Friday, 13th December 2024

ಮೈ ಚಾಯ್ಸಸ್ ಫೌಂಡೇಷನ್ ವತಿಯಿಂದ ಮಾನವ ಕಳ್ಳ ಸಾಗಾಣಿಕೆ ತಡೆ ಬಗ್ಗೆ ಅರಿವು

ಗುಬ್ಬಿ: ಅಭಿವೃದ್ಧಿ ಸಂಸ್ಥೆ ತುಮಕೂರು, ಮೈ ಚಾಯ್ಸ್ ಫೌಂಡೇಶನ್ ಹೈದರಾಬಾದ್, ಹಾಗೂ ಶಿಕ್ಷಣ ಇಲಾಖೆ, ಪೋಲೀಸ್ ಇಲಾಖೆ ಇವರ ಸಹಯೋಗದಲ್ಲಿ ಹೊದಲೂರು ಗ್ರಾಮದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ಬಗ್ಗೆ ಅರಿವು ಮೂಡಿಸುವ ಸುರಕ್ಷಿತ ಗ್ರಾಮ ಕಾರ್ಯಕ್ರಮ ಆಯೋಜಿಸಲಾಗಿತ್ತು.
 ಅಭಿವೃದ್ಧಿ ಸಂಸ್ಥೆಯ ನರಸಿಂಹಮೂರ್ತಿ ಮಾತನಾಡಿ ಮಹಿಳೆಯರು ಮತ್ತು ಮಕ್ಕಳ ಸಬಲೀಕರಣಕ್ಕಾಗಿ ನಮ್ಮ ಸಂಸ್ಥೆಯಿಂದ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು ಈ ಮಾನವ ಕಳ್ಳ ಸಾಗಾಣಿಕೆ ಬಗ್ಗೆ ತುಮಕೂರು ಜಿಲ್ಲೆಯ ಹಳ್ಳಿಗಳಲ್ಲಿ ಮೈ ಚಾಯ್ಸಸ್ ಫೌಂಡೇಷನ್ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮ ಮಾಡಿ ಜನರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಸ್ಥೆಯ ಶಿವರಾಜು ರವರು ಮಾತನಾಡಿ ಮಾನವ ಕಳ್ಳ ಸಾಗಾಣಿಕೆ ಮಹಿಳೆಯರು ಮೇಲಿನ ದೌರ್ಜನ್ಯಗಳು ಮತ್ತು ಬಾಲ್ಯವಿವಾಹ ತಡೆಗೆ ಸುರಕ್ಷಿತ ಗ್ರಾಮ ಕಾರ್ಯಕ್ರಮ ಆಯೋಜಿಸುತ್ತಿದ್ದು. ತಂದೆ ತಾಯಂದಿರ ಜವಾಬ್ದಾರಿ , ಹೆಣ್ಣು ಮಕ್ಕಳು ತನ್ನ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಅರಿವು ಮೂಡಿಸಿ ಮಾನವ ಕಳ್ಳ ಸಾಗಾಣಿಕೆ ತಡೆಯಲು ಎಲ್ಲರೂ ಜವಾಬ್ದಾರಿಯಿಂದ ಇರಬೇಕು ಎಂದು ತಿಳಿಸಿದರು.
ರಾಜ್ಯ ಸಂಯೋಜಕರಾದ ವಿನಯ್ ಕುಮಾರ್ ರವರು ಮಾತನಾಡಿ ಮಕ್ಕಳಿಂದ ಬಿಟ್ಟಿಯಾಗಿ ದುಡಿಸಿಕೊಳ್ಳಲು, ಅಂಗಾಂಗಗಳ ಜೋಡಣೆಗಾಗಿ ,ಮತ್ತು ಲೈಂಗಿಕವಾಗಿ ಬಳಸಿಕೊಳ್ಳಲು ಮಕ್ಕಳನ್ನು ಟಾರ್ಗೆಟ್ ಮಾಡಿ ಆಸೆ ಆಮಿಷಗಳನ್ನು ತೋರಿಸಿ ನಂಬಿಸಿ ಕರೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ತಮ್ಮಮಕ್ಕಳನ್ನು ಜವಾಬ್ದಾರಿಯುತವಾಗಿ ನೋಡಿಕೊಳ್ಳಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮೈ ಚಾಯ್ಸಸ್ ಫೌಂಡೇಷನ್ ಹೈದರಾಬಾದ್ ಸೋನಿಯಾ, ನಿಂದು, ವೇದ, ಪ್ರಿಯ, ಪೋಲೀಸ್ ಇಲಾಖೆ ಕವಿತ,ಆಶಾಕಿರಣ ಸಂಸ್ಥೆಯ ಬಸವರಾಜು, ಸಿದ್ದರಾಮೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಕಾರ್ಯದರ್ಶಿ ನಂದೀಶ್, ಮುಖ್ಯಶಿಕ್ಷಕರಾದ ಸ್ವಾಮಿ ,ಶಿಕ್ಷಕರಾದ ಪೂರ್ಣಿಮಾ ಹಾಗೂ ಮಕ್ಕಳು,ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.