Saturday, 14th December 2024

ಅಕ್ರಮ ಖಾತೆ ಐದು ಮಂದಿ ಮೇಲೆ ಪ್ರಕರಣ ದಾಖಲು

ಚಿಕ್ಕನಾಯಕನಹಳ್ಳಿ: ಜಮೀನಿನ ವಾರಸುದಾರರನ್ನು ಬದಲಾಯಿಸಿ ಬೇರೆಯವರಿಗೆ ಜಮೀನನ್ನು ಕ್ರಯದ ನೊಂದಣಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ತಾಲ್ಲೂಕಿನ ಹುಳಿಯಾರಿನ ವಠಾರದಲ್ಲಿ ವಾಸವಿರುವ ರಾಬಿಯಾಬಿ ಇವರ ಹೆಸರಿಗೆ ಸೇರಿದ ಲಕ್ಷಿö್ಮÃಪುರ ಗ್ರಾಮದ ಸರ್ವೆನಂಬರ್ ೩೦ರಲ್ಲಿರುವ ೪ ಎಕರೆ ಜಮೀನನ್ನು ಇದೇ ಹೆಸರಿನ ಇನ್ನೊಬ್ಬ ಮಹಿಳೆಯನ್ನು ಕರೆತಂದು ದಿನಾಂಕ ೦೬/೦೮/೨೦೨೨ರ ಕ್ರಯದಂತೆ ಹಯಾತ್‌ಖಾನ್ ಬಿನ್ ನಬಿಖಾನ್ ಮತ್ತು ಹೈದರ ಆಲಿ ಖಾನ್ ಬಿನ್ ನಬಿಖಾನ್ ಇವರ ಹೆಸರಿಗೆ ಖಾತೆ ಮಾಡಲಾಗಿದೆ.

ಈ ಪ್ರಕರಣಕ್ಕೆ ಸಂಬAಧಿಸಿದAತೆ ಕ್ರಯ ಮಾಡಿಸಿಕೊಂಡವರು, ಸಾಕ್ಷಿದಾರರು ಹಾಗೂ ಜಿಲ್ಲಾ ಪತ್ರಬರಹಗಾರರು ಸೇರಿದಂತೆ ಆಗ ಕರ್ತವ್ಯದಲ್ಲಿದ್ದ ಉಪನೊಂದಣಾಧಿಕಾರಿಯ ಮೇಲೆ ಪ್ರಕರಣ ದಾಖಲಾಗಿದೆ.