Wednesday, 11th December 2024

ಗ್ಯಾಸ್ ಸಿಲಿಂಡರ್‌‌ ಡೆಲಿವರಿ ಶುಲ್ಕ ನೀಡುವಂತಿಲ್ಲ

ತುಮಕೂರು: ಗ್ಯಾಸ್ ಸಿಲಿಂಡರ್ ಡೆಲಿವರಿ ವೇಳೆ ಬಿಲ್ ಮೊತ್ತ ಮಾತ್ರ ಪಡೆಯಬೇಕು, ಅಧಿಕ ಶುಲ್ಕ ಪಡೆಯುವಂತಿಲ್ಲ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಗ್ಯಾಸ್ ಏಜೆನ್ಸಿ ಮಾಲೀಕರಿಗೆ ಆದೇಶಿಸಿದ್ದಾರೆ.
ಗ್ಯಾಸ್ ಸಿಲಿಂಡರ್ ಡೆಲಿವರಿ ನೀಡುವ ವೇಳೆ ಬಿಲ್ಲಿನ ಮೊತ್ತಕ್ಕಿಂತ 40 ರಿಂದ 50 ರುಪಾಯಿ ಡೆಲಿವರಿ ಶುಲ್ಕ ಪಡೆಯುತ್ತಿರುವ ಸಾಮಾಜಿಕ ಹೋರಾಟಗಾರ ಆರ್. ನವೀನ್ ಕುಮಾರ್ ದೂರು ಸಲ್ಲಿಸಿದ್ದರು.
ಈ ಸಂಬಂಧ ಕ್ರಮ ಕೈಗೊಂಡಿರುವ ಅಧಿಕಾರಿಗಳು ಗೃಹಬಳಕೆ ಗ್ಯಾಸ್ ಸಿಲಿಂಡರ್ ಡೆಲಿವರಿ ನೀಡುವಾಗ ಬಿಲ್ಲಿನ ಮೊತ್ತಕ್ಕಿಂತ ಹೆಚ್ಚಿನ ಶುಲ್ಕ ಪಡೆಯವಂತಿಲ್ಲ.
ಒಂದು ವೇಳೆ ಗ್ರಾಹಕರಿಂದ ಡೆಲಿವರಿ ಶುಲ್ಕ ಪಡೆದರೆ ಅಂತಹ ಗ್ಯಾಸ್ ಏಜೆನ್ಸಿ ವಿರುದ್ದ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ತಿಳಿಸಿದ್ದಾರೆ.