಗಳನ್ನು ತೊಡೆದು ಹಾಕಲಿದೆ~

ಬೆಂಗಳೂರು: ಟಾಟಾ ಮೋಟಾರ್ಸ್ ಲಿಮಿಟೆಡ್ ನ ಅಂಗಸಂಸ್ಥೆ ಮತ್ತು ಭಾರತದ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಕ್ರಾಂತಿಯ ಪ್ರವರ್ತಕರಾದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (ಟಿಪಿಇಎಂ) ಇದೀಗ #ಈಸಿಟುಇವಿ (#EasyToEV) ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನದ ಮೂಲಕ ಗ್ರಾಹಕರಲ್ಲಿ ಇವಿ ಕುರಿತಾಗಿ ಇರುವ ಮಿಥ್ ಅಥವಾ ಸುಳ್ಳುಗಳನ್ನು ತೊಡೆದುಹಾಕುವ ಮೂಲಕ ಅರಿವು ಮೂಡಿಸಲಾಗುತ್ತಿದೆ ಮತ್ತು ಮತ್ತು ಇವಿಗಳ ಸುತ್ತ ಹರಡಿರುವ ಸುದ್ದಿಗಳ ವಾಸ್ತವಾಂಶಗಳನ್ನು ತಿಳಿಸಿ ಇವಿ ಪರಿಗಣಿಸುತ್ತಿರುವವರಲ್ಲಿ ಮತ್ತು ಸಂಭಾವ್ಯ ಮಾಲೀಕರಲ್ಲಿ ವಿಶ್ವಾಸವನ್ನು ಬೆಳೆಸಲಾಗುತ್ತದೆ. ಈ ಅಭಿಯಾನವನ್ನು ಹಲವು ಮಾಧ್ಯಮಗಳಲ್ಲಿ ಆರಂಭಿಸಲಾಗಿದೆ ಮತ್ತು 2024ರ ಟಾಟಾ ಐಪಿಎಲ್ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪುವ ಉದ್ದೇಶದಿಂದ ಪ್ರಸಾರ ಮಾಡಲಾಗಿದೆ.

ಈ ಅಭಿಯಾನವು ಕಳೆದ ವರ್ಷದ ಟಾಟಾ ಐಪಿಎಲ್ 2023ರ ಸಮಯದಲ್ಲಿ ಬಿಡುಗಡೆಯಾದ ಟಾಟಾ.ಇವಿಯ ಗೋ.ಇವಿ ಸರಣಿಯ ವೀಡಿಯೊಗಳ ವಿಸ್ತರಣೆಯಾಗಿದ್ದು, ಇದು ಗ್ರಾಹಕರಿಗೆ ಇವಿ ಅನ್ನು ಅಳವಡಿಸಿಕೊಳ್ಳಲು ಇರುವ ವಿವಿಧ ಕಾರಣಗಳನ್ನು ತಿಳಿಸುತ್ತದೆ. ಭಾರತದಲ್ಲಿ ಮುಂದಿನ ಪೀಳಿಗೆಯ ಇವಿ ಖರೀದಿದಾರರನ್ನು ಗಟ್ಟಿಗೊಳಿಸುವ ಉದ್ದೇಶವನ್ನು ಹೊಂದಿದ್ದು, ಈ ವರ್ಷದ #EasyToEV ಅಭಿಯಾನದಲ್ಲಿ ಸರಳವಾದ, ಚಿತ್ತಾಕರ್ಷಕವಾದ ಚಿತ್ರ ಸರಣಿಯ ಮೂಲಕ ಗರಿಷ್ಠ ಪರಿಣಾಮ ಉಂಟು ಮಾಡಿ ಇವಿ ಕುರಿತಾಗಿ ಇರುವ ವೈಚಾರಿಕ ಅಡೆತಡೆಗಳನ್ನು ನಿವಾರಿಸುವ ಕೆಲಸ ಮಾಡಲಾಗುತ್ತದೆ. ನಾವೀನ್ಯತೆ ಮತ್ತು ಸುಸ್ಥಿರ ಭವಿಷ್ಯದ ಅನ್ವೇಷಣೆಗೆ ಸಾಕ್ಷಿಯಾಗಿ ಈ ಅಭಿಯಾನವು ಇವಿ ಅಳವಡಿಕೆಯ ಕುರಿತು ಉತ್ತಮ ಚರ್ಚೆ ಹುಟ್ಟು ಹಾಕಲಿದೆ.

