ಬಾಗೇಪಲ್ಲಿ: ಶುಕ್ರವಾರ ಹನುಮ ಜಯಂತಿ ಹಿನ್ನೆಲೆಯಲ್ಲಿ ಪಟ್ಟಣ ಬಯಲಾಂಜನೇಯ ಸ್ವಾಮಿ ದೇವಾಲಯ ಸೇರಿ ದಂತೆ ತಾಲೂಕಿನ ಹನುಮ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.ದೇವರಿಗೆ ವಿಶೇಷ ತುಳಸಿ, ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಈ ಬಗ್ಗೆ ಪುರಸಭೆಯ ಮಾಜಿ ಅಧ್ಯಕ್ಷ ನರಸಿಂಹಾನಾಯ್ಡುರವರು ಮಾತನಾಡಿ, ಹನುಮಾನ್ ದೇವರು ನಾಡಿನ ಎಲ್ಲರಿಗೆ ಒಳಿತು ಮಾಡಲಿ, ಕಾಲ ಕಾಲಕ್ಕೆ ಉತ್ತಮ ಮಳೆ, ಬೆಳೆಗಳಾಗಿ ರೈತಾಪಿ ಜನರ ಜೀವನ ಸುಧಾರಣೆಯಾಗಲಿ ಎಂದರು.
ಇದೇ ವೇಳೆ ಅರ್ಚಕ ಶೇಷುರವರ ನೇತೃತ್ವದಲ್ಲಿ ಬಯಲಾಂಜನೇಯ ದೇವರಿಗೆ ಮುಂಜಾನೆಯಿಂದ, ಮುಸ್ಸಂಜೆ ಯವರೆಗೂ ವಿಶೇಷ ಪೂಜೆಗಳನ್ನು ಜರುಗಿದವು. ಈ ವೇಳೆ ಮಾತನಾಡಿದ ಅವರು, ಆಂಜನೇಯನು ಸೀತಾ ದೇವಿ ಯನ್ನು ಕಾಣುವವರೆಗೂ ಆಹಾರ ಸೇವಿಸದೇ ವ್ರತವನ್ನು ಆಚರಿಸುತ್ತಾನೆ. ನಂತರ ಸೀತಾದೇವಿಯನ್ನು ನೋಡಿ, ಅಲ್ಲಿನ ವನದಲ್ಲಿದ್ದ ಫಲಗಳನ್ನು ಸೇವಿಸುತ್ತಾನೆ. ಅದರ ನಿಮಿತ್ತ ಹನುಮ ಜಯಂತಿ ಆಚರಿಸಿಕೊಂಡು ಬರಲಾಗು ತ್ತಿದೆ ಎಂದರು.
ಬಿಳ್ಳೂರು ಪ್ರಸನ್ನಾಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ
ತಾಲೂಕಿನ ಬಿಳ್ಳೂರು ಪ್ರಸನ್ನಾಂಜನೇಯ ದೇವಾಲಯದಲ್ಲಿ ದೇವಾಲಯದ ಟ್ರಸ್ಟ್ ನ ಅಧ್ಯಕ್ಷ ಬಿಳ್ಳೂರು ನಾಗರಾಜ ರವರ ನೇತೃತ್ವದಲ್ಲಿ ವಿಶೇಷವಾದ ಪೂಜೆಯನ್ನು ನಡೆಸಲಾಯಿತು. ಇದೇ ವೇಳೆ ನಿವೃತ್ತ ಗ್ರಂಥಪಲಾಕ ವೆಂಕಟ ರಮಣ ನಾಯಕ್ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಎನ್.ಸೂರ್ಯಾನಾರಣ, ಸೂರ್ಯನಾರಾಯಣರೆಡ್ಡಿ, ಎನ್ ಕೆ.ಎಂ.ಚನ್ನ ಕೇಶವ, ಎಸ್.ಜಿ.ಚಂದ್ರಶೇಖರ್, ಟಿ.ನ್ ಗಂಗಾಧರ್, ಕೆ ಶ್ರೀನಿವಾಸ್, ಶಿವಣ್ಣ ಸ್ವಾಮಿ, ಡಿ ವೆಂಕಟರಮಣ ನಾಯಕ್ ಮತ್ತಿತರರು ಇದ್ದರು.