Thursday, 3rd October 2024

ನೋಟು ಬದಲಾವಣೆ ಹೆಸರಲ್ಲಿ ಪಂಗನಾಮ: ಮೂವರ ಬಂಧನ

ಬೆಳಗಾವಿ: ಜಿಲ್ಲೆಯ ಕಾಗವಾಡ ಠಾಣಾ ವ್ಯಾಪ್ತಿಯಲ್ಲಿ ನೋಟು ಬದಲಾವಣೆ ಹೆಸರಲ್ಲಿ ಪಂಗನಾಮ ಹಾಕಿದ್ದ ಮೂವರನ್ನು ಬಂಧಿಸಲಾಗಿದೆ.

ಸಾಗರ ಜಾಧವ್, ಆರೀಫ್ ಸಾಗರ, ಲಕ್ಷ್ಮಣ್ ನಾಯಕ್ ಬಂಧಿತ ಆರೋಪಿಗಳು.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ಖದೀಮರು ಮಹಾರಾಷ್ಟ್ರ ಮೂಲದ ಸಮೀರ್ ಭೋಸಲೇ ಎಂಬವರಿಗೆ ಆಮೀಷ ವೊಡ್ಡಿ ಐದು ಲಕ್ಷ ಪಂಗನಾಮ ಹಾಕಿದ್ದಾರೆ. ನೀವು 500 ಮುಖಬೆಲೆಯ 5 ಲಕ್ಷ ನೀಡಿದರೆ ನಾವು 6 ಲಕ್ಷ 2 ಸಾವಿರ ಮುಖಬೆಲೆಯ ನೋಟು ನೀಡುತ್ತೇವೆ. ನಮಗೆ ಬ್ಯಾಂಕ್​ನಲ್ಲಿ ಹಣ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ನಂಬಿಸಿದ್ದಾರೆ.

ಒಂದು ಲಕ್ಷ ಹಣ ಹೆಚ್ಚಿಗೆ ಸಿಗುತ್ತೆ ಎಂದು ನಂಬಿದ ಸಮೀರ್​​ 5 ಲಕ್ಷ ನೀಡಿ 6 ಲಕ್ಷ ಪಡೆದಿದ್ದಾರೆ. ಬಳಿಕ ಪೋಲಿಸರು ಬಂದರು ಎಂದು ಹೇಳಿ ಕೂಡಲೇ ಎಸ್ಕೇಪ್ ಆಗಿದ್ದಾರೆ. ಬಳಿಕ ಹಣವನ್ನು ಚೆಕ್​​ ಮಾಡಿದಾಗ ನಕಲಿ ಎಂದು ತಿಳಿದು ಬಂದಿದೆ.

ಪ್ರಕರಣ ದಾಖಲಿಸಲಾಗಿದ್ದು, ವಿಷಯ ತಿಳಿದ ಕಾಗವಾಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮೂವರು ಆರೋಪಿಗಳು ಮಹಾರಾಷ್ಟ್ರ ಮೂಲದವರಾಗಿದ್ದಾರೆ. ಪ್ರಕರಣ ದಾಖಲಾಗಿ ಒಂದೇ ದಿನದಲ್ಲಿ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.