Saturday, 14th December 2024

ಸೆ.18 ವಿಶ್ವಕರ್ಮ ಜಿಲ್ಲಾ ಜಾಗೃತಿ ಸಮಾವೇಶ: ಗುರು ವಿಶ್ವಕರ್ಮ

ರಾಯಚೂರು: ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜ, ತಾಲ್ಲೂಕು ವಿಶ್ವಕರ್ಮ ಸಮಾಜ ಲಿಂಗಸೂಗುರು ವತಿಯಿಂದ ಶ್ರೀ ಭಗವಾನ್ ವಿಶ್ವಕರ್ಮ ಪೂಜಾ ಮಹೋತ್ಸವ ಅಂಗವಾಗಿ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಸಾಧಕರಿಗೆ ಗೌರವ ಸನ್ಮಾನ, ವಿಶ್ವಕರ್ಮ ಜಿಲ್ಲಾ ಜಾಗೃತಿ ಸಮಾವೇಶವನ್ನು ಸೆ.18 ರಂದು ಹಮ್ಮಿಕೊಳ್ಳಲಾಗಿದೆ ಎಂದು ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಗುರು ವಿಶ್ವಕರ್ಮ ಹೇಳಿದರು.

ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ನಗರದ ಶಂಕರ್ ರೆಡ್ಡಿ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 11 ಗಂಟೆಗೆ ಸಮಾವೇಶವನ್ನು ಹಮ್ಮಿಕೊಳ್ಳ ಲಾಗಿದೆ.

ದಿವ್ಯ ಸಾನಿಧ್ಯವನ್ನು ದೇವದುರ್ಗ ಮದಾನಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠಾಧೀ ಶರು ಮೌನೇಶ್ವರ ಮಹಾಸ್ವಾಮಿಗಳು, ದೇವದುರ್ಗ ಮದಾನಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠಾಧ್ಯಕ್ಷ ಅಜೇಂದ್ರ ಮಹಾಸ್ವಾಮಿಗಳು, ಶಹಾಪೂರು ಮದಾನೆಗುಂದಿ ಸಂಸ್ಥಾನ ಸರಸ್ವತಿ ಪೀಠ ಏಕದಂಡಗಿ ಮಠದ ಶ್ರೀ ಕಾಳಹಸ್ತೇಂದ್ರ ಸ್ವಾಮಿಗಳು, ಕೊಪ್ಪಳ ಶ್ರೀ ಮದಾನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ಶ್ರೀ ನಾಗಮೂರ್ತೆಂದ್ರ ಮಹಾಸ್ವಾಮಿಗಳು, ಯಾದಗಿರಿ ಮದಾನೆಗುಂದಿ ಸಂಸ್ಥಾನ ಪೀಠದ ದೊದ್ದೆಂಡ್ರ ಮಹಾಸ್ವಾಮಿಗಳು ವಹಿಸ ಲಿದ್ದಾರೆ ಎಂದರು.

ಕಾರ್ಯಕ್ರಮ ಉದ್ಘಾಟನೆಯನ್ನು ಲಿಂಗಸುಗೂರು ಶಾಸಕ ಡಿಎಸ್ ಸೂಲಿಗೇರಿ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಬಾಬು ಪತ್ತಾರ್ ವಹಿಸಲಿದ್ದಾರೆ.ಶ್ರೀ ಭಗವಾನ್ವಿಷಕರ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಯನ್ನು ಮಾಜಿ ಸಂಸದ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ ವಿ ನಾಯಕ್ ಮಾಡಲಿದ್ದಾರೆ. ಪ್ರತಿಭಾ ಪುರಸ್ಕೃತರಿಗೆ ಸನ್ಮಾನ ವನ್ನು ವಿಧಾನ ಪರಿಷತ್ ಸದಸ್ಯ ಶರಣಗೌಡ ಬೈಯಪ್ಪರವರು ಮಾಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮೌನೇಶ್ ವಿಶ್ವಕರ್ಮ ನಾಗೇಶ್ ವಿಶ್ವಕರ್ಮ ಸೇರಿದಂತೆ ಇತರರು ಇದ್ದರು.