Friday, 13th December 2024

ಕಲಬೆರಕೆ ಆಹಾರ ಸೇವನೆಯಿಂದ ಮಾನವನ ಆಯುಷ್ಯ ಕಡಿಮೆ: ಹಾಶ್ಮಿ ಪೀಠಾಧ್ಯಕ್ಷ ಅಭಿಮತ

ವಿಜಯಪುರ: ಕಲಬೆರಕೆಆಹಾರ ಸೇವನೆಯಿಂದ ಮಾನವನ ಆಯುಷ್ಯ ಕಡಿಮೆ ಮಾಡುತ್ತದೆ. ಅನಾರೋಗ್ಯದಿಂದ ಬಳಲಿ ದೈಹಿಕ ಸಾಮರ್ಥ್ಯ ಹಾಳಾಗುತ್ತಿದೆ ಎಂದು ಸೈಯದ ಮುರ್ತುಜಾ ಹುಸೇನಿ ಹಾಶ್ಮಿ ಪೀಠಾಧ್ಯಕ್ಷ ಹಜರತ ಹಾಸಿಂಪೀರ ದಸ್ತಗೀರ ದಗಾ೯ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಆಶ್ರಯದಲ್ಲಿ ಗುಣಮಟ್ಟದ ಆಹಾರ ಸೇವನೆ ಕುರಿತು ಚಿಂತನ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ರೋಗಗಳು ವಿಷಕಾರಿ ಆಹಾರದಿಂದ ಸೃಷ್ಟಿಯಾಗುತ್ತವೆ. ಗುಣಮಟ್ಟದ ಮಿತ ಆಹಾರ ಸಮಯಕ್ಕೆ ಸರಿಯಾಗಿ ಸೇವನೆ ಮಾಡುವದರಿಂದ ಆರೋಗ್ಯ ಸಂಪತ್ತು ಉಳಿಯುವಂತೆ ಮಾಡುತ್ತದೆ ಎಂದರು.

ಬ. ಬಾಗೇವಾಡಿ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿಜಿಯವರು ಮಾತನಾಡಿ ಆಧುನಿಕತೆಯ ಭರಾಟೆಯಲ್ಲಿ ಬಹುತೇಕ ಜನರು ಹೋಟೆಲಗಳನ್ನು ಅವಲಂಬಿಸಿದ್ದಾರೆ ಇದರಿಂದ ಅವರ ಆರೋಗ್ಯದಲ್ಲಿ ಏರುಪೇರಾಗಬಹುದು. ಆಹಾರ ಸಂಸ್ಕೃತಿ ಕುಟುಂಬ ವನ್ನು ಆಧರಿಸಿದೆ. ಆದ್ದರಿಂದ ಗುಣಮಟ್ಟದ ಆಹಾರ ಸೇವನೆಗೆ ಮಹತ್ವ ನೀಡಿಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಶ್ರಾಂತ ಪೋಲಿಸ್ ಅಧಿಕ್ಷಕ ಬಸವರಾಜ ಚೌಕಿಮಠ, ಮಹಮ್ಮದ ಗೌಸ್ ಹವಾಲ್ದಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಹಾಸಿಂಪೀರ ವಾಲಿಕಾರ, ಆಜಾದ್ ಪಟೇಲ, ಶರಣಪ್ಪ ಬಿರಾದಾರ, ದಿಲಾವರ ಕಾಜಿ ಇಷಾಖಾದ್ರಿ ಮುಶ್ರೀಫ ಗೋಲ್ಲಾಳಪ್ಪಗೌಡ ಪಾಟೀಲ್ ಬಂದೇನವಾಜ ಮಹಾಬರಿ. ಅಲ್ಲಮಪ್ರಭು ಮಲ್ಲಿಕಾರ್ಜುನಮಠ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.