Wednesday, 11th December 2024

ಮಣ್ಣಿನ ಗಣಪ ರಚನಾ ಕಾರ್ಯಾಗಾರ ಸೆ.1ಕ್ಕೆ

ತುಮಕೂರು: ವರ್ಣೋದಯ ಆರ್ಟ್ ಗ್ರೂಪ್ ಟ್ರಸ್ಟ್ ಹಾಗೂ ಪ್ರೆಸ್‌ಕ್ಲಬ್ ತುಮಕೂರು ಸಹಯೋಗದಲ್ಲಿ ಸೆ.1 ರಂದು ಪರಿಸರ ಸ್ನೇಹಿ ಗಣೇಶ ಮೂರ್ತಿ ರಚನಾ ಕಾವ್ಯಾಗಾರವನ್ನು ನಗರದ ಬಿ.ಎಚ್‌. ರಸ್ತೆಯ ಪ್ರೆಸ್‌ಕ್ಲಬ್ ಆಲದಮರ ಪಾರ್ಕ್ ಆವರಣದಲ್ಲಿ ಹಮ್ಮಿಕೊಂಡಿದೆ.
ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಸಹಯೋಗದಲ್ಲಿ ಶಾಲಾ ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸುವ ಹಿನ್ನೆಲೆಯಲ್ಲಿ 5ರಿಂದ 10 ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.
150 ಮಕ್ಕಳಿಗೆ ಮಾತ್ರ ಅವಕಾಶವಿದ್ದು, ಬೆಳಗ್ಗೆ 8.30ಕ್ಕೆ ಆಗಮಿಸಿ ನೋಂದಣಿ ಮಾಡಿಕೊಳ್ಳುವಂತೆ ಹಾಗೂ ಮಾಹಿತಿಗಾಗಿ ದೂ: 9986009854, 8310756559, 9731440602 ಸಂಪರ್ಕಿಸುವಂತೆ ವರ್ಣೋದಯ ಆರ್ಟ್ ಗ್ರೂಪ್ ಟ್ರಸ್ಟ್ ಹಾಗೂ ಪ್ರೆಸ್ ಕ್ಲಬ್ ತಿಳಿಸಿದೆ.