Friday, 13th December 2024

2021-22 ನೇ ಸಾಲಿನಲ್ಲಿ ನಮ್ಮ ಮಾನವಿ ಸಹಕಾರಿಗೆ 28ಲಕ್ಷ ನಿವ್ವಳ ಲಾಭ : ಹೆಚ್ ಮೌನೇಶ

ಮಾನವಿ : ನಮ್ಮ ಮಾನವಿ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಮಾನವಿ ಎಲ್ಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವವರ ಸಹಕಾರಿಯ ಸದಸ್ಯರೊಂದಿಗೆ 2021-22 ನೇ ಸಾಲಿನಲ್ಲಿ 28ಲಕ್ಷ 28 ಸಾವಿರದ 80ರೂಗಳು ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷರು ಹಚ್ ಮೌನೇಶ ಹೇಳಿದರು,

ಪಟ್ಟಣದ ನಮ್ಮ ಮಾನವಿ ಸಹಕಾರಿಯ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಸಹಕಾರಿಗಳ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ಮತ್ತು ಅತ್ಯುತ್ತಮ ಗ್ರಾಹಕ ರಿಗೆ ಮತ್ತು ಅತಿಥಿಗಳಿಗೆ ಸನ್ಮಾನಿಸಿದರು.

ನಮ್ಮ ಮಾನವಿ ಪತ್ತಿನ ಸೌಹಾರ್ದ ಸಹಕಾರಿಯು ಆರ್ಥಿಕ ಪ್ರಗತಿಗೆ ಸಹಕಾರಿಯ ಸದಸ್ಯರು ನೆಡೆಸಿದ ವಹಿವಾಟು ಹಾಗೂ ಸಕಾಲದಲ್ಲಿ ಸಾಲದ ಮರುಪಾವತಿ ಪ್ರಮುಖ ಕಾರಣವಾಗಿದೆ ಹಾಗೂ ನಮ್ಮ ಸಹಕಾರಿಯಲ್ಲಿನ ಸಿಬ್ಬಂದಿಯ ತ್ವರಿತ ಸೇವೆ ಹಾಗೂ ಇ ಸ್ಟಾಪ್ ಮಿನಿ ಎ ಟಿ ಎಂನ್ನೂ ಮತ್ತು ಎಸ್.ಎಂ.ಎಸ್ ಸೌಲಭ್ಯ ಹೊಂದಿದೆ. ಅದರಂತೆ ನಮ್ಮ ಮಾನವಿ ಪದವಿ ಕಾಲೇಜಿನಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸಹಕಾರಿ ವಂತಿಯಿಂದ ಸನ್ಮಾನ ಮಾಡಿ ಪ್ರೋತ್ಸಾಹಿಸಲಾಯಿತು. ವಿದ್ಯಾರ್ಥಿಗಳು ಕುಮಾರಿ ಹೀನಾ ಜಬೀನ 90%, ಕುಮಾರಿ ಸರಸ್ವತಿ 90%, ಸನ್ಮಾನಿಸಿದರು.

ಈ ಸಭೆಯಲ್ಲಿ ಮುಖ್ಯಅತಿಥಿಗಳಾದ ಅತಿಥಿಗಳಾದ ವೀರನಗೌಡ ವಕೀಲರು ಕಾನೂನು ಸಲಹೆಗಾರರು ಮತ್ತು ಸಹಕಾರಿಯ ಆಡಳಿತ ಮಂಡಳಿಯವರಾದ ಹೆಚ್ ಮೌನೇಶ ಅಧ್ಯಕ್ಷರು, ಅಮರೇಶ ಡಿ ಉಪಧ್ಯಕ್ಷರು, ಹಾಗೂ ನಿರ್ದೇಶಕರು ಗಂಗಾಧರಸ್ವಾಮಿ, ಶಿವಪ್ಪ ಮಾಲಿಪಾಟೀಲ್‌, ನಾಗರಾಜ್ ಬಿಚ್ಚಾಲಿ, ಅಮತ್ಯಪ್ಪ ಶ್ರೀ ಜಲಂದ‌, ಪಂಪಣ್ಣ, ಅಮರಪ್ಪ ಶ್ರೀಮತಿ ಮೀನಾಕ್ಷಿ ಶ್ರೀಮತಿ ಈರಮ್ಮ ಮಂಜುನಾಥ ಎ, ಹಾಗೂ ಸಹಕಾರಿಯ ಮುಖ್ಯಕಾರ್ಯನಿರ್ವಾಹರು ಮಂಜುನಾಥ್ ಹೆಚ್, ಮಾನವಿ ಶಾಖೆಯ ವ್ಯವಸ್ಥಾಪಕರು ರಾಜಶೇಖರ, ಅಧಿಕಾರಿ ಗಳು ಕುಮಾರಿ ಉಷಾ, ಕುಮಾರಿ ಗೌರಿ ಶ್ರೀಮತಿ ರಾಧಮ್ಮ, ರಮೇಶ, ಸುರೇಶ, ಶರಣಬಸವ, ಶಿವಕುಮಾರ ಮತ್ತು ಇಬ್ರಾಂಪುರ ಶಾಖೆಯ ವ್ಯವಸ್ಥಾಪಕರು, ಎಸ್ ಕೆ ಮಹಾಲಿಂಗ, ಕುಮಾರಿ ಶಾಲಿನಿ ಸುಧಕರ್ ಗೌಡ, ಬಸವರಾಜ, ಮೃತ್ಯುಂಜಯ, ಶರಣಬಸವ ಹಾಗೂ ಸಹಕಾರಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.