Wednesday, 11th December 2024

ಉದ್ದೇಶಪೂರ್ವಕವಾಗಿ ತಡರಾತ್ರಿವರೆಗೆ ಕೆಲಸ ಮಾಡಿಸಿಕೊಳ್ಳುತ್ತಾರೆ: ಮಹಿಳಾ ಕಂಡಕ್ಟರ್‌ ಅಳಲು

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಮಹಿಳೆಯರಿಗಾಗಿ ಜಾರಿಗೊಳಿಸಿರುವ ಉಚಿತ ಬಸ್‌ ಪ್ರಯಾಣದ ಶಕ್ತಿ ಯೋಜನೆ ಮಹಿಳಾ ಕಂಡಕ್ಟರ್‌ ಗಳಿಗೆ ಮಾರಕ ವಾಗಿ ಪರಿಣಮಿಸಿದೆ. ಮೇಲಧಿಕಾರಿಗಳು ಮಹಿಳಾ ಸಿಬ್ಬಂದಿಗೆ ತೀವ್ರ ಕಿರುಕುಳ ನೀಡುತ್ತಿದ್ದು, ಕಾರ್ಯ ನಿರ್ವಹಿಸುತ್ತಿರುವುದೇ ಕಷ್ಟವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಸುಮಾರು 40 ಮಂದಿ ಮಹಿಳಾ ಕಂಡಕ್ಟರ್‌ ಗಳು ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಸಾರಿಗೆ ಸಚಿವರು ಹಾಗೂ ಉಪಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಡಿಪೋ ಸಿಟಿಎಂ ಅಂತೋಣಿ ಜಾರ್ಜ್‌ ಹಾಗೂ ಡಿಪೋ ಮ್ಯಾನೇಜರ್‌ ಎಂ.ಕೃಷ್ಣಪ್ಪ ಉದ್ದಟತನ ಹಾಗೂ ದರ್ಪದಿಂದ ಮಹಿಳಾ ಸಿಬ್ಬಂದಿಗಳನು ನಿಕೃಷ್ಟವಾಗಿ ಕಾಣುತ್ತಿದ್ದಾರೆಂದು ಲೇಡಿ ಕಂಡಕ್ಟರ್‌ ಗಳು ಆರೋಪಿಸಿದ್ದಾರೆ. ಮಹಿಳಾ ಕಂಡಕ್ಟರ್‌ ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದಾರೆ.

ಉದ್ದೇಶಪೂರ್ವಕವಾಗಿ ತಡರಾತ್ರಿಯವರೆಗೆ ಕೆಲಸ ಮಾಡಿಸಿಕೊಳ್ಳುತ್ತಾರೆ. ಘಟಕದಲ್ಲಿ ಸುಮ್ಮನೆ ಕೂರಿಸಿ ರಜೆ ಪತ್ರ ಬರೆಸಿಕೊಳ್ಳುತ್ತಾರೆ. ತಿಂಗಳ ಋತುಚಕ್ರದ ದಿನದಲ್ಲಿಯೂ ಸಹ ಅನುಕಂಪ ತೋರದೆ ಹಗಲು ರಾತ್ರಿ ದುಡಿಯಲು ತಳ್ಳುತ್ತಾರೆಂದು ಅವಲತ್ತುಕೊಂಡಿದ್ದಾರೆ.