Wednesday, 9th October 2024

Tumkur News: ಎಸ್ ಕೊಡಿಗೆಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಅಶ್ವತ್ ಗೌಡ ಅವಿರೋಧ ಆಯ್ಕೆ

ಗುಬ್ಬಿ: ತಾಲೂಕಿನ ಎಸ್ ಕೊಡಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆ ರಾಜೀನಾಮೆ ನೀಡಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಶ್ವಥ್ ಗೌಡ ಅವಿರೋಧವಾಗಿ ಆಯ್ಕೆಯಾದರು.

 ನೂತನ ಅಧ್ಯಕ್ಷ ಅಶ್ವಥ್ ಗೌಡ ಮಾತನಾಡಿ ಅವಿರೋಧವಾಗಿ ಆಯ್ಕೆ ಮಾಡಿದ ಸರ್ವ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಬೀದಿ ದೀಪ, ರಸ್ತೆ, ನೀರು, ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ.ಮಾದರಿ ಗ್ರಾಮ ಪಂಚಾಯಿತಿಯಾಗಿ ಮಾಡುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಂಗರಾಜು, ಸದಸ್ಯರಾದ ಪ್ರೇಮ,ಜಯಮ್ಮ, ಗಂಗನರಸಮ್ಮ,ಶಿವಣ್ಣ, ಶ್ವೇತಾ, ಗೋಪಾಲ್, ತುಳಿಸಿದಾಸ್, ರಾಮೇಗೌಡ, ಮಂಜಮ್ಮ,ಸೈಯಾದ್ ಕಲಂದರ್, ಮುಖಂಡರಾದ ಗಿರೀಶ್, ಸಿದ್ದಣ್ಣ, ಗೋವಿಂದಪ್ಪ, ಮಂಜಣ್ಣ,ರಮೇಶ್, ವೆಂಕಟಪ್ಪ ಸೇರಿದಂತೆ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.