Saturday, 14th December 2024

ಶೀಘ್ರದಲ್ಲೇ ತನಿಖೆಯ ವರದಿ ಬಹಿರಂಗ ಪಡಿಸುವಂತೆ ಒತ್ತಾಯ: ಬಿಜೆಪಿ

ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಯ ಎಫ್‌ಎಸ್‌ಎಲ್ ತನಿಖೆಗೆ ವೀಡಿಯೋ ದೃಶ್ಯಾವಳಿಯನ್ನು ಕಳುಹಿಸಿಕೊಡ ಲಾಗಿತ್ತು. ಈ ತನಿಖೆಯ ವರದಿಯನ್ನು ಇನ್ನೂ ಬಹಿರಂಗಪಡಿಸದ ಕಾರಣ, ಶೀಘ್ರದಲ್ಲೇ ಬಹಿರಂಗಪಡಿಸುವಂತೆ ಒತ್ತಾಯಿಸಿದ ಬಿಜೆಪಿಯಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ಆಗ್ರಹಿಸಿದೆ.

ರಾಜ್ಯ ಬಿಜೆಪಿಯಿಂದ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದು, ಫೆಬ್ರವರಿ 27ರಂದು ವಿಧಾನಸೌಧದ ಕಾರಿಡಾರ್‌ನಲ್ಲಿ ರಾಜ್ಯ ಸಭಾ ಸಂಸದ ಸೈಯದ್‌ ನಾಸಿರ್ ಹುಸೇನ್ ಅವರ ಬೆಂಬಲಿಗರು “ಪಾಕಿಸ್ತಾನ್ ಜಿಂದಾಬಾದ್” ಘೋಷಣೆಗಳನ್ನು ಕೂಗಿದರು. ನಂತರ ಗೌರವಾನ್ವಿತ ಗೃಹ ಸಚಿವರಾದ ಡಾ ಜಿ. ಪರಮೇಶ್ವರ್ ಅವರು ಎಫ್‌ಎಸ್‌ಎಲ್ ವರದಿಯನ್ನು ಶೀಘ್ರದಲ್ಲಿ ಬಹಿರಂಗ ಮಾಡುವುದಾಗಿ ಭರವಸೆ ನೀಡಿದರು ಎಂದಿದೆ.

ಘಟನೆ ನಡೆದು ಒಂದು ವಾರ ಕಳೆದರೂ ಇಲ್ಲಿಯವರೆಗೆ ಎಫ್‌ಎಸ್‌ಎಲ್ ವರದಿಯ ಬಗ್ಗೆ ಯಾವುದೇ ಏಕೆ? ತಿಳಿಸಲು ಇಷ್ಟು ವಿಳಂಬ ಮಾಹಿತಿ ಇಲ್ಲ. ಸತ್ಯವನ್ನು ಸಾರ್ವಜನಿಕರಿಗೆ ಈ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸದಿರಲು, ವಾಸ್ತವಿಕ ಸಂಗತಿಯನ್ನು ಮರೆಮಾಚಲು ಮತ್ತು ತನಿಖೆಯ ದಿಕ್ಕನ್ನು ಹಳಿತಪ್ಪಿಸಲು ನಿಮ್ಮ ಮೇಲೆ ಯಾವುದಾದರೂ ಒತ್ತಡವಿದೆಯೇ? ಎಂದು ಪ್ರಶ್ನಿಸಿದೆ.

ಇಂತಹ ವಿಳಂಬದಿಂದ ಮುಂದಿನ ದಿನಗಳಲ್ಲಿ ಈ ರೀತಿ ದೇಶ ವಿರೋಧಿ ಮತ್ತು ಸಮಾಜ ಘಾತುಕ ಕೆಲಸ ಮಾಡುವ ಜನರಿಗೆ ಮತ್ತಷ್ಟು ಬಲ ಬಂದಂತಾ ಗುತ್ತದೆ ಮತ್ತು ಅವರು ಇದನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾಡಲು ಕುಮ್ಮಕ್ಕು ನೀಡಿದಂತಾಗುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದರೆ ಅದಕ್ಕೆ ವಿಳಂಬವಾಗುತ್ತಿರುವ FSL ವರದಿ ಮತ್ತು ಹಳಿ ತಪ್ಪಿದ ತನಿಕಾ ಪ್ರಕ್ರೀಯೇ ಕಾರಣ ಎಂದೇ ನಾವು ಭಾವಿಸುತ್ತೇವೆ ಎಂದಿದೆ.

ಅಲ್ಲದೆ, ಎಫ್‌ಎಸ್‌ಎಲ್‌ ವರದಿಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಪೋಸ್ಟ್‌ಗಳು ಇರುವುದನ್ನು ನಾವು ನೋಡಿರುತ್ತೇವೆ. ಕಾರಣ ಈ ಘಟನೆಯ ಕುರಿತು ನಾವು ವಾಸ್ತವಾಂಶವನ್ನು ತಿಳಿಯಲು ಬಯಸುತ್ತೇವೆ. ರಾಜ್ಯದ ಜವಾಬ್ದಾರಿಯುತ ವಿರೋಧ ಪಕ್ಷವಾಗಿ, ನಾವು ಈ ಪತ್ರಕ್ಕೆ ನಿಮ್ಮಿಂದ ಅತ್ಯಂತ ಪ್ರಾಮಾಣಿಕ ಮತ್ತು ತ್ವರಿತ ಪ್ರತ್ಯುತ್ತರದ ನಿರೀಕ್ಷೆಯಲ್ಲಿ ಇದ್ದೇವೆ ಎಂದು ಹೇಳಿದೆ.