Friday, 13th December 2024

ಸುಸಜ್ಜಿತ ಹೈಟೆಕ್ ಆಸ್ಪತ್ರೆ ನಿರ್ಮಾಣ

ಗುಬ್ಬಿ: ತಾಲೂಕಿಗೆ ಕೈಗಾರಿಕೆ,ಮಿನಿ ವಿಧಾನಸೌಧ, ಹೈಟೆಕ್ ಆಸ್ಪತ್ರೆ ಆದಷ್ಟು ಬೇಗ ಪ್ರಗತಿಗೆ ಬರಲಿವೆ ಎಂದು ದುಶ್ಯಂತ್ ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಸ್ ಆರ್ ಶ್ರೀನಿವಾಸ್ ರವರ 61ನೇ ಹುಟ್ಟು ಹಬ್ಬದ ಪ್ರಯುಕ್ತ ದಲಿತ ಸಮುದಾಯದ ವತಿಯಿಂದ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ಸಾರ್ವಜನಿಕ ಆಸ್ಪತ್ರೆಗೆ ಕಳೆದ ಬಾರಿ ಮೂರರಿಂದ ನಾಲ್ಕು ಕೋಟಿಗಳಷ್ಟು ಹಣವನ್ನುಬಿಡುಗಡೆ ಮಾಡಿ ಅಭಿವೃದ್ಧಿಪಡಿ ಸಲಾಗಿದೆ. ಇನ್ನು ಆಸ್ಪತ್ರೆಯ ಅಭಿವೃದ್ಧಿಪಡಿಸಲು ಜಾಗದ ಅಭಾವವಿದ್ದು. ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕಾಗಿ ಜಿ ಹೊಸಳ್ಳಿ ಬಳಿ 5 ಎಕರೆ ವಿಸ್ತೀರ್ಣ ಜಾಗ ವನ್ನು ಸರ್ಕಾರಿ ಆಸ್ಪತ್ರೆಗೆ ಮೀಸಲಿಟ್ಟಿದ್ದು  ಸುಸಜ್ಜಿತವಾದ ಹೈಟೆಕ್ ಆಸ್ಪತ್ರೆಯನ್ನು ನಿರ್ಮಾಣ ಮಾಡ ಲಾಗುವುದು ಎಂದು ತಿಳಿಸಿದರು.
ದಲಿತ ಮುಖಂಡ ಕೊಡಿಯಲ ಮಹದೇವ್ ಮಾತನಾಡಿ ಸತತವಾಗಿ ತಾಲೂಕಿನಲ್ಲಿ ಐದು ಬಾರಿ ಜಯಶಾಲಿಯಾಗಿ ಶಾಸಕ ರಾಗಿರುವ ಎಸ್ ಆರ್ ಶ್ರೀನಿವಾಸ್ ರವರ 61ನೇ ಹುಟ್ಟುಹಬ್ಬದ ಪ್ರಯುಕ್ತ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲುಗಳ ವಿತರಿಸುವ ಮೂಲಕ ಹುಟ್ಟು ಹಬ್ಬದ ಸರಳವಾಗಿ  ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿಯಾದ ಬಿಂದು ಮಾಧವ್ , ಮುಖಂಡರಾದ ಕೊಡಿಯಲ ಮಹದೇವ್,  ಚೇಳೂರು ಶಿವನಂಜಪ್ಪ, ಅದಲಗೆರೆ ಈಶ್ವರಯ್ಯ, ಪಣಿಂದ್ರ, ಎನ್ ಎ ನಾಗರಾಜ್, ಬಿಕ್ಕೆಗುಡ್ಡ ಕೃಷ್ಣಪ್ಪ, ಕುಂದರನಹಳ್ಳಿ ನಟರಾಜು, ಲಕ್ಕೇನಹಳ್ಳಿ ನರಸೀಯಪ್ಪ, ರಾಜಣ್ಣ, ಶಿವಮ್ಮ, ಕೋಟೆ ಕಲ್ಲೇಶ್, ರವಿ, ಇತರರು ಹಾಜರಿದ್ದರು.