ಗಂಗಾವತಿ: ನಗರಸಭೆಯ ಆಡಳಿತವನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡು ಯಶಸ್ವಿಯಾಗಿದ್ದರೆ, ನಗರಸಭೆಯಲ್ಲಿ ಬಹುಮತವಿದ್ದರೂ ಕಾಂಗ್ರೆಸ್ ಸದಸ್ಯರ ವಿಶ್ವಾಸ ಕಳೆದುಕೊಂಡು ಅಧಿಕಾರ ಉಳಿಸಿಕೊಳ್ಳುವಲ್ಲಿ ವಿಫಲವಾಗಿ ತೀವ್ರ ಮುಖಭಂಗ ಅನುಭವಿಸಿದೆ.
ಕೊನೆಯ ಅವಧಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಬಿಜೆಪಿಯ ಬನ್ನಿಗಿಡದ ಕ್ಯಾಂಪಿನ ಮೌಲಸಾಬ, ಉಪಾಧ್ಯಕ್ಷರಾಗಿ ಶರಣಬಸವೇಶ್ವರ ಕ್ಯಾಂಪಿನ ಪಾರ್ವತಮ್ಮ ದೊಡ್ಮನಿಯವರು ಚುನಾಯಿತರಾಗಿದ್ದಾರೆ.
ಶಾಸಕ ಗಾಲಿ ಜನಾರ್ದನರೆಡ್ಡಿ ಅವರ ಮತ ಸೇರಿ 26 ಮತಗಳ ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಗದ್ವಾಲ ಕಾಶಿಂಸಾಬ ,ಉಪಾಧ್ಯಕ್ಷ ಸ್ಥಾನಕ್ಕೆ ಹುಲಿಗೆಮ್ಮ ಕಿರಿಕಿರಿ ಸ್ಪರ್ಧಿಸಿ 09 ಮತ ಪಡೆದು ಪರಾಭವಗೊಂಡರು. ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ,ಸಹಾಯಕ ಚುನಾವಣೆ ಅಧಿಕಾರಿಯಾಗಿ ಪೌರಾಯುಕ್ತ ವಿರೂಪಾಕ್ಷಪ್ಪ ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಶಿವರಾಮಗೌಡ ಸೇರಿ ಬಿಜೆಪಿ ಮುಖಂಡರು ಅಭಿನಂದಿಸಿದರು.