ಚಿಕ್ಕದಾಗಿ ಆದರೆ ಸರಳವಾಗಿ ಸೊಗಸಾದ ಕಥೆ ಹೇಳುವ ಈ ಸರಣಿಯ ವೀಡಿಯೊಗಳು ಇವಿಗಳಿಗೆ ಸಂಬಂಧಿಸಿದ ಪ್ರಾಥಮಿಕ ಮಿಥಅ ಗಳು ಅಥವಾ ಸುಳ್ಳುಗಳನ್ನು ತೊಡೆದು ಹಾಕಲಿವೆ. ದೂರದ ಪ್ರಯಾಣ ಮಾಡಲು ಇವಿಗಳು ಹೇಗೆ ಪರಿಪೂರ್ಣ ಪಾಲುದಾರರು ಎಂಬ ವಿಚಾರದ ಕುರಿತು ಮೊದಲ ವಿಡಿಯೋ ಪ್ರಸಾರವಾಗಲಿದೆ. ಆ ಮೂಲಕ ರೇಂಜ್ ಕುರಿತಾದ ಆತಂಕವನ್ನು ತೊಡೆದುಹಾಕಲಾಗುತ್ತದೆ. ಇದೇ ರೀತಿ ಹಲವು ವಿಡಿಯೋಗಳ ಮೂಲಕ ಈ ಕೆಳಗೆ ನೀಡಿರುವ ಮಿಥ್ ಗಳನ್ನು ತೊಡೆಯಲಾಗುತ್ತದೆ:

ತಪ್ಪು ಅಭಿಪ್ರಾಯ
ಇವಿಗಳು ಚಾರ್ಜ್ ಮಾಡಲು ತುಂಬಾ ಸಮಯ ತೆಗೆದುಕೊಳ್ಳುತ್ತವೆ
ಇವಿಯ ಬ್ಯಾಟರಿ ಬಾಳಿಕೆ ಅದರ ವಾರಂಟಿ ಅವಧಿ ಇರುವವರೆಗೆ ಮಾತ್ರ ಇರುತ್ತದೆ
ಇವಿಗಳನ್ನು ಖರೀದಿಸುವುದು ಮತ್ತು ನಿರ್ವಹಿಸುವುದು ದುಬಾರಿಯಾಗಿದೆ
ಇವಿಗಳ ಖರೀದಿ ದುಬಾರಿಯಾಗಿದೆ
ಹೆಚ್ಚು ಜನರ ಬಳಿ ಇವಿ ಇಲ್ಲ
ಭಾರತದಲ್ಲಿ ಹೆಚ್ಚು ಚಾರ್ಜಿಂಗ್ ಸ್ಟೇಷನ್‌ಗಳಿಲ್ಲ
ಮಳೆಯ ಸಮಯದಲ್ಲಿ ಇವಿ ಓಡಿಸುವುದು ಅಪಾಯಕಾರಿ
ಇವಿ ಅನ್ನು ಚಾರ್ಜ್ ಮಾಡುವುದು ಬಹಳ ಕಷ್ಟಕರ

ವಾಸ್ತವ
ಕೇವಲ 20 ನಿಮಿಷ ಚಾರ್ಜ್‌ ಮಾಡುವ ಮೂಲಕ ಟಾಟಾ.ಇವಿಯಲ್ಲಿ 100 ಕಿಮೀ ರೇಂಜ್ ಹೊಂದಬಹುದು
ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಂತಹ ಯಾವುದೇ ಗ್ರಾಹಕ ಎಲೆಕ್ಟ್ರಾನಿಕ್ ಸಾಧನದಂತೆಯೇ ಇವಿಯ ಬ್ಯಾಟರಿ ಕೂಡ ಅದರ ವಾರಂಟಿ ಅವಧಿಯನ್ನು ಮೀರಿ ಬಾಳಿಕೆ ಬರುತ್ತದೆ
ಇವಿಯಲ್ಲಿ ಕಡಿಮೆ ಭಾಗಗಳಿರುವುದರಿಂದ ನಿರ್ವಹಣಾ ವೆಚ್ಚ ಕಡಿಮೆ ಇರುತ್ತದೆ
ಪೆಟ್ರೋಲ್ ಚಾಲಿತ ವಾಹನಕ್ಕೆ ಹೋಲಿಸಿದರೆ ಇವಿಯಲ್ಲಿ 5 ವರ್ಷಗಳಲ್ಲಿ 4.2 ಲಕ್ಷಕ್ಕಿಂತ ಹೆಚ್ಚು ಉಳಿತಾಯ ಮಾಡಬಹುದು
ಭಾರತೀಯ ರಸ್ತೆಯಲ್ಲಿ 1.5 ಲಕ್ಷಕ್ಕೂ ಹೆಚ್ಚು ಟಾಟಾ.ಇವಿಗಳು ಇವೆ ಮತ್ತು ಆ ಸಂಖ್ಯೆ ಜಾಸ್ತಿಯಾಗುತ್ತಿದೆ
ಭಾರತವು ಪ್ರಸ್ತುತ 12,000 ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ಹೊಂದಿದೆ
ಇವಿಯ ಮೋಟಾರ್ ಮತ್ತು ಬ್ಯಾಟರಿ ಐಪಿ67 ರೇಟಿಂಗ್ ಹೊಂದಿದೆ ಮತ್ತು ಇದು ವಾಟರ್ ಪ್ರೂಫ್ ಹಾಗೂ ಡಸ್ಟ್ ಪ್ರೂಫ್ ಆಗಿದೆ
ಇವಿ ಅನ್ನು ಚಾರ್ಜ್ ಮಾಡಲು ಯಾವುದೇ ತೊಂದರೆ ಇಲ್ಲ ಮತ್ತು ಮನೆಯಲ್ಲಿಯೇ ಸುಲಭವಾಗಿ ಚಾರ್ಜ್ ಮಾಡಬಹುದಾಗಿದೆ

