ಬಾಗೇಪಲ್ಲಿ : ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸುವುದು ಸೇರಿದಂತೆ ಹಲವಾರು ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೆಹಲಿಯಲ್ಲಿ ಸೆ.೧೪ ಮತ್ತು೧೫ ರಂದು ಬೃಹತ್ ರೈತರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಗೋವಿಂದರೆಡ್ಡಿ ತಿಳಿಸಿದ್ದಾರೆ.
ತಮಿಳುನಾಡಿನ ತಿರುಚಿಯಲ್ಲಿ ಆ.೨೭ ರಂದು ನಡೆದ ರಾಷ್ಟ್ರೀಯ ರೈತ ಸಮಾವೇಶದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಜಿಲ್ಲೆಯ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಗೋವಿಂದರೆಡ್ಡಿ ಭಾಗವಹಿಸಿದ್ದರು. ದೇಶಾದ್ಯಂತ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾತರಿ ಕಾನೂನು ಜಾರಿಗೊಳಿಸುವಂತೆ, ದೇಶಾದ್ಯಂತ ರೈತರ ಸಂಪೂರ್ಣ ಸಾಲಮನ್ನಾ ಡಾ.ಎಮ್ ಎಸ್ ಸ್ವಾಮಿನಾಥನ್ ರವರ ವರದಿ ಜಾರಿಗೊಳಿಸುವುದು ಸೇರಿದಂತೆ ಹಲವಾರು ರೈತ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸೆ.೧೪ ಮತ್ತು ೧೫ ರಂದು ದೇಶಾದ್ಯಂತ ೨ ಲಕ್ಷಕ್ಕೂ ಹೆಚ್ಚು ರೈತ ಹೋರಾಟಗಾರರು ದೆಹಲಿಯ ಜಂತರ್ ಮಂತರ್ ನಲ್ಲಿ ಸಮಾವೇಶ ನಡೆಸಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಪ್ರತಿಭಟನೆಯನ್ನು ಮಾಡಲು ತೀರ್ಮಾನಿಸಲಾಯಿತು ಎಂದು ಗೋವಿಂದರೆಡ್ಡಿ ತಿಳಿಸಿದರು.
ಮಾತುಕತೆ ಮೂಲಕ ನೀರಾವರಿ ಸಮಸ್ಯೆಗೆ ಪರಿಹಾರ
ತಂಜಾವೂರಿನಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ವತಿಯಿಂದ ಭಾಗವಹಿಸಿದ ಗೋವಿಂದರೆಡ್ಡಿ, ರಾಜ್ಯ ರೈತ ಹೋರಾಟಗಾರರು ಹಾಗೂ ತಮಿಳುನಾಡಿನ ರೈತ ಹೋರಾಟಗಾರರು ನಡುವೆ ಸುದೀರ್ಘವಾದ ಮೇಕೆದಾಟು ಯೋಜನೆ ಸೇರಿದಂತೆ ಹಲವು ನೀರಾವರಿ ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಸಭೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರೆಡ್ಡಿ, ಮಾತನಾಡಿ ಸಮ ಪಾಲು ಸಮ ಬಾಳು ತತ್ವದ ಅಡಿ ಮೇಕೆದಾಟು ಯೋಜನೆಯಿಂದ ಬೆಂಗಳೂರಲ್ಲಿ ವಾಸಸಿರುವ ಕೋಟ್ಯಾಂತರ ಜನರಿಗೆ ಕುಡಿಯುವ ನೀರು ಪೂರೈಸಲು ಯೋಜನೆ ಅತಿ ಅವಶ್ಯಕವಾಗಿದೆ ಹಾಗಾಗಿ ನಮಗೆ ಬೇಕಾದ ನೀರಿನ ಪ್ರಮಾಣ ಪಡೆದು, ನಂತರ ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಒದಗಿಸಲಾಗುತ್ತದೆ.ಈ ಬಗ್ಗೆ ಪರಸ್ಪರ ಮಾತುಕತೆ ಮೂಲಕ ಎರಡೂ ರಾಜ್ಯ ಸರಕಾರಗಳು ಸಭೆ ನಡೆಸಿ ಸಮಸ್ಯೆ ಪರಿಹರಿಸಕೊಳ್ಳಬೇಕು ಎಂದರು.
೨೯ಸಿಬಿಪಿಎA೮ : ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸುವುದು ಸೇರಿದಂತೆ ಹಲವಾರು ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೆಹಲಿಯಲ್ಲಿ ಸೆ.೧೪ ಮತ್ತು೧೫ ರಂದು ಬೃಹತ್ ರೈತರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಗೋವಿಂದರೆಡ್ಡಿ ತಿಳಿಸಿದ್ದಾರೆ.