ಟಾಟಾ.ಇವಿಯ ಪ್ರಮುಖ ಮೂರು ಆಧಾರ ಸ್ತಂಭಗಳಾದ ಸಮುದಾಯ, ತಂತ್ರಜ್ಞಾನ ಮತ್ತು ಸುಸ್ಥಿರತೆ ವಿಚಾರಗಳಿಗೆ ಅನುಗುಣವಾಗಿ ನಡೆಯುತ್ತಿರುವ ಈ ಅಭಿಯಾನವು ಇವಿಗಳ ಅಳವಡಿಕೆಯನ್ನು ಹೆಚ್ಚಿಸುವ ಬದ್ಧತೆಯನ್ನು ಹೊಂದಿದೆ. ಇವಿ ಪರಿಗಣಿಸಲು ಆಲೋಚಿಸುತ್ತಿರುವವರಲ್ಲಿ ಮತ್ತು ಇವಿ ವಿರೋಧ ತೋರುತ್ತಿರುವವರ ಜೊತೆ ಮುಕ್ತ ಸಂವಹನ ನಡೆಸುವ #EasyToEV ಅಭಿಯಾನವು ‘ಇವಿಯ ಜೊತೆ ಜೀವನವು ಸುಲಭವಾಗಿರುತ್ತದೆ’ ಎಂಬುದನ್ನು ಸಾರಲಿದೆ.

ಇದರ ಜೊತೆಗೆ ಈ ಅಭಿಯಾನವು ಸಂಭಾವ್ಯ ಖರೀದಿದಾರರ ವಿಶ್ವಾಸವನ್ನು ಹೆಚ್ಚಿಸುವ ಮೂಲಕ ಭಾರತದಲ್ಲಿ ಟಾಟಾ.ಇವಿಯ ಮುಂದಿನ ಅಭಿವೃದ್ಧಿಯನ್ನು ತೀವ್ರಗೊಳಿಸುತ್ತದೆ. ಮೆಟ್ರೋ ನಗರಗಳಿಂದ ಹಿಡಿದು ಯುವ ಮಾರುಕಟ್ಟೆಗಳವರೆಗೆ ಎಲ್ಲಾ ಕಡೆಯಲ್ಲಿ ಇವಿ ವಿಭಾಗವು ಆರ್ಥಿಕ ವರ್ಷ 24ರಲ್ಲಿ ವರ್ಷದಿಂದ ವರ್ಷಕ್ಕೆ 90% ಬೆಳವಣಿಗೆಗೆ ಸಾಕ್ಷಿಯಾಗಿದೆ. ಕಂಪನಿಯು ಭಾರತದಲ್ಲಿ ಇವಿಗಳ ಅಳವಡಿಕೆಯನ್ನು ಹೆಚ್ಚಿಸುವ ಮೂಲಕ ಭಾರತದ ಸುಸ್ಥಿರ ಚಲನಶೀಲತೆಯ ಪ್ರಯಾಣದಲ್ಲಿನ ಉತ್ತಮ ಅವಕಾಶಗಳನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ.